
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.05: ಜನರಿಗೆ ಕುಕ್ಕರ್ ಅಷ್ಟೇ ಅಲ್ಲ. ಇಲ್ಲಿನ 18ನೇ ವಾರ್ಡಿನ ವೆಂಕಟೇಶ್ವರ ನಗರದಲ್ಲಿರುವ ಶ್ರೀ ಅಭಯ ವರದಾಂಜನೇಯ ಸ್ವಾಮಿ ದೇವಾಲಯಕ್ಕೆ ಅಗತ್ಯವಿದ್ದ ಗ್ರಾನೈಟ್ ನ್ನು ದಾನವಾಗಿ ಕಾಂಗ್ರೆಸ್ ಪಕ್ಷದ ಯುವ ಮುಖಂಡ ನಾರಾ ಭರತ್ ರೆಡ್ಡಿ ನೀಡಿದ್ದಾರೆ. ಈ ವೇಳೆ ಕಾರ್ಪೊರೇಟರ್ ಗಳಾದ ಮುಲ್ಲಂಗಿ ನಂದೀಶ್, ಕೆ.ಹೊನ್ನಪ್ಪ, ಮಿಂಚು ಶ್ರೀನುವಾಸುಲು, ಮುಖಂಡರಾದ ಚಾನಾಳ್ ಶೇಖರ್, ಗೋವಿಂದ್, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಪೀರಾ ಸಾಬ್, ದೇವಾಲಯದ ಅಧ್ಯಕ್ಷ ಪಿ. ಧನಂಜಯ್ ಮತ್ತು ಇತರರು ಇದ್ದರು.