ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಬದ್ದ-ಅಬ್ಬಯ್ಯ

ಹುಬ್ಬಳ್ಳಿ, ಏ 10: ನೇಕಾರ ನಗರದ ಬಾಲಾಜಿ ಕಾಲನಿಯ ಶ್ರೀಮಾತಾ ಹಿಂಗೂಲಾಂಬಿಕಾ ಭಾವಸಾರ ಕ್ಷತ್ರಿಯ ಸಮಾಜದ 11ನೇ ವಾರ್ಷಿಕೋತ್ಸವ ಹಾಗೂ ನೂತನ ಶ್ರೀಮಾತಾ ಹಿಂಗೂಲಾಂಬಿಕಾ ದೇವಸ್ಥಾನದ ಕಳಸಾರೋಹಣ, ಪಲ್ಲಕ್ಕಿ ಉತ್ಸವ ಸಮಾರಂಭವು ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
ಕಳಸಾರೋಹಣ ನಿಮಿತ್ತ ದೇವಸ್ಥಾನಕ್ಕೆ ಭೇಟಿ ನೀಡಿದ ಶಾಸಕ ಪ್ರಸಾದ ಅಬ್ಬಯ್ಯ ಅವರು ಹಿಂಗೂಲಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನಸ್ಸಿನ ಶಾಂತಿ- ನೆಮ್ಮದಿಗೆ ದೇವಸ್ಥಾನಗಳು ಅವಶ್ಯವಿದ್ದು, ಧಾರ್ಮಿಕ ಕಾರ್ಯಕ್ರಮಗಳಿಂದ ಮನಸ್ಸಿನ ಪರಿವರ್ತನೆ ಸಾಧ್ಯವಾಗಲಿದೆ ಎಂದರು.
ಹಿಂಗೂಲಾಂಭಿಕಾ ದೇವಿಯ ದೇವಸ್ಥಾನ ಸಂಪರ್ಕಿಸುವ ರಸ್ತೆಯನ್ನು ಈ ಹಿಂದೆ ನೀಡಿದ ಭರವಸೆಯಂತೆ 31 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಅಪಾರ ಭಕ್ತರನ್ನು ಹೊಂದಿರುವ ದೇವಿಯ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ದವಾಗಿರುವುದಾಗಿ ಶಾಸಕರು ಭರವಸೆ ನೀಡಿದರು.
ಭಾವಸಾರ ಕ್ಷತ್ರಿಯ ಸಮಾಜದ ಪಂಚ ಕಮಿಟಿ ಅಧ್ಯಕ್ಷ ಕುಶಾಲರಾವ್ ಬೇದರೆ, ಉಪಾಧ್ಯಕ್ಷ ಬಾಲಚಂದ್ರ ಕಠಾರೆ, ಗಣೇಶ ಟಿಕಾರೆ, ವೆಂಕಟೇಶ ಮಹೇಂದ್ರಕರ, ಮುಖಂಡರಾದ ವಿಜನಗೌಡ ಪಾಟೀಲ, ರಾಕೇಶ ಪಲ್ಲಾಟೆ, ಬಾಗಣ್ಣ ಬಿರಾಜದಾರ, ಶಿವು ಮಡಿವಾಳರ, ಸತೀಶ ಮಾನಶೆಟ್ಟರ್, ಶಿವು ಬೆಂಡಿಗೇರಿ, ರೇಣುಕಾತಾಯಿ ಬಗರೆ, ಯೋಗಿತಾತಾಯಿ ರಾಶಿನಕರ, ಗಾಯತ್ರಿ ಘನಾತೆ, ಲತಾ ಸುಲಾಕೆ, ಇತರರು ಇದ್ದರು.