ದೇವಿ ಪುರಾಣ ಮಾನವ ಜನ್ಮದ ಶುದ್ದತೆಗೆ ಪ್ರತಿಯೊಬ್ಬರೂ ಅರಿಯಬೇಕು- ಸಿದ್ದಿವಿನಾಯಕ ಪಾಟೀಲ್

ಸಂಡೂರು ಲ:26:ದೇವಿಯ ಪುರಾಣದಲ್ಲಿ ಪ್ರಮುಖವಾಗಿ ಮಾನವ ಜನ್ಮದ ಕೊಳೆಯನ್ನು ನಾಶಮಾಡಿ ಶುದ್ದಮಾಡುವ ಮೂಲಕ ಸರಿದಾರಿಗೆ ತರುವಂತಹ ಅಂಶವೇ ಅಗಿದೆ, ಅದ್ದರಿಂದ ದೇವಿಯ ಅರಾಧನೆಯನ್ನು ಮಾಡುವ ಮೂಲಕ ಪುರಾಣ ಅರಿತು ಸರಿದಾರಿಯಲ್ಲಿ ನಡೆಯಬೇಕು ಎಂದು ಪುರಾಣ ಪ್ರವಚಕ ಸಿದ್ದಿವಿನಾಯಕ ಪಾಟೀಲ್ ತಿಳಿಸಿದರು.
ಅವರು ಪಟ್ಟಣದ ತಾಯಮ್ಮ ದೇವಸ್ಥಾನದ ಅವರಣದಲ್ಲಿ ಒಂಭತ್ತು ದಿನಗಳ ಪುರಾಣ ಕಾರ್ಯಕ್ರಮದಲ್ಲಿ ಪ್ರವಚನ ಮಾಡಿ ಮಾತನಾಡಿ ಪ್ರತಿಯೊಬ್ಬ ಮನುಷ್ಯನು ಸಹ ಕಾಮ, ಕ್ರೋಧ, ಮದ, ಮತ್ಸರ, ಲೋಭ ಗುಣಗಳನ್ನು ಹೊಂದಿದ್ದು ಈ ಎಲ್ಲಾ ಅಂಶಗಳು ಮನುಷ್ಯನ ವೈರಿಗಳಾಗಿವೆ, ಇವುಗಳ ನಿಗ್ರಹ ಶಕ್ತಿಯನ್ನು ಪಡೆಯಬೇಕಾದರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಗಳಾಗುವ ಮೂಲಕ ಹಿಡಿತವನ್ನು ಸಾಧಿಸಬೇಕು, ಈ ರೀತಿಯ ಸಾಧನೆಯೇ ದುಷ್ಟ ರಾಕ್ಷಸರ ಸಂಹಾರವಾಗಿದೆ, ಅದ್ದರಿಂದ ರಾಕ್ಷಸಿ ಗುಣಗಳನ್ನು ಮನುಷ್ಯ ಹೊಂದದೆ, ಉತ್ತಮಗುಣಗಳನ್ನು ಬೆಳೆಸಿಕೊಳ್ಳಬೇಕು, ಇದರಿಂದ ಪ್ರತಿಯೊಬ್ಬರು ಸಮಾನರು, ಉತ್ತಮ ಬದುಕನ್ನು ಸಾಗಿಸಲು ಸಾಧ್ಯವಾಗುತ್ತದೆ, ಅದ್ದರಿಮದ ಸತಿಪತಿಗಳು ಒಂದಾದ ಭಕ್ತಿ ಹಿತ ಒಪ್ಪುವುದು ಶಿವನಿಗೆ ಎನ್ನುವಂತೆ ಸತಿಪತಿಗಳು ಒಂದಾಗಿ ಭಕ್ತಿಯಿಂದ ದೇವಿಯ ಪೂಜೆಯನ್ನು ಸಲ್ಲಿಸುವ ಮೂಲಕ ಕುಟುಂಬದ ರಕ್ಷಣೆಯ ಜೊತೆಗೆ ಅಭಿವೃದ್ದಿಯನ್ನು ಹೊಂದಲು ಸಾಧ್ಯ, ಮಾನಸಿಕ ನೆಮ್ಮದಿ ಹತ್ತಾರು ಕಾಯಿಲೆಗಳಿಂದ ದೂರ ಉಳಿಯುತ್ತದೆ, ಅದ್ದರಿಂದ ಪ್ರತಿಯೊಬ್ಬರೂ ಸಹ ಒತ್ತಡದ ಬದುಕಿನಿಂದ ಹೊರಬರಬೇಕಾದರೆ ಇಂತಹ ಧಾರ್ಮಿಕ ಕಾರ್ಯಕ್ರಮಗಳಾದ ಪುರಾಣ, ಪೂಜೆ, ಹೋಮ, ಹವನ ಕಾರ್ಯಕ್ರಮಗಳಲ್ಲಿ ಭಾಗಿಗಳಾಗಬೇಕು ಎಂದರು.
ಕಾರ್ಯಕ್ರಮವನ್ನು ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮಿಗಳು ಚಾಲನೆ ನೀಡಿದರು, ಗಂಗಾಧರ ದೇವರು ಸಾನಿಧ್ಯವಹಿಸಿದ್ದರು, ಅಲ್ಲದೆ ತಾಯಮ್ಮ ದೇವಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಕಲವಿದರಾದ ಹೆಚ್.ಕುಮಾರಸ್ವಾಮಿ ತಬಲ ಸಾಥ್ ನೀಡುವ ಮೂಲಕ ಪುರಾಣಕ್ಕೆ ಮೆರಗನ್ನು ತಂದರು. ಭಕ್ತರು ಎಂದಿನಂತೆ ನಿತ್ಯ ವಿಶೇಷ ಪೂಜೆಯನ್ನು ಸಲ್ಲಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು