ದೇವಸ್ಥಾನಗಳ ಕಳ್ಳತನ

ಸಿಂದಗಿ;ನ.12: ತಾಲೂಕಿನ ಕನ್ನೋಳ್ಳಿ ಗ್ರಾಮದಲ್ಲಿ ಬಾನುವಾರ ತಡರಾತ್ರಿ 2 ಗಂಟೆ ಸುಮಾರಿಗೆ ಯಾರೋ ಕಳ್ಳರು ಎರಡು ದೇವಸ್ಥಾನಗಳ ಗರ್ಬಗುಡಿಯ ಕೀಲಿ ಮುರಿದು ಕಳ್ಳತನ ನಡೆಸಿ ಅಂದಾಜು ರೂ 2.54 ಲಕ್ಷ ಮೌಲ್ಯದ ದೇವರ ಬಂಗಾರ ಹಾಗೂ ಬೆಳ್ಳಿಯ ಒಡವೆಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಸಿಂದಗಿ ಪೊಲೀಸಠಾಣೆಯಲ್ಲಿ ಸೋಮವಾರ ಸಂಜೆ ಪ್ರಕರಣ ದಾಖಲಾಗಿದೆ.

 ಗ್ರಾಮದ ಮದ್ಯ ಇರುವ ಲಕ್ಷ್ಮೀ ದೇವಸ್ಥಾನದ ದ್ವಾರ ಬಾಗಿಲಿನ ಕೀಲಿ ಮುರಿದು ಒಳ ನುಗ್ಗಿದ ಕಳ್ಳರು ದೇವಿಯ ಮೈಮೇಲೆ ಹಾಕಿರುವ  1 ಬಂಗಾರದ ಬೋರಮಾಳ, ಬಂಗಾರದ ಗುಂಡ, ಬಂಗಾರದ ತಾಳಿ, ಮೂಗಿನ ನತ್ತ ಬೆಳ್ಳಿಯ ಲಿಂಗದ ಕಾಯಿ, ಕಿರೀಟ್‍ಗಳು, ರುಳಿ, ಡಾಬ, ಬೆಳ್ಳಿಯ ಮೂರ್ತಿ ಸೇರಿದಂತೆ  ರೂ 2.22 ಲಕ್ಷಗಳ ಮೌಲ್ಯದ ಒಡವೆಗಳನ್ನು ದೋಚಿದ್ದಾರೆ. ದೇವಸ್ಥಾನದ ಹೊರ ವಲಯದ ಕಟ್ಟಿಯ ಮೇಲೆ ಮಲಗಿದ ಪೂಜಾರಿ ರಾತ್ರಿ ಎದ್ದಾಗ ದೇವಸ್ಥಾನ ದ್ವಾರ ಬಾಗಿಲು ತೆರೆದಿರುವುದನ್ನು ನೋಡಿ ಗ್ರಾಮಸ್ಥರಿಗೆ ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ.

    ಅಲ್ಲದೆ ರಾಷ್ಟ್ರೀಯ ಹೆದ್ದಾರಿಯ ಬಳಿಯ ಗ್ರಾಮದ ಹೊರ ವಲಯದಲ್ಲಿನ ಲಗಮವ್ವ ದೇವಸ್ಥಾನದಲ್ಲಿನ ದೇವರ ಮೈಮೇಲಿದ್ದ ಬಂಗಾರದ ಮೂಗಿನ ನತ್ತ, ಬಂಗಾರದ ತಾಳಿ, ಬಂಗಾರದ್ ಗುಂಡ, ಕೀವಿಯಲ್ಲಿನ ಹೂವು, ಬೆಳ್ಳಿಯ ಲಿಂಗದ ಕಾಯಿ, ಬೆಳ್ಳಿಯ ಬೆತ್ತ ಸೇರಿದಂತೆ ರೂ 32 ಸಾವಿರಗಳ ಕಿಮ್ಮತ್ತಿನ ಆಭರಣಗಳನ್ನು ಯಾರೋ ಕಳುವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ಗ್ರಾಮದ ಸಿದ್ದಪ್ಪ  ಚೆನ್ನಬಸಪ್ಪ ನಾಗಠಾಣ ದೂರಿನಲ್ಲಿ ತಿಳಿಸಿದ್ದಾರೆ.

   ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ, ಇಂಡಿ ಡಿಎಸ್‍ಪಿ ಎಂ.ಬಿ.ಸಂಕದ, ಸಿಪಿಐ ಎಚ್.ಎಂ.ಪಾಟೀಲ, ಪಿಎಸ್‍ಐ ಸಂಗಮೇಶ ಹೊಸಮನಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.