ದೇವಸ್ಥಾನದ ಹೆಸರಲ್ಲಿ ರಾಜಕೀಯ ಬೇಡ: ಗಡಂತಿ

ಚಿಂಚೋಳಿ,ಜು.29- ಇಲ್ಲಿನ ಸುಪ್ರಸಿದ್ದ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಹಗಲು ರಾತ್ರಿ ದುಡಿಯುತ್ತಿರುವ ಜಾಧವ ಪರಿವಾರ, ಶ್ರೀ ರಾಮಚಂದ್ರ ಜಾಧವ ಅವರ ತಂದೆ ದಿ.ಶ್ರೀ ಗೋಪಾಲದೇವ ಜಾಧವ ರವರು ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಪರಮ ಭಕ್ತರಾಗಿದ್ದರು, ಜಾಧವ ರವರ ಮನೆದೇವರಾದ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಅಭಿವೃದ್ಧಿ ಪಡೆಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಜುರಾಯಿ ಇಲಾಖೆಗೆ ಸೇರಿಸಲು ಕೆಲ ಸಮಾಜ ಘಾತಕರು ಹಿನ್ನೆಡೆ ತಂದ ಸಂಧರ್ಭದಲ್ಲಿ, ಭಕ್ತರಾದ ದಿ.ಶ್ರೀ ಗೋಪಾಲದೇವ ಜಾಧವ ರವರು ಮುತುವರ್ಜಿ ವಹಿಸಿ ಹಲವಾರು ಸಮಸ್ಯೆ ಎದುರಾದರು ರಾಜ್ಯ ಸರ್ಕಾರದ ಮುಜುರಾಯಿ ಇಲಾಖೆಗೆ ಸೇರಿಸಲು ಕಾರಣಿಭೂತರಾದ ಈ ಕುಟುಂಬದ ವಿರುದ್ದ ರಾಜಕೀಯ ಬೆಳೆ ಬೆಯಿಸಿಕೊಳ್ಳುವುದು ಸರಿಯಲ್ಲ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಗಡಂತಿ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶ್ರೀರೇವಣಸಿದ್ದೇಶ್ವರ ಭಕ್ತರಲ್ಲಿ ಹಾಗೂ ಸಮಾಜದ ಮುಖಂಡರಲ್ಲಿ ಗೊಂದಲ ಸೃಷ್ಟಿ ಮಾಡಬೇಡಿ.
ಹೇಳಿಕೆ ನೀಡುವ ಮೊದಲು ತಾವು ಯಾವ ಕ್ಷೇತ್ರದವರು ನಿಮಗೆ ಯಾವ ಅರ್ಹತೆ ಇದೆ, ಈ ಕ್ಷೇತ್ರದಲ್ಲಿ ನಿಮ್ಮ ಕೊಡುಗೆ ಏನು, ಭಿಕ್ಷೆ ಬೇಡಲು ಬಂದವರು ಯಾರು? ಎಂದು ಹೇಳಿಕೆ ನೀಡುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ, ಕ್ಷೇತ್ರದ ಜನತೆ ತುಂಬಾ ಬುದ್ದಿವಂತರಿದ್ದಾರೆ ಯಾರು ಹೇಗೆ ಎಂಬ ವಿಷಯ ತುಂಬಾ ಚನ್ನಾಗಿ ಗೊತ್ತಿದೆ.