ದೇವಸ್ಥಾನದ ಜೀಣೋದ್ದಾರ ಕಾಮಗಾರಿ ವೀಕ್ಷೆಣೆ ಮಾಡಿದ ಈಶ್ವರ ವಜ್ಜಲ್

ಮುದುಗಲ್.ನ.೧೦-ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ.ಎಮ್ಮೆ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಯನ್ನು ಲಿಂಗಸುಗೂರು ತಾಲೂಕಿನ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಈಶ್ವರ್ ಎಂ, ವಜ್ಜಲ್ ವೀಕ್ಷಣೆ ಮಾಡಿದರು.
ನಂತರ ದೇವಸ್ಥಾನದ ಅರ್ಚಕರು ಪುರಾತನ ದೇವಾಲಯದ ಇತಿಹಾಸವನ್ನು ವಿವರಿಸಿದರು. ಇದೊಂದು ಕರ್ನಾಟಕ ಇತಿಹಾಸದ ೧೧ನೇ ಶತಮಾನದ ಕಲ್ಯಾಣಿ ಚಾಲುಕ್ಯರ ಕಾಲಘಟ್ಟದಲ್ಲಿ ನಿರ್ಮಾಣವಾದ ಇತಿಹಾಸ ಪ್ರಸಿದ್ಧ ಎಮ್ಮೆ ಬಸವೇಶ್ವರ ದೇವಾಲಯವಾಗಿದೆ ಎಂದು ಮಠದ ಅರ್ಚಕರು ಸವಿವರವಾಗಿ ವಿವರಿಸಿದರು
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಫಕೀರಪ್ಪ ಕುರಿ, ಉದಯಕುಮಾರ್ ಕಮ್ಮಾರ್, ಅಯ್ಯಪ್ಪಯ್ಯಸ್ವಾಮಿ, ಮಲ್ಲಪ್ಪ ಮಾಟೂರ್, ಶರಣಪ್ಪ ಹಂಚನಾಳ, ನಾಗರಾಜ್ ಹುಲೇಗಿ, ಆದರ್ಶ ಸಜ್ಜನ, ಅನಂತ ದಾಸ್ ಶಿವ ಕುಮಾರ್ ದೇಸಾಯಿ, ಸೇರಿದಂತೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.