
ಜಗಳೂರು.ಏ.೧೧:- ಕಾಂಗ್ರೆಸ್ ಪಕ್ಷದಿಂದಟಿಕೇಟ್ ಆಕಾಂಕ್ಷಿಯಾಗಿದ್ದು ಕಾರ್ಯಕರ್ತರ ಅಭಿಲಾಷೆಯಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮಾಜಿ ಶಾಸಕ ಎಚ್.ಪಿ.ರಾಜೇಶ್ ಹೇಳಿದರು.ಪಟ್ಟಣದ ಈಶ್ವರ,ದೊಡ್ಡ ಮಾರಮ್ಮ ದೇವಸ್ಥಾನದ ಬಳಿ ದೇವರ ದರ್ಶನ ಪಡೆದು ನಂತರ ಪತ್ರಕರ್ತರೊಂದಿಗೆ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ನಾನೊಬ್ಬ ಪ್ರಬಲ ಆಕಾಂಕ್ಷಿಯಾಗಿದ್ದು ಕ್ಷೇತ್ರದ ಮತದಾರರ ನಿರ್ಣಯಕ್ಕೆ ಕಾದು ಕುಳಿತಿರುವೆ.ಪಕ್ಷದ ವರಿಷ್ಠರು ಮಾನದಂಡಗಳನ್ನು ಅವಲೋಕಿಸಿ ಇಂದು ಕೆಪಿಸಿಸಿ ಪಟ್ಟಿಯಲ್ಲಿ ಟಿಕೇಟ್ ಘೋಷಿಸುವ ನಿರೀಕ್ಷೆಯಿದೆ.ಆದರೆ ಪೂರ್ವಯೋಜಿತವಾಗಿ ಸಕಲ ಸಿದ್ದತೆಯನ್ನು ಪಕ್ಷದ ಕಾರ್ಯ ಕರ್ತರ ಸಲಹೆಯಂತೆ ಇಂದು ಪಟ್ಟಣದ ದೊಡ್ಡಮಾರಮ್ಮ ದೇವಿ,ಈಶ್ವರ ದೇವಸ್ಥಾನ, ತಾಲೂಕಿನ ಕೊಣಚಗಲ್ಲು ರಂಗನಾಥಸ್ವಾಮಿ,ಕೊಡದಗುಡ್ಡ ವೀರಭದ್ರೇಶ್ವರ , ಕಲ್ಲೇದೇವರಪುರ ಕಲ್ಲೇಶ್ವರ,ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ,ಮಡ್ರಹಳ್ಳಿ ಚೌಡೇಶ್ವರಿ,ಅರಸೀಕೆರೆ ದಂಡಿನ ದುರ್ಗಮ್ಮ,ಉಚ್ಚಂಗಿದುರ್ಗ ಉಚ್ಚಂಗೆಮ್ಮ ದೇವಿ ದರ್ಶನ ಪಡೆದು ದೈವ ಕೃಪೆಗೆ ಪಾತ್ರನಾಗುವೆ ಪಕ್ಷದ ಬಿ ಫಾರಂಗಾಗಿ ಹೈಕಮಾಂಡ್ ನಿರ್ಧಾರಕ್ಕೆ ಬದ್ದನಾಗಿರುವೆ ಎಂದು ಸ್ಪಷ್ಟಪಡಿಸಿದರು.