ದೇವಿ ನಗರದಲ್ಲಿ ಸರಣಿಗಳ್ಳತನಮಾಳಿಗೆ ಮೇಲೆ ಮಲಗಿದ್ದಾಗ ಬೀಗ ಮುರಿದು 6 ಮನೆ ಕಳವು

ಕಲಬುರಗಿ,ಮೇ.12-ಮಾಳಿಗೆ ಮೇಲೆ ಮಲಗಿದ್ದಾಗ ಬೀಗ ಮುರಿದು 6 ಮನೆಗಳ ಕಳ್ಳತನ ಮಾಡಿರುವ ಘಟನೆ ರಾಘವೇಂದ್ರ ನಗರ (ಆರ್.ಜಿ.ನಗರ) ಪೊಲೀಸ್ ಠಾಣೆ ವ್ಯಾಪ್ತಿಯ ದೇವಿ ನಗರದಲ್ಲಿ ನಡೆದಿದೆ.
ಒಟ್ಟು 6 ಮನೆಗಳಲ್ಲಿ ಕಳ್ಳತನವಾಗಿದ್ದು ಒಂದು ಮನೆಯಲ್ಲಿ 2 ತೊಲೆ ಬಂಗಾರ ಕಳವಾಗಿದೆ ಎಂದು ತಿಳಿದುಬಂದಿದೆ.
ಬೇಸಿಗೆ ಧಗೆಯ ಕಾರಣಕ್ಕೆ ಮನೆಗೆ ಬೀಗ ಹಾಕಿಕೊಂಡು ಮಾಳಿಗೆ ಮೇಲೆ ಮಲಗಿದ್ದಾಗ ಈ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದ್ದು, ಸುದ್ದಿ ತಿಳಿದು ರಾಘವೇಂದ್ರ ನಗರ ಪೊಲೀಸರು, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.