ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಅಭಿಷೇಕ

ಶಹಾಪುರ ;ಮಾ.4: ಶಹಾಪುರ ಮತಕ್ಷೇತ್ರದ ಜನಪ್ರಿಯ ಶಾಸಕರು ಮಾಜಿ ಸಚಿವರು ಅಭಿವೃದ್ಧಿಯ ಹರಿಕಾರರು ಸನ್ಮಾನ್ಯ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಅವರ 63 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿ ಬಳಗದ ವತಿಯಿಂದ ಇಂದು ಬೆಳಿಗ್ಗೆ ನಗರದ ಮಾರುಕಟ್ಟೆಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಮಾನ್ಯ ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಅಭಿಷೇಕ ಪೂಜೆ ಮಾಡಿಸಲಾಯಿತು. ನಂತರ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿ ನಗರದ ಗೋ ಶಾಲೆಗೆ ಹೋಗಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಅವುಗಳಿಗೆ ದವಸ ಧಾನ್ಯ ವಿತರಿಸಿ ಹಾಗೂ ಕೆಲವು ನಗರದ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪುಸ್ತಕ,ಪೆನ್ನು, ಹಾಗೂ ಇನ್ನಿತರ ಕಲಿಕಾ ಸಾಮಗ್ರಿಗಳ ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಹಣಮಂತ್ರಾಯಗೌಡ ರಾಕಮಗೇರಾ , ಸದಸ್ಯರಾದ ಸಯ್ಯದ್ ಮುಸ್ತಪ ದರ್ಬಾನ, ಬಸವರಾಜ್ ಚೆನ್ನೂರ್, ಮಹೇಶ್ ಮಡಿವಾಳ್ಕರ್, ಶರಣಪ್ಪ ಮುಂಡಾಸ್, ಶಾಸಕರ ಆಪ್ತ ಸಹಾಯಕರಾದ ಶಿವಶರಣ ಇಟಗಿ, ಮುನಿಯಪ್ಪ ವಾಲಿ,ಯುವ ಸಮಿತಿ ಅಧ್ಯಕ್ಷರಾದ ಮೌನೇಶ ನಾಟೇಕಾರ, ದೇವಪ್ಪ ತೋಟಗೇರಾ, ಶಾಂತು ಪಾಟೀಲ್, ಮಡಿವಾಳಪ್ಪ ಪಾಟೀಲ್,ಮಲ್ಲನಗೌಡ,ಲಕ್ಮಣ ದೇವಿನಗರ, ರಾಮಣ್ಣ,ಗುರು ಮಣಿಕಂಠ,ಅಲ್ಲಾ ಪಟೇಲ್, ಭೀಮಣ್ಣ ಜುನ್ನಾ,ರಾಜು ಆನೆಗುಂದಿ, ಮಲ್ಲಯ್ಯ ಇಟಗಿ, ಆದಮ್ ಪಟೇಲ್,ರಾಜು ರಸ್ತಾಪುರ, ಧರ್ಮಣ್ಣ, ಸಂಗನಗೌಡ, ಅನಿಲ ಸಪ್ಪುರ್, ಅನಿಲ ಅಲಬನೂರ್, ಸಿದ್ದು ಮುಂಡಾಸ್, ಶರಣು ಪಾಟೀಲ್,ರಾಜು ಚಂದಾಪುರ, ವೀರೇಶ್ ಮದರಿ,ಬಸ್ಸು ಮದ್ರಿಕಿ,ನಾಗು ಗಜಕೋಶ್,ಶರಣು, ಸುನಿಲ್,ಮಲ್ಲಿಕಾರ್ಜುನ ಕಟ್ಟಿಮನಿ, ಮಹೇಶ್ ಮದರಿ, ದಯಾನಂದ ರೆಡ್ಡಿ,ಶರಣಪ್ಪ ಗುಂಡಳ್ಳಿ,ಬಸವರಾಜ್ ಕಾನಗೊಂಡ,ನಾಗು,ಹಿರಿಯ ಕಾಂಗ್ರೆಸ್ ಮುಖಂಡರು ಪಕ್ಷದ ಯುವ ಕಾರ್ಯಕರ್ತರು ಹಾಗೂ ಇನ್ನು ಅನೇಕ ಜನರು ಭಾಗವಯಿಸಿದ್ದರು.