ದೇವಸ್ಥಾನ-ಮಠಗಳಿಗೆ ಸರ್ಕಾರದ ಅನುದಾನ: ಶಾಸಕ ಗುತ್ತೇದಾರ ಸಮರ್ಥನೆ

ಆಳಂದ:ಎ.1:ರಾಜ್ಯದ ಮುಖ್ಯಮಂತ್ರಿಗಳು ದೇವಸ್ಥಾನ ಹಾಗೂ ಮಠಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅನುದಾನ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು. ಆಳಂದ ತಾಲೂಕಿನ ಗಡಿಭಾಗದ ಹೊದಲೂರ ಶಿವಲಿಂಗೇಶ್ವರ ವಿರಕ್ತ ಮಠದ ನಿರ್ಮಾಣಕ್ಕೆ ಮುಜರಾಯಿ ಇಲಾಖೆಯ 50 ಲಕ್ಷ ರೂಪಾಯಿ ಅನುದಾನದ ಕಟ್ಟಡ ಕಾಮಗಾರಿಯ ಗುದ್ದಲಿ ಪೂಜೆ ಕೈಗೊಂಡು ಅವರು ಮಾತನಾಡಿದರು.
ರಾಜ್ಯದ ಮುಖ್ಯಮಂತ್ರಿಗಳು ಮಠ, ದೇವಸ್ಥಾನಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇದುವರೆಗೂ ಸುಮಾರು ಆರುನೂರು ಕೋಟಿಗೆ ಹೆಚ್ಚಿನ ಹಣವನ್ನು ನೀಡಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನಮಗೆಯಲ್ಲ ಮಠ, ಮಂದಿರ ಹಾಗೂ ಧರ್ಮಗುರುಗಳ ಆಶೀರ್ವಾದವೇ ಕಾರಣವಿದೆ. ಇಂಥ ಒಳ್ಳೆಯ ಕಾರ್ಯಗಳಿಗೆ ಸರ್ಕಾರ ಅನುದಾನ ನೀಡುವುದು ಸರಿಯಾದ ಕ್ರಮವಿದೆ ಎಂದ ಅವರು, ಗಡಿಭಾಗದಲ್ಲಿ ಶಿವಲಿಂಗೇಶ್ವರ ಮಠ ನಿರ್ಮಾಣದ ಜೊತಗೆ ಪೀಠಾಧಿಪತಿಗಳು ಶ್ರೀಮಠದಲ್ಲೇ ಠಿಕಾಣಿ ಹೂಡಿ ಈ ಭಾಗದ ಜನರಿಗೆ ಧಾರ್ಮಿಕ ಕಾರ್ಯಕಗಳಿಗೆ ಒಲವು ಮೂಡಿಸುವ ಕಾರ್ಯ ನಡೆಯಬೇಕು. ನನ್ನ ಅನುದಾನದ 5 ಲಕ್ಷ ರೂಪಾಯಿ ನೀಡಲಾಗುವುದು ಒಳ್ಳೆಯ ಮಠ ನಿರ್ಮಾಣವಾಗಲಿ. ಗ್ರಾಮದ ಅಭಿವೃದ್ಧಿಗೆ ಈ ಅವಧಿಯಲ್ಲಿ ಹೆಚ್ಚಿನ ಅನುದಾನ ನೀಡಿ ರಸ್ತೆ, ಕಟ್ಟಡಗಳನ್ನು ಕಟ್ಟಲಾಗಿದೆ. ಬಾಕಿ ಇನ್ನೂಳಿದ ಕೆಲಸಗಳು ಇದ್ದರೆ ಕೈಗೊಳ್ಳಲಾಗುವುದು ಎಂದರು.
ಶ್ರೀಮಠದ ಪೀಠಾಧಿಪತಿ ವೃಷಭಲಿಂಗ ಮಹಾಸ್ವಾಮಿಗಳು ಸಮಾರಂಭದ ನೇತೃತ್ವ ವಹಿಸಿ ಮಾತನಾಡಿ, ಗ್ರಾಮದ ಮೂರುನೂರು ವರ್ಷದ ಇತಿಹಾಸ ಉಳ್ಳ ಶಿವಲಿಂಗೇಶ್ವರ ದೇವಸ್ಥಾನ ಹಾಗೂ ಶಿವಲಿಂಗೇಶ್ವರ ಮಠದ ನಿರ್ಮಾಣ ಜೊತೆಗೆ ಶಾಲೆ, ಕಾಲೇಜು, ಐಟಿಐ ವಿದ್ಯಾರ್ಥಿ ವಸತಿ ನಿಲಯ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಿದ್ದು, ನಮ್ಮ ಕೋರಿಕೆಗೆ ಸಿಎಂ ಪುತ್ರ ಸಂಸದ ರಾಘವೇಂದ್ರ ಅವರು ಮನ್ನಿಸಿ 50 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೆ ಕಾರಣರಾಗಿದ್ದಾರೆ, ಗಡಿ ಭಾಗದ ಸಮಾಜ ಧಾರ್ಮಿಕ ಕಾರ್ಯಕ್ಕೆ ಸರ್ಕಾರ ಮತ್ತು ಭಕ್ತರಿಂದ ಸಹಕಾರ ಬಯಸಲಾಗುವುದು ಎಂದು ಅವರು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ನಂದಗಾಂವ ಮಠದ ಶ್ರೀ ರಾಜಶೇಖರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದ ಉದಗಿರ, ಪಡಡಸಾವಳಿ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯರು, ಸಮ್ಮುಖ ವಹಿಸಿದ್ದ ಅಕ್ಕಲಕೋಟ ಮಠದ ಬಸವಲಿಂಗ ಮಹಾಸ್ವಾಮಿಗಳು, ಹತ್ತೆಕಣಬಸ್ ಮಠದ ಪ್ರಭುಶಾಂತ ಮಹಾಸ್ವಾಮಿಗಳು ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ ಅವರು ಮಾತನಾಡಿದರು.
ತಾಪಂ ಉಪಾಧ್ಯಕ್ಷ ಗುರುನಾಥ ಪಾಟೀಲ, ಗ್ರಾಪಂ ಅಧ್ಯಕ್ಷ ವೀರಭದ್ರಪ್ಪ ಕುಗೆ, ಶಿವಾಜಿ ಚವ್ಹಾಣ, ಬಸಯ್ಯ ಸ್ವಾಮಿ, ಮುರುಘಯ್ಯ ಸ್ವಾಮಿ, ಮುಖಂಡ ಚಂದ್ರಾಮಪ್ಪ ಘಂಟೆ, ಮಲ್ಲಿಕಾರ್ಜುನ ಕಂದಗುಳೆ, ವೀರಭದ್ರಪ್ಪ ಖೂನೆ, ಶರಣಪ್ಪ ಹೊಸಮನೆ, ಶರಣು ಮುರುಮೆ, ಶಿವರಾಜ ಪಾಟೀಲ, ಮಹೇಶ ಪಾಟೀಲ, ಕಾಶಿನಾಥ ಪಾಟೀಲ ಸೇರಿದಂತೆ ಗ್ರಾಪಂದ ಸದಸ್ಯರು ಮತ್ತು ಹೋದಲೂರ ಸೇರಿ ಅಣೂರ, ಖಜೂರಿ, ಜಾವಳಿ ಮತ್ತಿತರ ಗ್ರಾಮಗಳ ಭಕ್ತಾದಿಗಳು, ಮುಖಂಡರು ಪಾಲ್ಗೊಂಡಿದ್ದರು. ನೂರಂದಯ್ಯ ಸ್ವಾಮಿ ನಿರೂಪಿಸಿದರು. ಶ್ರೀಮಠದ ಟ್ರಸ್ಟ್ ಕಾರ್ಯದರ್ಶಿ ಶಿವರಾಜ ಪಾಟೀಲ ಸ್ವಾಗತಿಸಿದರು. ಉಪಾಧ್ಯಕ್ಷ ದೇವಪ್ಪ ಬನಶೆಟ್ಟಿ ವಂದಿಸಿದರು.