ದೇವಸ್ಥಾನದ ಉದ್ಘಾಟನೆ


(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ, ಆ 30: ತಾಲೂಕಿನ ಕೊಟಗೊಂಡಹುಣಸಿ ಗ್ರಾಮದಲ್ಲಿ ನೂತನವಾಗಿ ನಿರ್ಮಿತ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು.
ಆ.24 ರಂದು ಶ್ರೀ ಚನ್ನಯ್ಯ ಹಿರೇಮಠರ ನೇತೃತ್ವದಲ್ಲಿ ಮೂರ್ತಿಯ ಮೆರವಣಿಗೆ ನಡೆಯಿತು. ಈ ವೇಳೆ ಡೊಳ್ಳು, ಝಾಂಜ್, ಭಜನಾ ಮೇಳದೊಂದಿಗೆ ಭಂಡಾರದ ಓಕುಳಿ ಮೂರ್ತಿ ಮೆರವಣಿಗೆಗೆ ಮೆರಗು ನೀಡಿದವು.
ಆ. 25 ರಂದು ಶ್ರೀ ಮಹಾಗಣಪತಿ ಪೂಜೆ, ನಂದಿ ಸ್ಥಾಪನೆ, ಮಂಟಪ ಪೂಜೆ, ಕಂಕಣ ಬಂಧನ, ಜಲಾಧಿಯಾಗ, ಕ್ಷೀರಾಧಿಯಾಗ, ಮಂಗಳಾರತಿ ನೇರವೇರಿತು.
ಆ. 26 ರಂದು ಪುಷ್ಪಾಧಿಯಾಗ, ಧಾನ್ಯಾದಿಯಾಗ, ಮಂಗಳಾರತಿ ನಡೆಯಿತು. ಯರನಾಳದ ಶ್ರೀ ಶಿವಪ್ರಸಾದ್ ದೇವರು ಪ್ರವಚನ ಮಾಡಿದರು.
ಶಾಸಕ ಎಮ್.ಆರ್. ಪಾಟೀಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.