ದೇವಾಲಯಗಳು ಶೃದ್ಧೆ, ಭಕ್ತಿಯ ಕೇಂದ್ರಗಳು: ಶಾಸಕ ಲಮಾಣಿ

ಲಕ್ಷ್ಮೇಶ್ವರ, ಜ12- ಧರ್ಮ, ಸಂಸ್ಕೃತಿಗಳ ನೆಲೆಗಟ್ಟಿನ ಮೇಲೆ ನಿಂತಿರುವ ನಮ್ಮ ದೇಶದಲ್ಲಿ ದೇವಾಲಯಗಳು ಶೃದ್ಧೆ ಭಕ್ತಿಯ ಕೇಂದ್ರಗಳಾಗಿವೆ ಎಂದು ಶಾಸಕ ರಾಮಣ್ಣ ಎಸ್ ಲಮಾಣಿ ಹೇಳಿದರು.
ಅವರು ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿ ಮಹಾದ್ವಾರ ನಿರ್ಮಾಣಕ್ಕಾಗಿ 25 ಲಕ್ಷ ರೂಗಳನ್ನು ನೀಡಿ ಭೂಮಿ ಪೂಜೆ ಮತ್ತು ಅಡಿಗಲ್ಲನ್ನು ನೆರವೆರಿಸಿ ಮಾತನಾಡಿ ಈ ದೇವಸ್ಥಾನದ ಜೀರ್ಣೋದ್ಧಾರದ 8 ವರ್ಷಗಳಿಂದಲೂ ಭಕ್ತರ ಮಹಾದ್ವಾರದ ನಿರ್ಮಾಣ ಬೇಡಿಕೆಯಾಗಿಯೇ ಉಳಿದಿತ್ತು.
ಪಟ್ಟಣದ ಹಿರಿಯರು ಮತ್ತು ಭಕ್ತರ ನಿಯೋಗ ಈ ಬೇಡಿಕೆಯನ್ನು ಇಟ್ಟಾಗ ಮರು ಮಾತಾಡದೆ ಭಕ್ತರ ಮತ್ತು ಹಿರಿಯರ ಅಪೇಕ್ಷೆಯಂತೆ ಸ್ವಂತ ಖರ್ಚಿನಿಂದ ನಿರ್ಮಿಸಿಕೊಡುವುದಾಗಿ ಹೇಳಿ ಸೋಮುವಾರ ಭೂಮಿ ಪೂಜೆ ನೆರವೇರಿಸಿರುವುದು ಆತ್ಮ ತೃಪ್ತಿ ತಂದಿದೆ ಎಂದು ಹೇಳಿದರು.
ಮಹಾದ್ವಾರ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಸೋಮಣ್ಣ ಮುಳಗುಂದ ಅವರು ಒಂದೇ ಮಾತಿಗೆ ಶಾಸಕರು ಮರು ಮಾತಾಡದೆ ಸ್ವಂತ ಖರ್ಚಿನಿಂದ ನಿರ್ಮಿಸಿಕೊಡುವುದಾಗಿ ಹೇಳಿ ನುಡಿದಂತೆ ನಡೆದ್ದಿದ್ದಾರೆ ಎಂದು ಶಾಸಕರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಅಧ್ಯಕ್ಷತೆಯನ್ನು ವಿಜಯ್ ಕುಮಾರ್ ಮಹಾಂತಶೆಟ್ಟರ್ ವಹಿಸಿದರು.
ಕಾರ್ಯಕ್ರಮದಲ್ಲಿ ಶಿವಣ್ಣ ನೆಲವಿಗಿ, ಕುಬೇರಪ್ಪ ಮಹಾಂಶೆಟ್ಟರ್, ಎಸ್.ಜಿ. ಹಾಲೆವಾಡಿಮಠ ನೀಲಮ್ಮ ಮೆಣಸಿನಕಾಯಿ, ಎಸ್.ಪಿ. ಪಾಟೀಲ್, ಮಹಾದೇವಪ್ಪ ಅಣ್ಣಿಗೇರಿ, ಪ್ರವೀಣ್ ಬಾಳಿಕಾಯಿ, ನೀಲಪ್ಪ ಹತ್ತಿ, ಶಿವಯೋಗಿ ಅಂಕಲಕೋಟಿ, ಚಂಬಣ್ಣ ಬಾಳಿಕಾಯಿ, ದೇವಣ್ಣ ಬಳಿಗಾರ್, ನಿಂಗಪ್ಪ ಬನ್ನಿ, ನೀಲಪ್ಪ ಕರ್ಜಕನಣವರ, ಬಸಣ್ಣ ಬೆಂಡಿಗೇರಿ, ಅಶೋಕ್ ಬಟಗುರಕಿ, ಪೂಜಾ ಕರಾಟೆ, ಮಂಜುಳಾ ನಂದೆಣ್ಣವರ, ಶಿವಪುತ್ರಪ್ಪ ಚಾಕಲಬ್ಬಿ, ಮುಸ್ತಾಕ್ ಅಹಮ್ಮದ್ ಶಿರಹಟ್ಟಿ, ಮುಖ್ಯಾಧಿಕಾರಿ ಎಸ್.ಎಸ್. ಹುಲ್ಲಮನವರ, ದುಂಡೇಶ ಕೊಟಗಿ, ಬಸವರಾಜ ಮೆಣಸಿನಕಾಯಿ, ಡಿ.ವೈ ಹುನಗುಂದ, ಗಂಗಾಧರ್ ಮೆಣಸಿನಕಾಯಿ ಸೇರಿದಂತೆ ಅನೇಕರು ಇದ್ದರು.
ಈಶ್ವರ ಮೆಡ್ಲೇರಿ, ಬಿ.ಪಿ. ಕರಾಟೆ, ಅಶ್ವಿನಿ ಅಂಕಲಕೋಟಿ ನಿರ್ವಹಿಸಿದರು.