ದೇವಿಯ 38 ನೇ ಮೂರ್ತಿ ಸ್ಥಾಪನೆ ಅದ್ದೂರಿ ಉತ್ಸವ

ಶಹಾಬಾದ್:ಜೂ.27:ನಗರದ ಶ್ರೀಜಗದಂಬಾ ದೇವಸ್ಥಾನದಲ್ಲಿ ಜೂನ್ 20 ರಿಂದ ದೇವಿಯ 38 ನೇ ಮೂರ್ತಿ ಸ್ಥಾಪನೆ ಉತ್ಸವ ನಿಮಿತ್ತ ವಿಶೇಷ ಪೂಜೆ, ಶ್ರೀಮದ ಭಾಗವತ ಕಥಾ ಸಪ್ತಾಹವನ್ನು ಪುಣೆಯ ಪ್ರಸಿದ್ಧ ಕಥಾಕಾರರು ಚಂದ್ರಕಾಂತ ಮಹೇಂದ್ರಕರ್ ಅವರಿಂದ ನಡೆಯಿತು. ನಿತ್ಯ ವಿವಿಧ ಭಜನಾ ತಂಡಗಳಿಂದ ವಿಶೇಷ ಭಜನೆ ಕಾರ್ಯಕ್ರಮ ನಡೆಯಿತು.

ಸೋಮವಾರ ಬೆಳಗ್ಗೆ 6 ಗಂಟೆಗೆ ಅಭಿಷೇಕ, ನಂತರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ ನಡೆಯಿತ್ತು. ಮಧ್ಯಾಹ್ನ ಮಹಿಳೆಯರು ನೂರಾರು ಮಹಿಳೆಯರು ಕುಂಬ ಹೊತ್ತು, ವಾದ್ಯದೊಂದಿಗೆ ದೇವಿಯ ಜಯಘೋಷಣೆ ಮಾಡುವ ಮೂಲಕ ನಗರದ ವಿವಿಧ ರಸ್ತೆಯ ಮೂಲಕ ನಗರದಲ್ಲಿ ಪಲ್ಲಕ್ಕಿಯೊಂದಿಗೆ ಭವ್ಯ ಮರವಣಿಗೆ ನಡೆಯಿತು.

ಜೂನ 23 ರಿಂದ ಪ್ರಾರಂಭವಾದ ಕೃಷ್ಣ ಜನ್ಮಚರಣೆ, ಗೋವರ್ಧನ ಪೂಜೆ ಹಾಗೂ ಕೃಷ್ಣ ರಾಸಲೀಲಾ, ಕೃಷ್ಣ ರುಕ್ಮೀಣಿ ಸ್ವಯಂವರ ನಡೆಯಿತು.

26ಕ್ಕೆ ಬೆಳಗ್ಗೆ ಜಗದಂಬಾ ದೇವಿಗೆ ಅಭಿಷೇಕ, ಹೋಮ ಹವನ, ಪಲ್ಲಕ್ಕಿ ಮೆರವಣಿಗೆ, ದೇವಿಯ ಮಹಾಮಂಗಳಾರತಿ ಗೋಪಾಲ ಕಾಲಾ ಧೈಹಂಡಿ ಹಾಗೂ ನಗರ ಪ್ರದಕ್ಷಣೆ ನೆರವೇರಿತು.

ದೇವಸ್ಥಾನ ಸಮಿತಿಯ ಅಧ್ಯಕ್ಷ ದತ್ತಾತ್ರೇಯ ಜಿಂಗಾಡೆ, ಡಾ.ಅಶೋಕ ಜಿಂಗಾಡೆ, ರಮೇಶ ಅಷ್ಟೇಕರ, ಅನಿಲ ಹಿಬಾರೆ, ಸಂತೋಷ ಪುಲಸೆ, ಸುನೀಲ ಭಗತ, ನಾಗನಾಥ ಮಹೇಂದ್ರಕರ, ಸಚಿನ ಹಂಚಾಟೆ, ರಾಹುಕ ಕಮಿತಕರ್, ಅಂಬ್ರೇಷ ಪುಲಸೆ, ಅನುರಾಧ ಪುಲಸೆ, ರಾಹುಲ, ಕನಕಪ್ಪ ದಂಡಗುಲಕರ್, ಜಗದಂಬಾ ದೇವಸ್ಥಾನ ಮಹಿಳಾ ಸಂಘದ ಪದಾಧಿಕಾರಿಗಳೂ, ವಿವಿಧ ಸಮಾಜದ ಮಹಿಳೆಯರು ಪಾಲ್ಗೊಂಡಿದರು.


” ಶ್ರೀ ಜಗದಂಬಾ ದೇವಿಯ 38 ನೇ ಮೂರ್ತಿ ಸ್ಥಾಪನೆ ಉತ್ಸವದ ನಿಮಿತ್ತ ಜೂನ್ 20 ರಿಂದ 26ರ ವರೆಗೆ ವಿವಿಧ ಕಾರ್ಯಕ್ರಮಗಳು ಹಾಗೂ ಪ್ರತಿ ದಿನ ಸಂಜೆ ಶ್ರೀಮದ ಭಾಗವತ ಕಥಾ ನಡೆಯಿತು. ವಿಶೇಷ ಪೂಜೆ, ಅಲಂಕಾರ, ಮಹಿಳೆಯರು ಅಸಕ್ತಿಯಿಂದ ಸಲಕ ಕಾರ್ಯಕ್ರಮದಲ್ಲಿ ಬಾಗವಹಿಸುವ ಮೂಲಕ ಈ ಬಾರಿ ಅದ್ದೂರಿಯಾಗಿ ಕಾರ್ಯಕ್ರಮ ನೆರವೇರಿತು.

ದತ್ತಾತ್ರೇಯ ಜಿಂಗಾಡೆ. ದೇವಸ್ಥಾನ ಸಮಿತಿ.