ದೇವಸ್ಥಾನ ಗದ್ದುಗೆ ಪ್ರತಿಷ್ಠಾಪನೆ


ನವಲಗುಂದ,ಏ.13: ತಾಲ್ಲೂಕಿನ ಶಿರೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ, ಶ್ರೀ ಮಹಾಂತ ದುರದುಂಡೇಶ್ವರ ದೇವಸ್ಥಾನದ ಗದ್ದುಗೆ ಪ್ರತಿಷ್ಠಾಪನೆ ಮತ್ತು ನೂತನ ಕಳಸಾರೋಹಣ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
ಮುರಗೋಡದ ಶ್ರೀ ಮಹಾಂತ ದುರದುಂಡೇಶ್ವರ ಸಂಸ್ಥಾನ ಮಠದ, ಶ್ರೀ ಪ್ರಣವಸ್ವರೂಪಿ ನೀಲಕಂಠ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಪೂಜಾ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನ ಸಂಗೊಳ್ಳಿಯ ಹಿರೇಮಠದ ಉದಯಶಾಸ್ತ್ರಿಯವರು ನೆರವೇರಿಸಿದರು. ನಂತರ ಕಳಸಾರೋಹನ ಜರುಗಿತು.
ಶಾಸಕ ಎನ್ ಎಚ್ ಕೋನರಡ್ಡಿ ಮಂಜು ಬಾಳಿ, ಗಂಗಪ್ಪ ಯಾದವಾಡ, ಶಿವನಗೌಡ ರಾಯನಗೌಡ್ರ, ಮಹಾಂತೇಶ್ ಬಾಳಿ, ಮಲ್ಲಪ್ಪ ಯಾದವಾಡ, ಮಡಿವಾಳಪ್ಪ ಬಾಳಿ,ಬಸುರಾಜ ಬಾಳಿ, ಮುತ್ತು ಸಣಮನಿ, ಮಲಕಾಜಗೌಡ ಪವಾಡಿಗೌಡ್ರ, ಬಾಳಪ್ಪ ಮಡಿವಾಳರ, ಶಂಕರಗೌಡ ಗುತ್ತಿನಗೌಡ್ರ,
ಬಸನಗೌಡ ಕರಡಿಗುಡ್ಡ ಸೇರಿದಂತೆ ಗ್ರಾಮದ ಯುವಕರು ಮಹಿಳೆಯರು ಪಾಲ್ಗೊಂಡಿದ್ದರು.