ದೇವಾಲಯ ಕಟ್ಟಿಸುವಂತೆ ಮನವಿ ಮಾಡಿದ ಮುಸ್ಲಿಂ ಸಮುದಾಯದ ಯುವಕ!

ಶಿವಮೊಗ್ಗ, ಸೆ. 5: ಇತ್ತೀಚೆಗೆ ಶಿವಮೊಗ್ಗ ನಗರದ ಸೋಮಿನಕೊಪ್ಪ ಬಡಾವಣೆಯಲ್ಲಿ ಗಣೇಶೋತ್ಸವ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯದವರು ಭಾಗವಹಿಸಿ ಭಾವೈಕ್ಯತೆ ಮೆರೆದಿದ್ದರು.
ಇದೀಗ ನಗರದ ಮಲವಗೊಪ್ಪದಲ್ಲಿ ಮುಸ್ಲಿಂ ಸಮುದಾಯದ ಯುವಕನೋರ್ವ, ಹಿಂದೂ ಸಮುದಾಯದವರ ಅನುಕೂಲಕ್ಕೆ ದೇವಾಲಯ ಕಟ್ಟಿಸಿಕೊಡುವಂತೆ ಕಾಂಗ್ರೆಸ್ ವಕ್ತಾರೆ ಜಿ.ಪಲ್ಲವಿಯವರಿಗೆ ಮನವಿ ಮಾಡಿದ ಘಟನೆಯೊಂದು ನಡೆದಿದೆ. ಪಲ್ಲವಿರವರು ಮಲವಗೊಪ್ಪದಲ್ಲಿನ ಗಣಪತಿ ಉತ್ಸವದಲ್ಲಿ ಭಾಗಿಯಾಗಿದ್ದ ವೇಳೆ ಈ ಘಟನೆ ನಡೆದಿದೆ. ಇದಕ್ಕೆ ಸ್ಥಳದಲ್ಲಿದ್ದವರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ದೇವರಿಗೆ ಪೂಜೆ ಮಾಡಲು ಹಿಂದೂ ಧರ್ಮೀಯರು ಸಾಕಷ್ಟು ದೂರ ಹೋಗಬೇಕಾಗಿದೆ. ಈ ಕಾರಣದಿಂದ ಸಮೀಪದಲ್ಲಿಯೇ ದೇವಾಲಯವೊಂದು ಕಟ್ಟಿಕೊಡುವಂತೆ ಯುವಕ ಮನವಿ ಮಾಡಿದ್ದಾನೆ.ಗ್ರಾಮದಲ್ಲಿ ಹಿಂದೂ-ಮುಸ್ಲಿಂರು ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದೆವೆ. ನಾವೆಲ್ಲರೂ ಒಂದೇ ಎಂದು ಇದೇ ವೇಳೆ  ಸ್ಥಳೀಯರು ಹೇಳಿದ್ಧಾರೆ.