ದೇವಸ್ಥಾನಗಳಿಗೆ ಪವಿತ್ರ ಗಂಗಾ ಜಲ ವಿತರಣೆ

ಸಂಜೆವಾಣಿ ವಾರ್ತೆ

 ಹರಿಹರ.ಮಾ.೯; ಗಂಗಾ ಪಾನ, ತುಂಗಾ ಸ್ನಾನ ಎಂದು ಹಿಂದೂ ಪುರಾಣಗಳಲ್ಲಿ ಉಲ್ಲೇಖವಿದೆ. ಪವಿತ್ರ ಗಂಗಾ ಜಲ ತೀರ್ಥರೂಪದಲ್ಲಿ ಸೇವನೆ, ತುಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಸಕಲ ಪಾಪಗಳು ಪರಿಹಾರವಾಗಿ, ಬರುವ ಸಂಕಷ್ಟಗಳು ದೂರವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಅಚಲವಾದ ನಂಬಿಕೆಯಿದೆ. ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಮಿನಿ ವಿಧಾನಸೌಧದಲ್ಲಿ ಹರಿಹರ ತಾಲೂಕಿನ ಮುಜರಾಯಿ ಇಲಾಖೆ ಮತ್ತು ಇತರೆ ದೇವಸ್ಥಾನಗಳಿಗೆ ಕಾಶಿಯಿಂದ ಬಂದ ಪವಿತ್ರ ಗಂಗಾಜಲ ವಿತರಣೆಯನ್ನು  ತಾಲೂಕು ಕಚೇರಿಯ  ಮುಜರಾಯಿ ಶಿರಸ್ತೆದಾರ್ ಸಂಗೀತ ಜೋಶಿ ಮಾಡಿದರುಶ್ರೀ ಹರಿಹರೇಶ್ವರ  ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ವಾರಿಜ ವೆಂಕಟೇಶ್. ಗ್ರಾಮ  ಸಹಾಯಕ  ಗುರುರಾಜ್ . ತಾಸಿಲ್ದಾರ್ ವಾಹನ ಚಾಲಕ ನಾಗರಾಜ್ . ಇತರರು ಗಂಗಾ ಜಲ ವಿತರಣೆ ಕಾರ್ಯಕ್ರಮದಲ್ಲಿ ಇದ್ದರು