ದೇವಾಲಯ ಅಭಿವೃದ್ಧಿಗೆ 2 ಲಕ್ಷ ರೂ. ದೇಣಿಗೆ

ಶಿಡ್ಲಘಟ್ಟ, ಜು೧೧: ತಾಲ್ಲೂಕಿನ ತುಮ್ಮನಹಳ್ಳಿ ಪಂಚಾಯತಿಯ ತಿಪ್ಪೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಅಭಿವೃದ್ಧಿಗಾಗಿ ೨ ಲಕ್ಷ ರೂ ಗಳನ್ನು ನೀಡಲಾಯಿತು ನಂತರ ದೇವರ ದರ್ಶನ ಪಡೆದು ಗ್ರಾಮದ ಮುಖಂಡರ ಜೊತೆ ಚರ್ಚಿಸಲಾಯಿತು.
ಎಬಿಡಿ ಗ್ರೂಪ್ ಟ್ರಸ್ಟ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮಾತನಾಡಿ, ಶ್ರೀ ಆಂಜನೇಯ ಸ್ವಾಮಿ ದೇವಸ್ಥನಕ್ಕೆ ನಮ್ಮ ಕೈಯಲ ಅದಾ ಸಹಾಯ ಮಾಡಿದ್ದು, ಇನ್ನೂ ಹೆಚ್ಚು ಸಹಾಯ ಮಾಡುವುದಾಗಿ ಭರವಸೆ ನೀಡಿ, ಶ್ರೀ ಆಂಜನೇಯ ಸ್ವಾಮಿಯ ಕೃಪೆಯಿಂದ ಎಲ್ಲಾರು ಆರೋಗ್ಯವಂತರಾಗಿ ಇರಬೇಕೆಂದು ದೇವರಲ್ಲಿ ಪ್ರಾರ್ಥಿಸಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಆದ ಸುಶೀಲಮ್ಮ ನಾಗರಾಜ್ ರವರು ಲಕ್ಷ್ಮಿದೇವಮ್ಮರವರು, ಸೊನ್ನಪ್ಪರವರು, ಮುನಿಯಪ್ಪರವರು, ಅಶೋಕರವರು, ವೆಂಕಟೇಶ್ ರವರು, ಚೀಮಂಗಲ ನಾರಾಯಣಸ್ವಾಮಿರವರು ಮತ್ತು ೧೫೦ ಕ್ಕೂ ಅಧಿಕ ಯುವಕರು, ಎಬಿಡಿ ಗ್ರೂಪ್ ಟ್ರಸ್ಟ್ ಸದಸ್ಯರು ಹಾಗೂ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದೆವು.