ದೇವಾಲಯಗಳ ಸಿಬ್ಬಂದಿಗೆ ಅಹಾರ ಧಾನ್ಯ ಕಿಟ್ ವಿತರಣೆ

ಬಳ್ಳಾರಿ ಜೂ 04 : ನಗರದ ಕನಕ ದುರ್ಗಮ್ಮ ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿಗೆ ಆಹಾರ ಧಾನ್ಯದ ಕಿಟ್ ವಿತರಿಸಲಾಯಿತು.
ಕೋವಿಡ್ ಸಂಕಷ್ಟದಿಂದ ದೇವಾಲಯಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧ ಮಾಡಿರುವುದರಿಂದ. ದೇವಾಲಯಗಳ ಅರ್ಚಕರು ಮತ್ತು‌ ಇತರೆ ಸಿಬ್ಬಂದಿಗೆ ಆಹಾರ ಧಾನ್ಯ ನೀಡಲು ಸರ್ಕಾರ ಸೂಚಿಸಿದಂತೆ ಇಂದು ದುರ್ಗಮ್ಮ ದೇವಸ್ಥಾನದ 10 ಜನ ಸಿಬ್ಬಂದಿಗೆ ಧಾರ್ಮಿಕ ಇಲಾಖೆಯ ಅಧಿಕಾರಿಗಳಾದ ಪ್ರಕಾಶ್ ರಾವ್, ಹನುಮಂತಪ್ಪ, ದೇವಸ್ಥಾನದ ಪ್ರಧಾನ ಅರ್ಚಕ, ಪಾಲಿಕೆ ಸದಸ್ಯ ಪಿ.ಗಾದೆಪ್ಪ, ಮಾಜಿ ಸದಸ್ಯೆ ಚಂದ್ರಕಲಾ ಮೊದಲಾದವರು ವಿತರಿಸಿದರು.
ಇದೇ ರೀತಿ ಎತ್ತಿನಬೂದಿಹಾಳಿನ‌ ಕಟ್ಟೆಬಸವೆರಶ್ವರ ದೇವಸ್ಥಾನ ಸೇರಿದಂತೆ ಸರ್ಕಾರದ ಅಧೀನದ ಎಲ್ಲಾ ದೇವಸ್ಥಾನದ ಸಿಬ್ಬಂದಿಗೆ ನೀಡಲಿದೆ.