ದೇವಸ್ಥಾನದ ವಾರ್ಷಿಕೋತ್ಸವ

ಲಕ್ಷ್ಮೇಶ್ವರ,ಮಾ23: ಪಟ್ಟಣದ ಸವಣೂರು ರಸ್ತೆಯಲ್ಲಿರುವ ಅಗಡಿ ಇಂಜಿನಿಯರಿಂಗ್ ಮತ್ತು ಅಗಡಿ ಆಸ್ಪತ್ರೆಯ ಆವರಣದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದ 12ನೇ ವಾರ್ಷಿಕೋತ್ಸವದ ಅಂಗವಾಗಿ ಸಕಲ ವಾದ್ಯ ವೈಭವಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ಪೂಜಾ ಕೈಂಕರ್ಯಗಳು ಜರುಗಿದವು.
ಅಮೆರಿಕದಲ್ಲಿ ವಾಸವಾಗಿರುವ ವೇದಮೂರ್ತಿ ಕಾರ್ತಿಕೇಯ ಶಾಸ್ತ್ರಿ ಹಾಗೂ ಸಂಗಡಿಗರಿಂದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು ಕಾಲೇಜಿನ ವಿದ್ಯಾರ್ಥಿನಿಯರ ಪೂರ್ಣ ಕುಂಭದೊಂದಿಗೆ ಸಂಸ್ಥೆಯ ಅಧ್ಯಕ್ಷರಾದ ಹರ್ಷವರ್ಧನ್ ಅಗಡಿಯವರು ಮತ್ತು ಗೀತಾ ಎಚ್ ಅಗಡಿ ಅವರು ಪೂಜಾ ವಿಧಿ ವಿಧಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶ್ರೀ ವೆಂಕಟೇಶ್ವರ ಮಹಾಸ್ವಾಮಿಯ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ ಅಲಂಕಾರ ಪೂಜಾ ಕೈಂಕರ್ಯಗಳು ಸೇರಿದಂತೆ ಹೋಮ ಹವನ ಪೂರ್ಣಾಹುತಿ ಕುಂಭ ವಿಸರ್ಜನೆ ಮಹಾ ಕುಂಭಾಭಿಷೇಕಗೋ ಪೂಜೆ ಮಹಾಮಂಗಳ ಕಾರ್ಯಕ್ರಮಗಳು ಜರುಗಿದವು.
ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಭಕ್ತರು ಭಾವಪರಶರಾಗಿ ವೆಂಕಟರಮಣ ಗೋವಿಂದ ಗೋವಿಂದ ಲಕ್ಷ್ಮಿ ರಮಣ ಗೋವಿಂದ ಗೋವಿಂದ ಎಂಬ ಉದ್ಘೋಷಗಳು ಮೊಳಗಿದವು.
ನಂತರ ಮಹಾಪ್ರಸಾದ ವ್ಯವಸ್ಥೆ ಜರಗಿತು.
ಕಾರ್ಯಕ್ರಮದಲ್ಲಿ ಶಿಶಿರ ದೇಸಾಯಿ ರಾಘು ಬೆಳಗೋಡ ಅನಿತಾ ಬೆಳಗೋಡ ಪ್ರಭಾಕರ್ ಶೆಟ್ಟ ಪ್ರಾಚಾರ್ಯರಾದ ಪರುಶುರಾಮ ಬಾರ್ಕಿ ಡಾಕ್ಟರ್ ಎನ್ ಹಯವದನ ವಿಕ್ರಂ ಶಿರೋಳ ಗಿರೀಶ್ ಅಗಡಿ ಮಾಲತೇಶ್ ಅಗಡಿ ಸೇರಿದಂತೆ ಹಾಸ್ಪಿಟಲ್ ಮತ್ತು ಕಾಲೇಜಿನ ಸಿಬ್ಬಂದಿ ವರ್ಗದವರು ಆಡಳಿತ ಮಂಡಳಿಯ ಸದಸ್ಯರು ಪ್ರಮುಖರು ಪಾಲ್ಗೊಂಡಿದ್ದರು.