ದೇವಾಲಯದಲ್ಲಿ ಬಂಗಾರ ಕಳ್ಳತನ ಆರೋಪಿಗಳ ಬಂಧನ

ಕೊಲ್ಹಾರ:ಮಾ.3: ಸಮೀಪದ ಗೊಳಸಂಗಿ ಗ್ರಾಮದ ಬನಶಂಕರಿ ದೇವಿ ದೇವಸ್ಥಾನದಲ್ಲಿ ದೇವಿಯ ಮೇಲಿನ ಚಿನ್ನಾಭರಣ ಕಳ್ಳತನ ಮಾಡಿದ ಇಬ್ಬರು ಆರೋಪಿಗಳ ಬಂಧಿಸಲಾಗಿದೆ.
ರಾಜಸ್ಥಾನ ಮೂಲದ ಮನೋಹರಸಿಂಗ್ ಸವಾಯ್‍ಸಿಂಗ್ ಹಾಗೂ ಮಹೇಂದ್ರಕುಮಾರ ಬಂಧಿತ ಆರೋಪಿಗಳು. ನಾಲ್ವರು ಆರೋಪಿಗಳ ಪೈಕಿ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ.
ಕೊಲ್ಹಾರ ಸಮೀಪದ ಗೊಳಸಂಗಿ ಗ್ರಾಮದಲ್ಲಿನ ಇತ್ತಿಚೆಗೆ ಬನಶಂಕರಿ ದೇವಿ ದೇವಸ್ಥಾನದಲ್ಲಿ ಕಳ್ಳತನ ನಡೆದಿತ್ತು. 35 ಗ್ರಾಂ ಚಿನ್ನ ಕಳ್ಳತನ ಮಾಡಲಾಗಿತ್ತು. ಚಿನ್ನ ಹಾಗೂ ಕಳ್ಳತನಕ್ಕೆ ಬಳಸಿದ ಕಾರು ವಶಕ್ಕೆ ಪಡೆಯಲಾಗಿದೆ ಕೂಡಗಿ ಎನ್‍ಟಿಪಿಸಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃತ್ತ ನಿರೀಕ್ಷಕ ಶರಣಗೌಡ ಗೌಡರ ಮಾರ್ಗದರ್ಶನದಲ್ಲಿ ಪಿಎಸಐ ಯತೀಶ್.ಎ ಎನ್, ಅಪರಾಧ ವಿಭಾಗದ ಪಿಎಸಐ ಶ್ರೀಮತಿ ಡಿ.ಕೆ ಯಳ್ಳಿಗುತ್ತಿ, ನಿಡಗುಂದಿ ಪಿಎಸಐ ಶಿವರಾಜ ಧರಿಗೋಳ ಹಾಗೂ ಸಿಬ್ಬಂದಿಗಳಾದ ಮಹೇಶ್ ದೊಡಮನಿ, ಬಿ.ಸಿ ಪಾಟೀಲ್, ಸುಭಾಷ್ ಆಲಮಟ್ಟಿ, ಸೋಮು ಲಮಾಣಿ, ಎಸ್.ಎಂ ಮಠಪತಿ, ಎಸ್.ವಾಯ್ ದೇಸಾಯಿ, ಆರ್.ಎಸ್ ಉಪ್ಪಲದಿನ್ನಿ, ಸಿ.ಎಸ್ ತೋಳಮಟ್ಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.