ದೇವಸ್ಥಾನಗಳು ನಮ್ಮ ಶ್ರೇಷ್ಠ ಸಾಂಸ್ಕøತಿಕ ಪರಂಪರೆಯ ರಾಯಭಾರಿಗಳು

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ, ಜು6: ದೇವಸ್ಥಾನಗಳು ಕೇವಲ ಧಾರ್ಮಿಕ ಕ್ಷೇತ್ರಗಳಲ್ಲ. ಅವು ನಮ್ಮ ಶ್ರೇಷ್ಠ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಅತಿ ಮುಖ್ಯ ರಾಯಭಾರಿಯಾಗಿವೆ” ಎಂದು ಲಕ್ಷ್ಮೇಶ್ವರ ತಾಲೂಕಿನ ತಹಸೀಲ್ದಾರರಾದ ಕೆ ಆನಂದಶೀಲ ಅವರು ಅಭಿಪ್ರಾಯ ಪಟ್ಟರು.ಅವರು ಲಕ್ಷ್ಮೇಶ್ವರದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ಹಮ್ಮಿಕೊಳ್ಳಲಾದ 1ಪುಲಿಗೆರೆ ಪೌರ್ಣಿಮೆ’ ಕಾರ್ಯಕ್ರಮದ 20ನೇ ಸಂಚಿಕೆಯನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಸಂತ ಶಿಶುನಾಳ ಶರೀಫರ ಕುರಿತು ಉಪನ್ಯಾಸ ನೀಡಿದ ಉಪನ್ಯಾಸಕರಾದ ಜಗದೀಶ ಶಿರಹಟ್ಟಿ ಅವರು ಮಾತನಾಡಿ “ಶಿಶುವಿನಾಳ ಶರೀಫರು ಸರ್ವಧರ್ಮ ಸಮನ್ವಯತೆಯ ಪ್ರತೀಕವಾಗಿದ್ದಾರೆ” ಎಂದು ಅಭಿಪ್ರಾಯ ಪಟ್ಟರು. ಟ್ರಸ್ಟ್ ಕಮೀಟಿಯ ಅಧ್ಯಕ್ಷರಾದ ಚಂಬಣ್ಣ ಬಾಳಿಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಶಿಕ್ಷಕರು ಸಾಹಿತಿಗಳಾದ ಎಸ್.ಎಫ್. ಆದಿ ಹಾಗೂ ನಿವೃತ್ತ ಪುರಸಭಾ ನೌಕರರಾದ ಶ್ರೀ ಬಸವಣ್ಣಪ್ಪ ನಂದೆಣ್ಣವರ ಇವರನ್ನು ಸನ್ಮಾನಿಸಲಾಯಿತು. ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಡಿ.ಎಚ್.ಪಾಟೀಲ, ಲಕ್ಷ್ಮೇಶ್ವರ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೆÇೀ ಮ್ಯಾನೇಜರ್ ಶ್ರೀಮತಿ ಸವಿತಾ ಆದಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳಾದ ನೀಲಪ್ಪ ಕರ್ಜಕಣ್ಣವರ, ಹಿರಿಯರಾದ ನೀಲಪ್ಪಣ್ಣ ಕನವಳ್ಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಟ್ರಸ್ಟ್ ಕಮಿಟಿಯ ಸಂಚಾಲಕರಾದ ಜಿ.ಎಸ್ ಗುಡಿಗೇರಿ ಅತಿಥಿ ಸ್ಥಾನ ವಹಿಸಿಕೊಂಡು ವಂದನಾರ್ಪಣೆ ನಡೆಸಿಕೊಟ್ಟರು. ಕಮಿಟಿಯ ಕಾರ್ಯದರ್ಶಿಯಾದ ಈಶ್ವರ ಮೆಡ್ಲೇರಿ ಸ್ವಾಗತಿಸಿದರು. ಉಪನ್ಯಾಸಕ ಪೆÇ್ರ. ಸೋಮಶೇಖರ ಕೆರಿಮನಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಕುಮಾರಿ ವಿದ್ಯಾ ಹೊಟ್ಟಿ ಪ್ರಾರ್ಥಿಸಿದರು. ಕುಮಾರಿ ಸ್ನೇಹ ಮಾಲಿಗೌಡ್ರು ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಶ್ರೀ ಸೋಮೇಶ್ವರ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.