ದೇವಸ್ಥಾನಗಳು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಬೇಕು

 ಚಿತ್ರದುರ್ಗ. ಸೆ.೧೬; ನಮ್ಮ ಹಿರಿಯರು ದೇವಸ್ಥಾನಗಳನ್ನು ಕಟ್ಟಿಸಿ, ಅವುಗಳ ಮಧ್ಯೆ ನೃತ್ಯ ಮಾಡಲು, ಗಾಯನ ಹಾಡಲು ಅವಕಾಶ ಕಲ್ಪಿಸಿ ಕೊಡುತ್ತಿದ್ದರು. ಇದರಿಂದ ಗ್ರಾಮೀಣ ಪ್ರತಿಭೆಗಳು, ನೃತ್ಯ ಕಲಾವಿದರು, ಗಾಯಕರು, ಕಲಾವಿದರು ತಮ್ಮ ಪ್ರತಿಭೆಯನ್ನು ಹೊರಹೊಮ್ಮಲು, ಅವಕಾಶವಾಗಿ ನೀಡುತ್ತಿದ್ದವು. ಇಂದು ಸಹ ಅದೇ ರೀತಿ ನಾವು ದೇವಾಲಯಗಳನ್ನ, ಸಾಂಸ್ಕöÈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷರಾದ ಡಾಕ್ಟರ್ ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು. 
ಅವರು ನಗರದ ತಮಟಕಲ್ಲು ರಸ್ತೆಯಲ್ಲಿರುವ ಶ್ರೀ ಈಶ್ವರ ದೇವಸ್ಥಾನದ ಮುಂಭಾಗದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕಲ್ಪವೃಕ್ಷ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ದೇವಸ್ಥಾನಗಳು, ಚರ್ಚುಗಳು, ಮಸೀದಿಗಳು, ಪ್ರತಿಯೊಂದು ಸಹ ಜನರನ್ನ ಸಾಂಸ್ಕöÈತಿಕ ಚಟುವಟಿಕೆಗಳಿಗೆ ಬಳಸಿ, ಆ ಜನರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವುದೇ ಅವುಗಳ ಕರ್ತವ್ಯವಾಗಿದೆ. ಜನರನ್ನು ಧರ್ಮದ ದಾರಿಯಲ್ಲಿ ನಡೆಸಿ, ಸತ್ಯ ಅಹಿಂಸೆಗಳನ್ನು ಬೋಧಿಸಿ, ಅವರನ್ನು ಸಾಮಾಜಿಕ ಸೇವೆಗೆ ಸಿದ್ಧ ಮಾಡುವುದೇ ಇವುಗಳ ಕೆಲಸವಾಗಬೇಕಾಗಿದೆ. ಭಾರತೀಯರು ಬಡತನದಲ್ಲಿದ್ದರೂ ಸಹ ದೇವಸ್ಥಾನಗಳ ಕಟ್ಟುವುದರಲ್ಲಿ ಅಪ್ರತಿಮ ಸಾಧನೆಗಳನ್ನು ಮಾಡಿದ್ದಾರೆ. ಸಾಕಷ್ಟು ಗುಡ್ಡಗಳ ಮೇಲೆ, ಬೆಟ್ಟಗಳ ಮೇಲೆ, ಸಣ್ಣದಾದ ಕೆಲವು ಕಲ್ಲು ಕಂಬಗಳನ್ನು ನೆಟ್ಟು, ದೇವಸ್ಥಾನಗಳನ್ನು ಸೃಷ್ಟಿಸಿ, ದೇವರನ್ನು ಕಾಣುವ ಪ್ರಯತ್ನ ಪಟ್ಟಿದ್ದಾರೆ. ಇಂದಿನ ಪಾಶ್ಚಿಮಾತ್ಯ ಸಂಸ್ಕöÈತಿ, ಗುಡ್ಡಗಳ ಬೆಟ್ಟಗಳ ಮೇಲೆ, ರೆಸಾರ್ಟ್ಗಳನ್ನು ಸ್ಥಾಪಿಸಲು ಹೊರಟಿವೆ, ಇಲ್ಲದಿದ್ದರೆ ಬಾರ್‌ಗಳನ್ನ ತೆಗೆದು, ಕುಡಿತದ ತಾಣಗಳನ್ನಾಗಿ ಮಾಡಿ, ನಮ್ಮ ಸಂಸ್ಕöÈತಿಯನ್ನು ನಾಶ ಮಾಡುತ್ತಿವೆ ಎಂದರು. ನಮ್ಮ ಹಿರಿಯರು ಪ್ರಕೃತಿಯ ಪ್ರತಿಯೊಂದು ಸೊಬಗಿನ ಮಧ್ಯೆ ದೇವರನ್ನ್ ಸ್ಥಾಪಿಸಿ, ದೇವರನ್ನು ಕಾಣಲು ಪ್ರಯತ್ನಿಸಿದ್ದಾರೆ, ಭಾರತೀಯ ತಾನು ಚಾಪೆಯ ಮೇಲೆ ಮಲಗಿದರು ಪರವಾಗಿಲ್ಲ, ದೇವಸ್ಥಾನಕ್ಕೆ ಹಣ ಕೊಡುವ ಭಕ್ತಾದಿಗಳ ದಂಡೇ ಈ ದೇಶದಲ್ಲಿ ತುಂಬಿ ತುಳುಕುತ್ತಿದೆ. ದೇವಸ್ಥಾನಕ್ಕೆ ಹಣ ನೀಡುವ ಬಡವರು, ತಮ್ಮ ಪರಿಸ್ಥಿತಿಯ ಸುಧಾರಿಕೆಯ ಬಗ್ಗೆ ದೇವಸ್ಥಾನದವರೇ ಕ್ರಮಕೈಗೊಳ್ಳಬೇಕೆಂದು ನಿರೀಕ್ಷೆಯಲ್ಲಿ ಇದ್ದಾರೆ ಎಂದರು.ಹಾಗಾಗಿ ಕೋಟ್ಯಂತರ ಹಣ, ಸಂಗ್ರಹ ಮಾಡುವ ದೇವಸ್ಥಾನಗಳು, ಆ ಹಣವನ್ನು ಸಮಾಜದ ಸುಸ್ಥಿತಿಗೆ ತರಲು ಬಳಕೆ ಮಾಡಬೇಕಾಗುತ್ತದೆ. ಭಕ್ತಾಧಿಗಳಿಂದ ಬಂದ ಹಣದಲ್ಲಿ ಅವರು ಬಡವರ ಸೇವೆ ಮಾಡಿ, ನಿಜವಾದ ದೇವರನ್ನು ಕಾಣಲು ಪ್ರಯತ್ನಿಸಬೇಕಾಗಿದೆ. ಸಾಕಷ್ಟು ದೇವಸ್ಥಾನಗಳು ಜಾನಪದಗೀತೆ, ನೃತ್ಯ, ಕಲೆಗಳು, ಯಕ್ಷಗಾನ, ಭರತನಾಟ್ಯ, ಕ್ರೀಡೆಗಳಿಗೆ, ಚಿತ್ರಕಲೆಗೆ, ರಂಗೋಲಿ, ಸ್ಪರ್ಧೆ, ವಚನಗಾಯನಕ್ಕೆ, ಸಂಗೀತಾಭ್ಯಾಸಕ್ಕೆ, ಸ್ಥಳಾವಕಾಶಗಳನ್ನು ಕಲ್ಪಿಸಿ, ಅಲ್ಲಿರುವ ಪ್ರತಿಭೆಗಳನ್ನ ಬೆಳೆಸುವಂತಹ ವಿಶ್ವವಿದ್ಯಾಲಯದಂಥ ಕೆಲಸವನ್ನ ಮಾಡಬೇಕಾಗಿದೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು, ಹಾಸ್ಟೆಲ್‌ಗಳನ್ನು, ಅನಾಥಾಶ್ರಮಗಳನ್ನು ಕಟ್ಟಿ, ಸಂಸ್ಕöÈತ ಶಾಲೆಗಳನ್ನ ತೆಗೆದು, ಬೇಕಾದಷ್ಟು ಸಾಮಾಜಿ ಕೆಲಸಗಳನ್ನು, ದೇವಸ್ಥಾನದ ಆಡಳಿತ ಮಂಡಳಿಯವರು ಮಾಡಬಹುದು ಎಂದರು. ಆದ್ದರಿಂದ ದೇವಸ್ಥಾನಗಳ ಬಗ್ಗೆ ನಾವು ಇನ್ನೊಂದಿಷ್ಟು ಸಂಶೋಧನೆಗಳನ್ನು ಮಾಡಿ, ಅವುಗಳ ಸುಸ್ಥಿತಿಗೆ ತರುವುದರ ಬಗ್ಗೆ, ಅವುಗಳಿಂದ ಸಾಮಾಜಿಕ ಬದಲಾವಣೆ ತರುವುದರ ಬಗ್ಗೆ ಪ್ರಯತ್ನಿಸಬಹುದು. ಬಹಳಷ್ಟು ಪ್ರವಾಹಪೀಡಿತ ಪ್ರದೇಶಗಳಲ್ಲಿ, ಮುಳುಗಡೆಯಾದ ಪ್ರದೇಶಗಳಲ್ಲಿ, ಬಿರುಗಾಳಿ, ಸುಂಟರಗಾಳಿ, ಅತಿಯಾದ ಮಳೆಯಿಂದ, ಮನೆಗಳು ಕುಸಿದಾಗ, ಅವರನ್ನು ದೇವಸ್ಥಾನದ ಆವರಣದೊಳಗೆ ರಕ್ಷಿಸಿದ ಉದಾಹರಣೆಗಳು ಸಾಕಷ್ಟಿವೆ. ಭದ್ರವಾದ ಕಟ್ಟಿದ ಕಲ್ಲಿನ ಕಟ್ಟಡಗಳು ದೇವಸ್ಥಾನದಲ್ಲಿ ಪ್ರಕೃತಿ ವಿಕೋಪಗಳನ್ನು ಎದುರಿಸುವಷ್ಟು, ಶಕ್ತಿ ಶಾಲಿಯಾಗಿ ಕಟ್ಟಿದಂತ ದೇವಸ್ಥಾನಗಳು ನಮ್ಮಲ್ಲುಂಟು. ಮಕ್ಕಳಿಗೆ ವಿದ್ಯೆ, ವಿದ್ಯಾಭ್ಯಾಸ ಪಡೆಯಲು, ಆಶ್ರಯ ತಾಣಗಳಾಗಿವೆ. ಕಲಾ ಚಟುವಟಿಕೆಗಳಿಗೆ ದೇವಸ್ಥಾನವೇ ಸೂಕ್ತವಾದ ವೇದಿಕೆಗಳಾಗಿವೆ. ಹಿಂದೆಲ್ಲ ದೇವಸ್ಥಾನಗಳು ಕಲಾ ಕೇಂದ್ರಗಳAತೆ ಕಾರ್ಯ ನಿರ್ವಹಿಸಿ, ರಚನಾತ್ಮಕ ಕಾರ್ಯಕ್ರಮಗಳನ್ನು ಸಹ ದೇವಸ್ಥಾನಗಳನ್ನ ಬಳಕೆ ಮಾಡಿದ್ದುಂಟು. ಹಾಗಾಗಿ ನಾವು ದೇವಸ್ಥಾನಗಳ ಬಗ್ಗೆ ಹೆಚ್ಚಿನ ಜನ ಜಾಗೃತಿಯನ್ನು ಮೂಡಿಸಬೇಕಾಗಿದೆ ಎಂದರು.ಮಕ್ಕಳು ಜಾನಪದ ಗೀತೆ, ಕೋಲಾಟ, ಭರತನಾಟ್ಯ ನೃತ್ಯಗಳನ್ನು ಮಾಡಿ, ಭಕ್ತಾದಿಗಳನ್ನು ರಂಜಿಸಿದರು. ಹೆಚ್. ಎಸ್. ರಚನಾ ಮತ್ತು ಹೆಚ್.ಎಸ್. ಪ್ರೇರಣಾ ವಚನಗಳನ್ನ, ಭಕ್ತಿಗೀತೆಗಳನ್ನು ಹಾಡಿ, ಭರತನಾಟ್ಯ ಕೋಲಾಟ ಜಾನಪದ ನೃತ್ಯಗಳನ್ನ ಮಕ್ಕಳಿಗೆ ಬೋಧಿಸಿದರು.ಈಶ್ವರ ದೇವಸ್ಥಾನ ನಗರದ ಅರ್ಚಕರಾದ ಸಿದ್ಧಾಬೋವಿ ಮತ್ತು ಡಾ. ಕುಮಾರ್, ನಾಗರಾಜ್, ಮೋಹನ್, ಶಿವಪ್ರಕಾಶ್, ರಾಜಣ್ಣ, ಗಿರೀಶ್, ಸಿದ್ಧಾಬೋವಿ ಮತ್ತು ಸದಸ್ಯರು ಭಾಗವಹಿಸಿದ್ದರು.