ದೇವಸ್ಥಾನದ ಹುಂಡಿಯಲ್ಲಿದ್ದ ಹಣ ಕದ್ದ ಕಳ್ಳರು

ಚಳ್ಳಕೆರೆ. ನ.೧೦; ಗ್ರಾಮದೇವತೆ  ಚಳ್ಳಕೆರಮ್ಮ ದೇವಸ್ಥಾನದ ಬಾಗಿಲು ಮುರಿದು ಹುಂಡಿಯಲ್ಲಿದ್ದ  ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ಕಳ್ಳರು ದೋಚಿದ ಘಟನೆ ನಡೆದಿದೆ ನಗರದ ಬಳ್ಳಾರಿ ರಸ್ತೆಯಲ್ಲಿರುವ   ಚಳ್ಳಕೆ ರಮ್ಮ ದೇವಸ್ಥಾನದಲ್ಲಿ ರಾತ್ರಿ ಸುಮಾರು 3 ರಿಂದ 5 . ಗಂಟೆ ಸುಮಾರಿನಲ್ಲಿ ಕಳ್ಳತನ ನಡೆದಿದೆ ದೇವಸ್ಥಾನದ ಆವರಣದಲ್ಲಿ ಮುಂಭಾಗ  ಕಬ್ಬಿಣದ ಗೇಟ್ ನ್ನು ಕಟ್ ಮಾಡಿ ನಂತರ ಒಳ ನುಸುಳಿದ  ಕಳ್ಳರು ಮುಖ್ಯದ್ವಾರ ದ ಬಾಗಿಲನ್ನು ಕಬ್ಬಿಣದ ರಾಡಿನಿಂದ ಮುರಿದು ಗರ್ಭಗುಡಿಯ ದ್ವಾರದ ಬಳಿ  ಇಟ್ಟಿದ್ದ  2 ಉಂಡಿಯನ್ನು ದೊಚಿದ್ದಾರೆ.ದೇವಸ್ಥಾನದ ಪಕ್ಕದಲ್ಲಿ ಬೆಳೆದಿರುವ ಪೊದೆಯಲ್ಲಿ ಉಂಡಿಯನ್ನೂ ಒಡೆದು   ಅದರಲ್ಲಿ ಇದ್ದ 1 ಲಕ್ಷಕ್ಕೂ ಹೆಚ್ಚು ಹಣವನ್ನು ಕಳ್ಳರು ದೋಚಿದ್ದಾರೆ ದೇವಸ್ಥಾನದ ಪೂಜಾರಿ ಬಸವರಾಜ ಮಾಹಿತಿ ನೀಡಿ ಸುಮಾರು 3 ತಿಂಗಳಿಂದ ಉಂಡಿಯ ಹಣವನ್ನು ತೆಗೆದಿರಲಿಲ್ಲ ಸುಮಾರು 1.50 ಲಕ್ಷಕ್ಕೂ ಅಧಿಕ  ಹಣ ಉಂಡಿಯಲ್ಲಿತ್ತು ಎಂದು ಹೇಳಿದರು      ಸುದ್ದಿ ತಿಳಿದ ಕೂಡಲೇ ತಹಶೀಲ್ದಾರ್ ಎನ್ ರಘುಮೂರ್ತಿ, ಸರ್ಕಲ್ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ, ಎಸ್  ಐ ಮಹೇಶ್ ಗೌಡ   ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲು ಮಾಡಿದ್ದಾರೆ.Attachments area