ದೇವಿಂದ್ರಪ್ಪ ಕನ್ಯಾಕೋಳೂರಗೆ ಸಹಕಾರ ರತ್ನ ಪ್ರಶಸ್ತಿ

(ಸಂಜೆವಾಣಿ ವಾರ್ತೆ)
ಶಹಾಪುರ:ಡಿ.29:ನಗರದ ಸಮಾಜ ಸೇವಕರು ವಿಶ್ವಕರ್ಮ ಸಮಾಜದ ಯಾದಗಿರಿ ಜಿಲ್ಲಾ ಗೌರವ ಅಧ್ಯಕ್ಷರು ಹಾಗೂ ಶಹಾಪುರ ಸಗರನಾಡು ಬ್ಯಾಂಕಿನ ಉಪಾಧ್ಯಕ್ಷರಾದ ದೇವಿಂದ್ರಪ್ಪ ಕನ್ಯಾಕೋಳೂರ ಅವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿರುವ ರಾಜ್ಯಮಟ್ಟದ ಸಂಗಿತೋತ್ಸವ ಹಾಗೂ ನಾಡಿನ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಸಹಕಾರ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಬೆಂಗಳೂರಿನ ಶ್ರೀ ವಿದ್ಯಾ ಮಹಾಸಂಸ್ಥಾನ ವಿದ್ಯಾಪೀಠದ ಸಾಧ್ವಿಯೋಗಿನಿ ಮಾತಾಜೀ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಖಾತ್ಯ ಹಿರಿಯ ಸಾಹಿತಿ ಸದಾಶಿವಯ್ಯ ಜರಗನಹಳ್ಳಿ, ಚಿಂತಕಾರದ ಗೋವಿಂದಹಳ್ಳಿ ಕೃಷ್ಣೇಗೌಡ, ಸಂಗೀತ ನಿರ್ದೇಶಕಾರದ ಬಿ. ಬಲರಾಮ್, ಡಾ.ಎಸ್.ಆರ್. ರೇಣುಕಾಪ್ರಸಾದ್, ಹಿರಿಯ ಧುರೀಣರಾದ ಡಾ. ಜೈಶಂಕರ್ ರೆಡ್ಡಿ, ಖ್ಯಾತ ರಾಷ್ಟ್ರೀಯ ಲೇಡಿಯ ಡ್ರಮ್ಮರ್ ಡಾ. ಪ್ರಿಯಾ ಆಂಡ್ರೊ, ಚಲನಚಿತ್ರದ ಬಹುಭಾಷಾ ನಟಿಯರಾದ ಭೂಮಿಕಾ ಹಾಗೂ ಡಾ. ರಾಜೇಶ್ವರಿ ಪ್ರತಿಷ್ಠಾನದ ಅಧ್ಯಕ್ಷರಾದ ಹಾಗೂ ನಿರ್ದೇಶಕರಾದ ಗುಣವಂತ ಮಂಜು ಹಾಗೂ ಇತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.