ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ

ಮುನವಳ್ಳಿ,ಅ27 ಪಟ್ಟಣದ ಸಾಯಿನಗರದಲ್ಲಿ ಪುರಸಬೆಯವರು ನೀಡಿದಂತ ಸ್ಥಳದಲ್ಲಿ ಶ್ರೀ ಬಸವಪ್ರಿಯ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸಂಘದಿಂದಾ ಶ್ರೀ ಹಡಪದ ಅಪ್ಪಣ್ಣ ದೇವಸ್ಥಾನದ ಭೂಮಿ ಪೂಜೆಯನ್ನು ಪಿ.ಕೆ.ಪಿ.ಎಸ್ ಅಧ್ಯಕ್ಷ ಅಂಬರೀಷÀ ಯಲಿಗಾರ ನೆರವೇರಿಸಿದರು. ಈ ಕಟ್ಟಡ ಸುಸಜ್ಜಿತವಾಗಿ ಉತ್ತಮವಾದ ಕಟ್ಟಡವಾಗಬೇಕು ದೇವಸ್ಥಾನ ಪೂರ್ಣ ಕೊಂಡ ನಂತರ ಪೂಜೆ ಪುನಸ್ಕಾರ ಮಾಡಲಿಕ್ಕೆ ಶಾಸ್ತ್ರಿಯೋರ್ವರನ್ನು ನೇಮಿಸಬೇಕು ಅಂದಾಗ ದೇವಸ್ಥಾನದ ಮೆರಗು ಬರುತ್ತದೆ ದೆವಸ್ಥಾನವನ್ನು ಉತ್ತಮವಾಗಿ ಕಟ್ಟಿ ಅದನ್ನು ಸರಿಯಾಗಿ ಸ್ವಚ್ಚವಾಗಿ ಕಾಪಾಡೋಣ ಎಂದರು. ಉಮೇಶ ಬಾಳಿ ಗೌತಮ ದ್ಯಾಮನಗೌಡ್ರ, ಅಪ್ಪಣ್ಣ ಸಮಾಜದ ಹಿರಿಯರು ಹಾಗೂ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.