ದೇವಸ್ಥಾನದ ಮೇಲ್ಛಾವಣಿ ಕುಸಿತ

ನವಲಗುಂದ,ಜೂ1 : ತಾಲ್ಲೂಕಿನ ಕೆಲ ಭಾಗಗಳಲ್ಲಿ ಶುಕ್ರವಾರ ಸಂಜೆ ಭಾರಿ ಮಳೆಯಾಗಿದ್ದು ಹನಸಿ ಗ್ರಾಮದಲ್ಲಿ ಮಳೆಗೆ ಕಲ್ಮೇಶ್ವರ ದೇವಸ್ಥಾನದ ಮೇಲ್ಚಾವಣಿ ಕುಸಿದು ಗರ್ಭ ಗುಡಿಯಲ್ಲಿರುವ ದೇವರ ಮೇಲೆ ಬಿದ್ದ ಘಟನೆ ಜರುಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಗ್ರಾಮಸ್ಥರು ಬಿದ್ದ ಮೇಲ್ಚಾವಣಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದು ಹಳೆ ಕಟ್ಟಡವಾದ ದೇವಸ್ಥಾನಕ್ಕೆ ಸರ್ಕಾರ ಆದಷ್ಟು ಬೇಗನೆ ವಿಶೇಷ ಅನುದಾನ ನೀಡಿ ನಮ್ಮೂರಿನ ಆರಾಧ್ಯ ದೈವ ಕಲ್ಮೇಶ್ವರ ದೇವಸ್ಥಾನವನ್ನು ನಿರ್ಮಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.