ದೇವಿಯ ಸ್ಮರಣೆಯಿಂದ ದುಃಖ ದುಮ್ಮಾನ ದೂರ

ತಾಳಿಕೋಟೆ:ಮಾ.13: ಈ ಮಾನವನ ದೇಹಕ್ಕೆ ಅರೀವು ಎಂಬುದು ಬರಬೇಕಾದರೆ ಶರಣರ ನಡೆ ನುಡಿ ಆಲಿಸಿ ಪಾಲಿಸಬೇಕು ಮೋಹ ಮತ್ಸರ ತುಂಬಿಕೊಂಡಂತಹ ದೇಹದಲ್ಲಿ ನಾನು ಎಂಬ ಅಹಂಭಾವನೆಯ ದರ್ಪ ತುಂಬಿಕೊಂಡಿರುತ್ತದೆ ಕಾರಣ ಮಾನವರಾದ ನಾವು ನಾನೆಂಬುದು ಬಿಡಬೇಕು ಇಲ್ಲದಿದ್ದರೆ ಈ ಜನ್ಮಕ್ಕೆ ನರಕ ಪ್ರಾಪ್ತಿಯಾಗುತ್ತದೆ ಎಂದು ಆಲೂರಿನ ಪುರಾಣ ಪ್ರವಚನಕಾರರಾದ ವೇ.ಸಂಗಯ್ಯ ಹಿರೇಮಠ ಅವರು ನುಡಿದರು.
ಸಾಂಭ ಪ್ರಭು ಶರಣ ಮುತ್ಯಾರವರ ಜರುಗಲಿರುವ ಜಾತ್ರೋತ್ಸವ ಕುರಿತು ಮಂಗಳವಾರರಂದು ಜರುಗಿದ 2ನೇ ದಿನದಂದು ಸುಕ್ಷೇತ್ರ ಅಂಕಲಗಿ ಶ್ರೀ ಗುರು ನಿರೂಪಾದೀಶ್ವರರ ಮಹಾ ಪುರಾಣ ಪ್ರವಚನದಲ್ಲಿ ಮಾತನಾಡುತ್ತಿದ್ದ ಅವರು ರಾಯಚೂರ ಜಿಲ್ಲೆಯ ತಪ್ಪಲದಿನ್ನಿ ಎಂಬ ಮನೆತನದಲ್ಲಿ ಗುರುಲಿಂಗ ಎನ್ನುವವರು ಆಚಾರ ವಿಚಾರದೊಂದಿಗೆ ನಿತ್ಯ ಕಾಯಕ ಜೋಳಿಗೆ ತೆಗೆದುಕೊಂಡು ಹಿಟ್ಟಿನ ಬಿಕ್ಷಾಟನೆಗಾಗಿ ಶ್ರೀ ದೇವಿಯ ಪಠಣ ಮಾಡುತ್ತಾ ತಮ್ಮ ಚಾತುರ್ಯತನದಿಂದ ಶಿಷ್ಯರ ಆಗು ಹೋಗುಗಳನ್ನು ವಿಚಾರಿಸುತ್ತಾ ಸಾಗುತ್ತಾರೆ ದೇವಿಯ ವಲುಮೆ ಪಡೆದ ಇವರಿಗೆ ಯಾವುದೇ ದುಃಖ ದುಮ್ಮಾನ ಬರದಂತೆ ಮಾಡುತ್ತಾಳೆ ಇದನ್ನು ಅರೀತ ಗುರುಲಿಂಗಯ್ಯನವರು ನಿತ್ಯ ಶ್ರೀ ದೇವಿಯ ಭಕ್ತಿಯೊಂದಿಗೆ ಮುಂದಾಗುತ್ತಾರೆ ಇದನ್ನು ಲಕ್ಷೀಸಿದ ಗುರುಮೂರ್ತಿದೇವರು ಎಂಬವರು ತಪ್ಪಲದಿನ್ನಿಗೆ ಬಂದು ತಮ್ಮ ಮಗಳಾದ ರಾಚಮ್ಮಳಿಗೆ ಗುರುಲಿಂಗಯ್ಯ ಎಂಬವರು ತಕ್ಕ ವರವಾಗಿದ್ದಾರೆಂದು ಭಾವಿಸಿ ಅವರೊಂದಿಗೆ ವಿವಾಹ ಮಾಡಲು ಮುಂದಾಗುತ್ತಾರೆ ಸತಿ ಪತಿ ಒಂದಾದರೆ ಏನೆಲ್ಲಾ ನಡೆಯುತ್ತದೆ ಅಂತಹ ಪತ್ನಿಯನ್ನು ಪಡೆಯಬೇಕೆಂಬ ಅಪೇಕ್ಷೆಯೊಂದಿಗೆ ಗುರುಲಿಂಗಯ್ಯನವರು ರಾಚಮ್ಮನವರಲ್ಲಿ ಹೋಗುತ್ತಾರೆ ಗುರುಲಿಂಗಯ್ಯನವರು ಬಕ್ಷಾಟನೆ ಮಾಡಿದ್ದರಲ್ಲಿ ತಮ್ಮ ಮಠದಲ್ಲಿ ಸದಾ ಪ್ರಸಾದ ಮಾಡುತ್ತಾ ಸಾಗುತ್ತಾರೆ ಹರ ಮುನಿದರೆ ಗುರು ಕಾಯುವವನು ಎಂಬಂತೆ ಗುರುಲಿಂಗಯ್ಯನವರು ತಮ್ಮ ಗುರುವಿನ ಸ್ಥಾನ ಮಾನ ತಕ್ಕಂತೆ ಮುನ್ನಡೆಯುತ್ತಾರೆಂದು ಶ್ರೀಗಳು ನುಡಿದರು. ಕ್ಷಣದಲ್ಲಿ ಗುರು ಎಂಬವರ ವಚನವನ್ನು ಆಲಿಸಿದರೆ ಮುಕ್ತಿಯಾಗುತ್ತದೆ ಕಾಯಾ ವಾಚಾ ಮನಸಾರೆಯಾಗಿ ಗುರುವಿನ ವಿಚಾರ ಆಲಿಸಿದರೆ ಮುಕ್ತಿಯು ನರರಿಗೆ ದೊರೆಯುತ್ತದೆ ಎಂಬುದರ ಕುರಿತು ಗುರು ಗೋವಿಂದ ಬಟ್ಟರ ಹಾಗೂ ಶಿಷ್ಯರಾದ ಶರೀಪ ಸಾಹೇಬರ ಕುರಿತು ಗುರು ಶಿಷ್ಯರ ಸಂಬಂದ ಹೇಗಿತ್ತೆಂಬುದರ ಕುರಿತು ನೆರೆದ ಭಕ್ತ ಸಮೂಹಕ್ಕೆ ತಿಳಿ ಹೇಳಿದ ಶ್ರೀಗಳು ಈ ದೇಹಕ್ಕೆ ಆಚಾರ ವಿಚಾರ ಬೇಕು ಈ ಎಲ್ಲವನ್ನು ಮರೆತಕ್ಕಂತಹ ದೇಹಕ್ಕೆ ತುಂಬಿದ ಬಂಡೆ ಎನ್ನಲಾಗುತ್ತದೆ ಎಂದು ರೂಪ, ರಸ, ಗಂದ, ಎಂಬ ಪಂಚೇಂದ್ರಿಗಳ ಕುರಿತು ತಿಳಿಸಿದ ಅವರು ಈ ಪಂಚೇಂದ್ರಿಗಳ ಹೊಂದಿದ ಮನುಜ ಬಹಳೇ ಕಾಳಜಿ ಪೂರ್ವಕವಾಗಿ ಜೀವನ ನಡೆಸಬೇಕೆಂದರು.
ರೂಪ ಎಂಬುವದಕ್ಕೆ ಪತಂಗ ಮುಂದಾಗಿ ಆಹುತಿಯಾಗುತ್ತದೆ ರಸಕ್ಕಾಗಿ ಮೀನ ಆಹುತಿಯಾಗುತ್ತದೆ ಗಂದ ಸುವಾಸನೆಗಾಗಿ, ದುಂಬಿ ಸುಗಂದ ಹೀರಲು ಹೋಗಿ ಎಲೆಯಲ್ಲಿ ಮುಚ್ಚಿಕೊಂಡು ಜೀವ ತೆತ್ತುತ್ತದೆ ಶಬ್ದಕ್ಕೆ ಶಬ್ದದ ನಾದಕ್ಕೆ ಮೈ ಮರೆತ ಹಾವು, ಹಾವುಗಾರನ ಹಿಡಿತದಲ್ಲಿ ಒಳಗಾಗಿ ಆಹುತಿಯಾಗುತ್ತದೆ ಸ್ಪರ್ಷಕ್ಕಾಗಿ ಆನೆ ಆಹುತಿಯಾಗುತ್ತದೆ ಇಂತಹ ಪಂಚೇಂದ್ರಿಗಳನ್ನು ದೇವರು ನಮ್ಮಲ್ಲಿ ಕೊಟ್ಟಿದ್ದಾನೆ ಈ ಎಲ್ಲ ಇಂದ್ರಿಗಳನ್ನು ಗುರುಲಿಂಗಯ್ಯ ರಾಚಮ್ಮನವರು ಬಾಯ ಇಂದ್ರಿಗಳನ್ನು ಅಳೆದು, ಸೌಕ್ಯ ಇಂದ್ರಿಗಳನ್ನು ಮಾಡಿಕೊಂಡಿದ್ದರೆಂದು ಶ್ರೀಗಳು ಹೇಳಿದರು.
ಈ ಇಬ್ಬರು ಸತಿ ಪತಿಯರಿಗೆ ಅಪೇಕ್ಷೆಯಂತೆ ವಿರುಪಾಕ್ಷೇಶ್ವರರ ಕೃಪೆ ಇದ್ದರೆ ಮಕ್ಕಳ ಆಗುತ್ತವೆ ಎಂಬುದನ್ನು ಅರೀತ ಅವರು ಮಕ್ಕಳು ಜನ್ಮ ತಾಳಿದರೆ ಜಗತ್ತಿನ ಕೀರ್ತಿ ಬೆಳಗುವಂತಾಗಬೇಕೆಂಬುದನ್ನು ಪತ್ನಿ ರಾಚಮ್ಮ ಪತಿ ಗುರುಲಿಂಗಯ್ಯನವರಿಗೆ ಹೇಳುತ್ತಾರೆ ಮಾನವರಾದ ನಾವು ತಾಯಿ ಗರ್ಭದಿಂದ ಹೊರಬಂದಿದ್ದೇವೆ ಪರಮಾತ್ಮನಿಗೆ ಮಾತುಕೊಟ್ಟು ಬಂದಿದ್ದೇವೆ ಭಕ್ತ ಮಾರ್ಕಂಡಯ್ಯ ದೇವನ ವಲುಮೆ ಪಡೆದಂತೆ ದೀರ್ಘಾಯುಷ್ಯವನ್ನು ಪಡೆಯುವಂತಹ ಮಗ ಜನ್ಮ ತಾಳಬೇಕೆಂಬ ಅಪೇಕ್ಷೆ ರಾಚಮ್ಮನವರದ್ದಾಗಿತ್ತೆಂದು ಶ್ರೀಗಳು ನುಡಿದರಲ್ಲದೇ ರಾಮದಾಸ ಮಹಾರಾಜರು ಕನ್ಯ ನೋಡಲು ಹೊರಟಾಗ ದುಗ್ಗಳಾದೇವಿ ತಾಯಿ ಹತ್ತಿರ ಹೋಗಿ ತಾವು ಜೋಳಿಗೆಯಲ್ಲಿ ಹಾಕಿಕೊಂಡು ಹೋಗಿದ್ದ ಉಸುಕು, ಅದರ ಜೊತೆ ಮಿಶ್ರಿತ ಅಕ್ಕಿ ಜೊತೆಗೆ ಕಬ್ಬಿನ ಗಣಿಕಿ, ಈ ಎಲ್ಲವನ್ನು ಒಯ್ದು ಆಕೆಗೆ ತಿಳಿಸಿ ಅನ್ನವನ್ನು ಮಾಡಬೇಕು ಈ ಅನ್ನಕ್ಕೆ ನೀರು ಹಾಕಬಾರದು ಬೆಂಕಿ ಹಚ್ಚಬಾರದು ಇದೆಲ್ಲವೂ ನಡೆಯದೇ ಅನ್ನ ಮಾಡಿಕೊಡುವಂತಹ ಪತ್ನಿ ನನಗೆ ಬೇಕೆಂದಾಗ ದುಗ್ಗಳಾದೇವಿ ನಾನು ಮಾಡಿಕೊಡುತ್ತೇನೆಂದು ಮುಂದಾಗಿ ಉಸುಕು ಮಿಶ್ರಿತ ಅಕ್ಕಿಯನ್ನು ಬಿಸಿಲೆಂಬ ಅಗ್ನಿಯಲ್ಲಿ ಹಾಕಿ ಕಬ್ಬಿನ ಗಣಕಿಯಲ್ಲಿದ್ದ ರಸವನ್ನು ನೀರಿನಂತೆ ಈ ಉಸುಕು ಮಿಶ್ರಿತ ಅಕ್ಕಿಯ ಮೇಲೆ ಹಾಕಿದಾಗ ಅಕ್ಕಿ ಅನ್ನ ತಯಾರಾಗಿ ಮೇಲೆ ಬರುತ್ತದೆ ಅಂತಹ ಜ್ಞಾನಿಷ್ಠ ಪತ್ನಿಯನ್ನು ರಾಮದಾಸ ಮಹಾರಾಜರು ಪರಿಕ್ಷೆಯೊಂದಿಗೆ ನಿರ್ಣಯಿಸಿಕೊಂಡು ವಿವಾಹ ಆಗಿದ್ದರ ಕಥೆಯೊಂದನ್ನು ವಿವರಿಸಿದ ಶ್ರೀಗಳು ಮಹಾ ಶರಣ ಶರಣಮುತ್ಯಾರವರ ಹಾಗೂ ಶ್ರೀ ಖಾಸ್ಗತೇಶ್ವರರ ಕೆಲವು ಪವಾಡ ದೃಶ್ಯಗಳನ್ನು ನೆರೆದ ಭಕ್ತ ಸಮೂಹದ ಮುಂದೆ ವಿವರಿಸಿ ಮನವರಿಕೆ ಮಾಡಿದರು.
ವೇದಿಕೆಯ ಮೇಲೆ ಬಸಣ್ಣಮುತ್ಯಾ ಶರಣರ, ಶರಣಪ್ಪಮುತ್ಯಾ ಶರಣರ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಶರಣಗೌಡ ಪೊಲೀಸ್‍ಪಾಟೀಲ, ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಶ್ರೀಮತಿ ಕಾಶಿಬಾಯಿ ಶರಣರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.