ದೇವಸ್ಥಾನದ ಗರುಡಗಂಭ ಸ್ಥಾಪನೆಗೆ ಶಾಸಕರಿಂದ ಧನ ಸಹಾಯ

ಮಾನ್ವಿ ಪೆ ೨೩ :- ತಾಲೂಕಿನ ಕೋಳಿಕ್ಯಾಂಪಿನ ಆಂಜನೇಯ ಸ್ವಾಮಿ ಸೇವಸ್ಥಾನದ ಜೀರ್ಣೋದ್ಧಾರಕ್ಕೆ ಹಾಗೂ ಮುಂಭಾಗದಲ್ಲಿ ಗರುಡಗಂಭ ನಿರ್ಮಾಣಕ್ಕಾಗಿ ಶಾಸಕರ ಸಹೋದರ ರಾಮಚಂದ್ರ ನಾಯಕ ಇವರು ವೈಯಕ್ತಿಕ ೨೫ ಸಾವಿರ ನಗದು ಮೊತ್ತವನ್ನು ನೀಡಿದರು.
ನಂತರ ಮಾತಾನಾಡಿದ ಅವರು ಈ ಗ್ರಾಮದಲ್ಲಿನ ಮೂಲಭೂತ ಸೌಕರ್ಯಗಳಾದ ರಸ್ತೆ,ನೀರು,ಚರಂಡಿ, ಇನ್ನೂ ಅನೇಕ ಸೌಕರ್ಯಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುತ್ತದೆ ಮುಂದಿನ ಚುನಾವಣೆಯಲ್ಲಿ ನಿಮ್ಮ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡೋಣ ಎಂದರು.
ಈ ಸಂದರ್ಭದಲ್ಲಿ ನರಸಿಂಹ ಗೌಡ,ಶಶಿಧರ ಗೌಡ,ಹಂಪನಗೌಡ,ಗೋಪಾಲ ನಾಯಕ ಹರವಿ,ಅಮರೇಶ ಭೋವಿ,ಹನುಮಂತ ಭೋವಿ,ಮಲ್ಲಿಕಾರ್ಜುನ ನಾಯಕ,ಕೃಷ್ಣ ಭೋವಿ,ಧನರಾಜ ನಾಯಕ,ಬಸವರಾಜ ಭೋವಿ,ಆಂಜನೇಯ ಭೋವಿ,ಉಪಸ್ಥಿತರಿದ್ದರು