ದೇವಸ್ಥಾನಗಳಿಂದ ಶಾಂತಿ ನೆಮ್ಮದಿ ದೊರಕುತ್ತದೆ: ಶಾಸಕ ಡಾ. ಸಿದ್ದು ಪಾಟೀಲ್

(ಸಂಜೆವಾಣಿ ವಾರ್ತೆ)
ಹುಮನಾಬಾದ್:ಮೇ.30: ತಾಲ್ಲೂಕಿನ ಸೀತಾಳಗೇರಾ ಗ್ರಾಮದ ಹನುಮಾನ, ಲಕ್ಷ್ಮಿದೇವಿ ಹಾಗೂ ಭಕ್ತ ಕುಂಬಾರ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರದಲ್ಲಿ
ಶಾಸಕ ಡಾ. ಸಿದ್ದು ಪಾಟೀಲ್ ಮಾತನಾಡಿದರು.
ಇಂಥ ಧಾರ್ಮಿಕ ಕಾರ್ಯಕ್ರಮಗಳಿಂದ ಗ್ರಾಮಗಳಲ್ಲಿ ಶಾಂತಿ ಸೌಹಾರ್ದದಿಂದ ಬದುಕಲು ಸಾಧ್ಯವಿದೆ. ಎಲ್ಲರೂ ಸೌಹರ್ದ ದಿಂದ ಎಂದು ನುಡಿದರು .
ದಿವ್ಯಾ ಸಾನಿಧ್ಯ ವಹಸಿದ ಹೀರೆಮಠ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ. ಷ. ಬ್ರ ವಿರುಪಾಕ್ಷ ಶಿವಾಚಾರ್ಯರು ಮತ್ತು ಶ್ರೀ ಶ್ರೀ ಸ್ವಂತ ಮತ್ತು ಕಲ್ಮೂಡ ಆಶ್ರಮದ ಶರಣ ಶಂಕರಲಿಗ ಮಹಾರಾಜರ ಆರ್ಶೀವಾದ ಪಡೆದುಕೊಂಡು ಕಾರ್ಯಕ್ರಮಗಳ ಕುರಿತು ಗ್ರಾಮಗಳಲ್ಲಿ ಪಾರಂಪರಿಕವಾಗಿ ಶಾಂತಿ, ನೆಮ್ಮದಿ ಮಾನವ ಕುಲದಲ್ಲಿ ಮೈಗೂಡಿಸಿಕೊಂಡಾಗ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿ ನಡೆಯುವದರಿಂದ ಮಾನವ ಧರ್ಮಕ್ಕೆ ಶಾಂತಿ ನೀಡುತ್ತದೆ. ಇದರಿಂದ ಗ್ರಾಮದಲ್ಲಿ ನಾವೆಲ್ಲರೂ ಸೋದರತ್ವದಿಂದ ಬಾಳಬೆಕೆಂದು ತಿಳಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುಭಾಷ ಕಲ್ಲೂರ, ಶೈಲೇಶ ಖೇಣಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಸ್ತೂರಿಬಾಯಿ, ಅರುಣಕುಮಾರ, ಗ್ರಾಮ ಪಂಚಾಯತ್ ಸದಸ್ಯರಾದ ಅರ್ಜುನ ಮುದನಾಳ, ಚನ್ನಬಸಪ್ಪಾ ಚಿಟಗುಪ್ಪಾ, ಬಸವರಾಜ ಮೇತ್ರೆ, ನಾಗಮೂರ್ತಿ ಸುತಾರ, ಶಿವಾನಂದ ಹಜಾರೆ, ಗೋವಿಂದ ಜಟಗೊಂಡ, ಅರುಣ ನಿಂಗಗೊಡ, ಮಲ್ಲಿಕಾರ್ಜುನ ಸಿಗಿ, ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.