ದೇವಾಲಯ ಕಳ್ಳತನ : ಎಸ್.ಪಿ ಭೇಟಿ

(ಸಂಜೆವಾಣಿ ವಾರ್ತೆ)
ಸಿಂಧನೂರು.ಫೆ.೨೧- ತಾಲೂಕಿನ ಗೋರೆಬಾಳ ಕ್ಯಾಂಪ್ ಹಾಗೂ ಸಾಸಲಮರಿ ಕ್ಯಾಂಪ್ ನಲ್ಲಿ ನಾಲ್ಕು ದೇವಸ್ಥಾನಗಳು ಒಂದೆ ರಾತ್ರಿ ಕಳ್ಳತನ ಆಗಿದ್ದು, ಸ್ಥಳಕ್ಕೆ ಜಿಲ್ಲಾ ಪೋಲಿಸ್ ಅಧಿಕ್ಷಕರಾದ ನಿಖಿಲ್ ಬಿ ಬೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.
ಮರುಳ ಸಿದ್ದೇಶ್ವರ ಮಠ, ತಾಯಮ್ಮ ದೇವಸ್ಥಾನ, ಶ್ರೀ ರಾಮ ದೇವಸ್ಥಾನ, ಆಂಜನೇಯ ಸ್ವಾಮಿ ದೇವಸ್ಥಾನ ಗಳು ಸೇರಿ ನಾಲ್ಕು ದೇವಸ್ಥಾನಗಳು ಕಳ್ಳತನವಾಗಿದ್ದು ಜನ ಭಯಬೀತರಾಗದೆ ಎಚ್ಚರಿಕೆಯಿಂದ ನಿಮ್ಮ ನಿಮ್ಮ ಹುಷಾರಲ್ಲಿ ನೀವಿ ಇರಿ ಎಂದರು ಮತ್ತು ಈ ಕಳ್ಳತನ ಪ್ರಕರಣ ಕುರಿತಂತೆ ಕಳ್ಳರ ಪತ್ತೆಗಾಗಿ ಈಗಾಗಲೇ ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಕಳ್ಳರ ಪತ್ತೆ ಮಾಡಲಾಗುವುದು ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ೧೧೨ ದೂರವಾಣಿ ಕರೆ ಮಾಡಿ ಮಾಹಿತಿ ಕೊಡಿ ಎಂದು ಸಾರ್ವಜನಿಕರಿಗೆ ಎಸ್.ಪಿ ತಿಳಿಸಿದರು.
ಹಾಸ್ಟೆಲ್ ಬೇಟಿ: ತಾಲೂಕಿನ ಗುಂಜಳ್ಳಿ ಗ್ರಾಮದ ಹಾಸ್ಟೆಲ್ ವಿದ್ಯಾರ್ಥಿ ನೇಣು ಹಾಕಿಕೊಂಡ ಸಾವನ್ನಪ್ಪಿದ ಕಾರಣ ಹಾಸ್ಟೆಲ್ ಗೂ ಬೇಟಿ ನೀಡಿ ಮಾಹಿತಿ ಪಡೆದರು.
ಡಿವೈಎಸ್ಪಿ ಬಿ.ಎಸ್.ತಳವಾರ, ಸಿಪಿಐ ಸುನೀಲ್ ವಿ ಮೂಲಿಮನಿ, ಪಿಎಸ್‌ಐ ಮಹಮ್ಮದ್ ಇಷಾದ್ ಇದ್ದರು ಮತ್ತು ಮೃತ ಸ್ಥಳಕ್ಕೆ ಪೋಲಿಸರು ಬೇಟಿ ಸಮಯದಲ್ಲಿ ಚಲುವಾದಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.