ದೇವಸ್ಥಾನಕ್ಕೆ ಜೋಶಿ 1 ಲಕ್ಷ ದೇಣಿಗೆ


ನವಲಗುಂದ,ನ.4: ಪುರಾತನವಾದ ಶ್ರೀ ಲಾಲಗುಡಿ ಮಾರುತಿ ದೇವಸ್ಥಾನ ಕಾಮಗಾರಿ ಅಚ್ಚುಕಟ್ಟಾಗಿ ನಡೆಯುತ್ತಿದ್ದು. ಮೊದಲಿನಿಂದಲೂ ಈ ಲಾಲಗುಡಿ ದೇವಸ್ಥಾನದಿಂದಲೇ ಎಲ್ಲ ಕಾರ್ಯಕ್ರಮಗಳು ಪ್ರಾರಂಭವಾಗುತ್ತಿದ್ದವು ದೊಡ್ಡ ಮಟ್ಟದಲ್ಲಿ ಇದರ ಜೀರ್ಣೂದ್ದಾರ ಕೈಗೊಂಡಿರುವುದು ಸಂತಸ ಸರಕಾರದಿಂದ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು.
ಅವರು ಬುಧವಾರ ಪಟ್ಟಣದ ಲಾಲಗುಡಿ ದೇವಸ್ಥಾನಕ್ಕೆ ಬೇಟಿ ನೀಡಿ ವ್ಯಯಕ್ತಿಕವಾಗಿಯೂ 1 ಲಕ್ಷ ದೇಣಿಗೆಯನ್ನು ನೀಡಿ ಜೀರ್ಣೂದ್ದಾರಕ್ಕೆ ಅನುದಾನ ಮಂಜೂರ ಮಾಡುವ ಭರವಸೆ ನೀಡಿದರು.
ಹಿರಿಯರಾದ ರಾಯನಗೌಡ ಪಾಟೀಲ ಲಾಲಗುಡಿ ದೇವಸ್ಥಾನದ ನೀಲನಕ್ಷೆಯ ಕುರಿತು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಅವರಿಗೆ ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ ಪಟ್ಟಣದ ಶ್ರೀ ಲಾಲಗುಡಿ ಮಾರುತಿ ದೇವಸ್ಥಾನ ಇತಿಹಾಸವುಳ್ಳ ದೇವಸ್ಥಾನವಾಗಿದೆ. ಇದರ ರಥೋತ್ಸವವು ಜರುಗುತ್ತದೆ ಸಾವಿರಾರು ಭಕ್ತರು ಇಲ್ಲಿ ಬಂದು ಹೋಗುತ್ತಾರೆ. ಇದರ ನೂತನ ಕಟ್ಟಡಕ್ಕಾಗಿ ಭಕ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ತಮ್ಮ ಅನುದಾನದಲ್ಲಿ ಅನುಕೂಲತೆ ಮಾಡಿಕೊಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಅಣ್ಣಪ್ಪ ಬಾಗಿ, ಶಂಕರು ತೋಟದ, ಐ.ಡಿ.ಪ್ರಭುಗೌಡ, ಚನ್ನಪ್ಪ ನಾಗರಹಳ್ಳಿ, ಮುರಳಿ ಹೆಬಸೂರ, ಮಂಜುನಾಥ ಆರೇರ, ಶಂಕರು ಹುಣಸಿಮರದ, ಬಾಳಪ್ಪ ಕುರಹಟ್ಟಿ, ಸಿದ್ದು ಪೂಜಾರ, ಹಾಗೂ ಶ್ರೀ ಲಾಲಗುಡಿ ಮಾರುತಿ ದೇವಸ್ಥಾನದ ಸಮಿತಿ ಸದಸ್ಯರು ಇದ್ದರು.