ದೇವಾಲಯಗಳು ಶಾಂತಿ ಸಾಮರಸ್ಯದ ಪವಿತ್ರ ಕೇಂದ್ರಗಳು

ನೇಸರಗಿ,ಜೂ16: ನಾಡಿನ ದೇವಾಲಯಗಳು ಶಾಂತಿ ಸಾಮರಸ್ಯ ಬೆಳೆಸುವ ಪವಿತ್ರ ಕೇಂದ್ರಗಳಾಗಿವೆ. ದೇವರಿಗೆ ಅನೇಕ ಹೆಸರುಗಳಿದ್ದರೂ ಶಕ್ತಿ ಮೂಲ ಒಂದೇಯಾಗಿದೆ ಎಂದು ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಹೇಳಿದರು.
ಸಮೀಪದ ಸೋಮನಟ್ಟಿ ಗ್ರಾಮದಲ್ಲಿ ಶ್ರೀ ಚನ್ನವೃಷಬೇಂದ್ರ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧರ್ಮ ಭೂಮಿ ಎನಿಸಿದ ಭಾರತದಲ್ಲಿ ಹಲವಾರು ಧರ್ಮಗಳು ಮತ್ತು ಆಚರಣೆಗಳು ಬೆಳೆದು ಬಂದಿವೆ. ಸತ್ಯ ಸಂಸ್ಕೃತಿ ಮತ್ತು ಆದರ್ಶಗಳನ್ನು ಎತ್ತಿ ಹಿಡಿಯಲು ಈ ನಾಡಿನ ಮಠ ಮಂದಿರಗಳು ಕಾರ್ಯ ಮಾಡುತ್ತಾ ಬಂದಿವೆ. ದೇವಾಲಯಗಳ ಮೇಲಿರುವ ನಂಬಿಗೆ ದೇವರಲ್ಲಿಟ್ಟಿರುವ ಶೃದ್ಧೆ ಅಪಾರ. ಆಧುನಿಕತೆಯ ಹೆಸರಿನಲ್ಲಿ ಜನರ ಭಾವನೆಗಳನ್ನು ಕಲುಷಿತಗೊಳಿಸಬಾರದು ಎಂದು ಹೇಳಿದರು. ದೇವಾಲಯಗಳು ಧರ್ಮ ಸಮನ್ವಯತೆಯ ಸಂದೇಶ ಸಾರುತ್ತಾ ಬಂದಿವೆ. ದೇವಾಲಯ ನಿರ್ಮಿಸುವುದರ ಜೊತೆಗೆ ದೂರದೃಷ್ಟಿ ಮತ್ತು ಸಾಮಾಜಿಕ ಚಿಂತನೆಗೆ ಸಾಕ್ಷಿಯಾಗಿದೆ. ಜನರು ಪರಸ್ಪರ ನಂಬಿಗೆ ವಿಶ್ವಾಸದಿಂದ ಆದರ್ಶ ಬದುಕು ಕಟ್ಟಿಕೊಳ್ಳಬೇಕು ಎಂದರು.
ಮನುಷ್ಯನಿಗೆ ಧರ್ಮ ಅವಶ್ಯವಾಗಿದೆ. ಹರಿಯುವ ನೀರಿಗೆ, ಬೀಸುವ ಗಾಳಿಗೆ, ಭೂಮಿ ತಾಯಿಗೆ ಒಂದು ಧರ್ಮವಿದೆ. ಧರ್ಮದಿಂದ ವಿಮುಖರಾದರೆ ಬದುಕಿ ಬಾಳಲು ಸಾಧ್ಯವಾಗುವುದಿಲ್ಲ. ಧರ್ಮದ ಪರಿಪಾಲನೆ ಮನುಷ್ಯನಿಗೆ ಅಗತ್ಯವಾಗಿದೆ. ಎಷ್ಟೊ ಜನರು ಧರ್ಮ ಎಂದರೇ ವೇದಿಕೆ ಮೇಲೆ ಮಾತನಾಡುವುದು ಎಂದು ತಿಳಿದಿದ್ದಾರೆ ಎಂದು ಹೇಳಿದರು.
ಶ್ರೀ ಶ್ರೀ ಶ್ರೀ ಬಾಲಯೋಗಿ ಮಾಣಿಕ್ಯ ವೃಷಬೇಂದ್ರ ಸ್ವಾಮಿಜಿ ದಿವ್ಯ ಸಾನಿದ್ಯ ವಹಿಸಿ ಮಾತನಾಡಿ, ದೇವಾಲಯಗಳು ಸಂಸ್ಕೃತಿಯ ಕೇಂದ್ರಗಳು. ದೇಹಕ್ಕಿಂತ ದೇವಾಲಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟವರು ಭಾರತೀಯರು. ದೇವರು ಎಲ್ಲೆಡೆ ತುಂಬಿದ್ದರೂ ನಾವು ಗುರುತಿಸಲು ಅಸಮರ್ಥರಾಗುತ್ತಿದ್ದೇವೆ. ದೇವರಲ್ಲಿರುವ ತಾಳ್ಮೆ ಸಹನೆ ಗುಣ ಮನುಷ್ಯರಲ್ಲಿ ಬೆಳೆದು ಬರುವ ಅಗತ್ಯವಿದೆ ಎಂದರು. ನೂತನಾವಾಗಿ ನಿರ್ಮಿಸಲಾಗಿರುವ ದೇವಸ್ಥಾನ ಗ್ರಾಮದ ಶೃದ್ಧಾ-ಭಕ್ತಿಗೆ ಸಾಕ್ಷಿಯಾಗಿದೆ ಎಂದರು.
ಈ ಸಂಧರ್ಭದಲ್ಲಿ ಸಿದ್ನಾಳದ ಗುರುಪಾದ ಸ್ವಾಮಿಗಳು, ಯರಗೋಪ್ಪದ ಶಿವಪ್ಪಜ್ಜನವರು, ಕಿವಡೆಬೈಲ ರವಿಶಾಸ್ತ್ರಿ, ಗ್ರಾ ಪಂ ಉಪಾಧ್ಯಕ್ಷೆ ಭಾರತಿ ತಿಗಡಿ, ಗ್ರಾ ಪಂ ಸದಸ್ಯ ಖಾಸೀಮ್ ಜಮಾದಾರ, ಮಾಜಿ ಜಿ.ಪಂ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ, ನಿಂಗಪ್ಪ ಅರಕೇರಿ, ಪಿಡಿಓ ಶಶಿಕಲಾ ಆನಿಗೋಳ, ಸಿದ್ದಾರೋಡ ನಾಯಕರ, ಕಾಂಗ್ರೆಸ್ ಯುವ ಧುರೀಣ ಸಚೀನ್ ಪಾಟೀಲ, ನಿಂಗಪ್ಪ ತಳವಾರ, ಅಡಿವೇಪ್ಪ ಮಾಳನ್ನವರ, ಸಿದ್ದಪ್ಪ ತುಳಜನ್ನವರ, ಶಿವನಪ್ಪ ಮದೇನ್ನವರ, ಸುಜಾತ ಪಾಟೀಲ, ಮಲ್ಲಿಕಾರ್ಜುನ ಕಲ್ಲೋಳ್ಳಿ, ಶಿವಪ್ಪ ಕಾರಿ, ರಮೇಶ ಚೋಬಾರಿ, ಅಣ್ಣಪ್ಪ ಕಡಕೋಳ, ಶಾನ್ ರಾಮನ್ನವರ, ಚನ್ನಗೌಡ ಪಾಟೀಲ, ಸೋಮನಟ್ಟಿ ಗ್ರಾಮಸ್ಥರು ಇದ್ದರು.
ಕಾರ್ಯಕ್ರಮ ನಿರೂಪಣೆ ಸ್ವಾಗತ ವಂದನಾರ್ಪಣೆ ಮಲ್ಲಿಕಾರ್ಜುನ ಕಾರಿ ನಡೆಸಿಕೊಟ್ಟರು.