ದೇವಿಗೆ ಉಡಿ ತುಂಬುವ ಕಾರ್ಯಕ್ರಮ

ಮುದಗಲ್,ಮಾ.೨೯- ಲಿಂಗಸೂರು ತಾಲೂಕಿನ ಮುದಗಲ್ಲ ವಾಡ್೯ ನಂಬರ್ ೬ ನಲ್ಲಿ ಕುಂಬಾರ ಓಣಿಯಲ್ಲಿ ಶ್ರೀ ಶೀಲವಂತಮ್ಮ ದೇವಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಗೀತಾ ಕರಿಯಪ್ಪ ವಜ್ಜಲ್ ನೆರವೇರಿಸಿದರು.
ನಂತರ ೧೦೦ ಹೆಚ್ಚು ಜನ ಮಹಿಳೆಯರನ್ನು ಗೀತಾ ಕರಿಯಪ್ಪ ವಜ್ಜಲ್ ಅವರು ಬಿಜೆಪಿಯ ಶಾಲು ಹಾಕಿ ಪಕ್ಷಕ್ಕೆ ಮಹಿಳೆಯರುನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮುದಗಲ್ಲ ಬಿಜೆಪಿ ಘಟಕದ ಅಧ್ಯಕ್ಷ ರಾದ ಸಣ್ಣ ಸಿದ್ದಯ್ಯ, ನಗರಾಜ ತಳವಾರ ,ಮಂಜುನಾಥ ನಂದವಾಡಿಗಿ, ಹನುಮಂತ ಯಾದವ್, ರಮೇಶ ಬಂಕದಮನಿ, ವೆಂಕಟೇಶ್ ಹಿರೇಮನಿ, ಮಲ್ಲಪ್ಪ ಮಾಟೂರು, ಕರಿಯಪ್ಪ ಯಾದವ್, ಗುಂಡಪ್ಪ ಗಂಗಾವತಿ, ರಾಮಪ್ಪ ಬಂಕದಮನಿ ಹಾಗೂ ನೂರಕ್ಕೂ ಹೆಚ್ಚು ಮಹಿಳೆಯರನ್ನು ಉಪಸ್ಥಿತರಿದ್ದರು.