ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಚಂದ್ರ ಜಾಧವ್ ರಾಜೀನಾಮೆಗೆ ಆಗ್ರಹ

ಚಿಂಚೋಳಿ,ಜು.28- ಶಾಸಕ ಅವಿನಾಶ್ ಜಾಧವ್ ಅವರ ದೊಡ್ಡಪ್ಪ ರಾಮಚಂದ್ರ ಜಾಧವ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾಳಗಿ ತಾಲೂಕಿನ ಶ್ರೀರೇವಗ್ಗಿ ರೇವಣಸಿದ್ದೇಶ್ವರ ದೇವಾಲಯದ ವ್ಯವಸ್ಥಾಪನ ಸಮೀತಿಯ ಅಧ್ಯಕ್ಷರಾಗಿದ್ದಾರೆ ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ ಅವರ ನೇಮಕಾತಿ ಅಕ್ರಮವಾಗಿದೆ.
ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿ ಎಂದು ಕಂಡುಬಂದಲ್ಲಿ ಅಂಥವರು ವ್ಯವಸ್ಥಾಪನ ಸಮೀತಿಯ ಸದಸ್ಯರಾಗಲು ಅರ್ಹರಲ್ಲ ಒಂದು ವೇಳೆ ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿ ಎಂದು ಕಂಡುಬಂದಲ್ಲಿ ಅಂಥವರ ಸದಸ್ಯತ್ವವನ್ನು ರದ್ದುಗೊಳಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳಲಾಗಿದ್ದರೂ, ಸರಕಾರಕ್ಕೇ ಸುಳ್ಳು ಮಾಹಿತಿ ಕೊಟ್ಟು ಅಧಿಕಾರದ ಪ್ರಭಾವದಿಂದ ಸಮಿತಿ ಸದಸ್ಯರಾಗಿರುವ ರಾಮಚಂದ್ರ ಜಾಧವ ಅವರು, ಶಾಸಕ ಅವಿನಾಶ್ ಜಾಧವ್ ಮತ್ತು ಸಂಸದ ಉಮೇಶ್ ಜಾಧವ್ ರವರ ಅಧಿಕಾರ ದುರ್ಬಳಕೆ ಮಾಡಿಕೊಂಡು ಮಂದಿರದ ವ್ಯವಸ್ಥಾಪನ ಸಮೀತಿಯ ಸದಸ್ಯರಾಗುವದಲ್ಲದೆ ಅಧ್ಯಕ್ಷರು ಆಗಿರುವುದು ಖಂಡನೀಯ.
ರಾಮಚಂದ್ರ ಜಾಧವಗೂ ರೇವಣಸಿದ್ದಶ್ವರ ಮಂದಿರಕ್ಕೂ ಯಾವುದೇ ಸಂಬಂಧ ಇಲ್ಲ, ಈ ಭಾಗದಲ್ಲಿ ಅತೀ ಹೆಚ್ಚು ಭಕ್ತರನ್ನು ಹೊಂದಿರುವ ಹಾಗೂ ಅತಿ ಹೆಚ್ಚಿನ ಕಾಣಿಕೆ ಸಂಗ್ರಹವಾಗುವ ಈ ದೇವಸ್ಥಾನಕ್ಕೆ ಜಾಧವ ಅವರು ಕೇವಲ ಹಣ ಲೂಟಿ ಮಾಡುವ ದುರುದ್ದೇಶದಿಂದ ಅಧ್ಯಕ್ಷ ಪಟ್ಟ ಹಿಡಿದಿದ್ದಾರೆ, ಶಾಸಕ ಸಂಸದರು ತಮ್ಮ ಬ್ರಷ್ಟಾಚಾರದ ಹಣದ ದಾಹಕ್ಕೆ ಇವಾಗ ಮಂದಿರಗಳನ್ನು ಬಿಡುತ್ತಿಲ್ಲ ಎನ್ನುವದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ. ಒಂದು ರಾಜಕೀಯ ಪಕ್ಷದ ಮುಖಂಡರಾಗಿ ತಮ್ಮ ಮನೆಯಲ್ಲೇ ಶಾಸಕ ಸಂಸದರನ್ನು ಹೊಂದಿರುವ ಇವರು ಸರಕಾರದ ಸ್ಪಷ್ಟ ಷರತ್ತನ್ನು ಉಲ್ಲಂಘಿಸಿ ಅಧ್ಯಕ್ಷರಾದ ರಾಮಚಂದ್ರ ಜಾಧವ್ ಅವರು, ಅಧ್ಯಕ್ಷ ಸ್ಥಾನಕ್ಕೆ ಈ ಕೂಡಲೇ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಚಿಂಚೋಳಿ ಮತಕ್ಷೇತ್ರದ ಜನತೇ ಹಾಗೂ ರೇವಗ್ಗಿ ಶ್ರೀ ರೇವಣಸಿದ್ದೇಶ್ವರರ ಭಕ್ತರಿಂದ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಎಂದು ಶರಣು ಪಾಟೀಲ್ ಮೋತಕಪಳ್ಳಿ, ಎಚ್ಚರಿಸಿದ್ದಾರೆ.