ದೇವಸೂಗೂರು ಗ್ರಾಮದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಶಾಸಕ ಬಸನಗೌಡ ದದ್ದಲ್ ಚಾಲನೆ

ರಾಯಚೂರು ಆ 30- ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ತಾಲೂಕ ಆಡಳಿತ ರಾಯಚೂರು ಗ್ರಾಮ ಪಂಚಾಯತ್ ದೇವಸೂಗೂರಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಚಾಲನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ರವರು ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ನೇರಪ್ರಸಾರದ ವ್ಯವಸ್ಥೆಗೆ ಚಾಲನೆ ನೀಡಿದರು.

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿಯೋಜನೆಯಾದ ಮನೆಯ ಯಜಮಾನಿಗೆ 2,000 ನೀಡುವ ಯೋಜನೆಗೆ ರಾಜ್ಯದಲ್ಲಿ ಇಂದು ರಾಹುಲ್ ಗಾಂಧಿ,ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ,ವೇಣುಗೋಪಾಲ್ ರವರ ನೇತೃತ್ವದಲ್ಲಿ ಅರ್ಹ ಫಲಾನುಭವಿಗಳಿಗೆ ರೂ.2000 ಮೊತ್ತದ ಚೆಕ್ ನ್ನು ಹಸ್ತಾಂತರ ನೇರ ಪ್ರಸಾರವನ್ನು ಆಯಾ ಪಂಚಾಯತ್ ವ್ಯಾಪ್ತಿಯಲ್ಲಿ ಕಲ್ಪಿಸಲಾಗಿದ್ದು, ದೇವಸೂಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಂಕೇತಿಕವಾಗಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕರು ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಕಾಂಗ್ರೆಸ್ ಸರ್ಕಾರ ಇಂದು ನನ್ನ ತಾಯಂದಿರಿಗೆ ಸಹೋದರಿಯರಿಗೆ ಮತ್ತು ಮನೆಯ ಯಜಮಾನಿಗೆ ಸಾವಿರ ರೂಪಾಯಿ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಶಾಸಕರಾದ ಬಸನಗೌಡ ದದ್ದಲ್ ತಿಳಿಸಿದರು.

ಇಂದು ದೇವಸೂಗೂರು ಗ್ರಾಮದಲ್ಲಿಯೂ ಕೂಡ ಹಬ್ಬದ ವಾತಾವರಣ ನಿರ್ಮಾಣವಾಗಿದೆ ಕಳಸ ಕುಂಭಮೇಳದೊಂದಿಗೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಬಹಳ ಖುಷಿಯ ವಿಚಾರ ನುಡಿದಂತೆ ನಡೆಯುವ ಸರ್ಕಾರದಿಂದ 2000 ಗೃಹಲಕ್ಷ್ಮಿ ಯೋಜನೆಯಡಿ ನೇರವಾಗಿ ಹಾಕಲಾಗುತ್ತದೆ ಇಡೀ ರಾಯಚೂರು ಜಿಲ್ಲೆಯಲ್ಲಿ ಮೂರು ಲಕ್ಷ ಅರವತ್ತು ನಾಲ್ಕು ಸಾವಿರ ಜನರು ಈಗಾಗಲೇ ನೋಂದಾಣಿಯಾಗಿವೆ, ಜಿಲ್ಲೆಗೆ 72 ಕೋಟಿ ರೂಪಾಯಿ ಈ ಯೋಜನೆಗೆ ಬರುತ್ತದೆ.

ಇಂದು ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಯೋಜನೆಗೆ ಚಾಲನೆ ನೀಡಿದ್ದು ಇದು ನಮಗೆಲ್ಲ ಖುಷಿ, ಇದು ನಮ್ಮ ಪುಣ್ಯ, ಚುನಾವಣೆ ಸಂದರ್ಭದಲ್ಲಿ ಏನು ಭರವಸೆಗಳನ್ನು ನೀಡಿದ್ದೆವು ಅವುಗಳ ಪ್ರಕಾರ ಐದು ಯೋಜನೆಗಳಲ್ಲಿ ಈಗಾಗಲೇ ಗೃಹಜೋತಿ ಶಕ್ತಿ ಯೋಜನೆ ಮತ್ತು ಹಣ ಭಾಗ್ಯ ಯೋಜನೆ ಯ ಮೂಲಕ 5 ಕೆಜಿ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿಯ ಹಣ ಮತ್ತು ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗಿದೆ ಕೊಟ್ಟ ಮಾತಿಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಬದ್ಧವಾಗಿದೆ.

ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಐವತ್ತು ಸಾವಿರದ ಒಂಬತ್ತುನೂರ ಇಪ್ಪತ್ತು ಎರಡು ಜನರು ನೋಂದಾಣಿಯಾಗಿದೆ, ಅಷ್ಟು ಖಾತೆಗೂ ಹಣ ಜಮಾವಣೆ ಆಗಲಿದೆ,ಇನ್ನೂ ಕೂಡ ಯಾರು ನೋಂದಣಿ ಮಾಡಿಸಿಕೊಂಡಿಲ್ಲ ಅಂತವರು ಆದಷ್ಟು ಬೇಗ ನೋಂದಣಿ ಮಾಡಿಸಿಕೊಳ್ಳಬೇಕು ಜಿಲ್ಲೆಯಲ್ಲಿ ಒಟ್ಟು ನಾಲ್ಕು ಲಕ್ಷ ಜನರು ಇದರ ಯೋಜನೆಯ ಸದುಪಯೋಗ ಪಡೆದುಕೊಳ್ಳುವ ವಿಶ್ವಾಸವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು,

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಆಯುಕ್ತರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಫಲಾನುಭವಿಗಳು, ಮತ್ತು ಪಕ್ಷದ ಮುಖಂಡರುಗಳು, ಜನಪ್ರತಿನಿಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.