ದೇವಸೂಗುರ : ಶಾಸಕರಿಂದ ಭೂಮಿ ಪೂಜೆ

ರಾಯಚೂರು,ಜು,೨೬- ದೇವಸೂಗುರ, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ರವರು, ಮತ್ತು ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಬಯ್ಯಾಪುರ, ರವರು ದೇವಸೂಗುರು ಗ್ರಾಮದ ಸೂಗೂರೇಶ್ವರ ಸ್ವಾಮಿಗಳ ದರ್ಶನ ಪಡೆದರು ನಂತರ ದೇವಸೂಗೂರ ಗುಡಿಯ ಹತ್ತಿರ ಸಿಸಿ ರಸ್ತೆ ಭೂಮಿ ಪೂಜೆ
ರಾಘವೇಂದ್ರ ಕಾಲೋನಿಯಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮಾಡಿದರು.
ದೇವಸೂಗೂರು ,ಯದ್ಲಪೂರ, ಚಿಕ್ಕಸೂಗುರ, ಗ್ರಾ.ಪಂಚಾಯಿತಿಗಳಲ್ಲಿ ಪ್ರವಾಸ ಕೈಗೊಂಡರು ನಂತರ ಮಾತನಾಡಿದ ಶಾಸಕರು ಶಕ್ತಿನಗರ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಜೊತೆ ಸಂವಾದದಲ್ಲಿ ಪಾಲ್ಗೊಂಡು, ನೀತಿ ಆಯೋಗದ ವರದಿಯ ಪ್ರಕಾರ ಭಾರತ ದೇಶದಲ್ಲಿಯೇ ಅತ್ಯಂತ ಹಿಂದುಳಿದ ನೂರು ಜಿಲ್ಲೆಗಳಲ್ಲಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಸ್ಥಾನ ಪಡೆದಿವೆ, ಈ ಜಿಲ್ಲೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಅನುದಾನ ನೀಡಿ ಈ ಜಿಲ್ಲೆಗಳನ್ನು ಅಭಿವೃದ್ಧಿ ಮಾಡಬೇಕು.
ಪ್ರಾದೇಶಿಕ ಅಸಮತೊಲನೆ ನಿವಾರಣೆಗಾಗಿ ನಂಜುಂಡಪ್ಪ ಆಯೋಗದ ವರದಿಯ ಪ್ರಕಾರ ಸಿಗಬೇಕಾದ ಸೌಲಭ್ಯಗಳು ನಮ್ಮ ಜಿಲ್ಲೆಗೆ ಸಿಗಬೇಕು ಆದ್ರೆ ನಮ್ಮ ಜಿಲ್ಲೆ ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ, ನನಗೆ ದೊರೆಯಬೇಕಿದ್ದ ಏಮ್ಸ್, ಮತ್ತು ಐಐಟಿ ನಮ್ಮ ಜಿಲ್ಲೆಗೆ ಕೈತಪ್ಪಿವೆ ಈಗೆ ನಮ್ಮ ಜಿಲ್ಲೆಗೆ ಮಂಜೂರಾದ ಸಂಸ್ಥೆಗಳನ್ನು ಬೇರೆ ಜಿಲ್ಲೆಗೆ ಹಾಕಿದ್ರೆ ನಮ್ಮ ಜಿಲ್ಲೆ ಹೇಗೆ ಅಭಿವೃದ್ಧಿಯಾಗುತ್ತದೆ.
ಅನುದಾನ ಕೂಡ ಸರ್ಕಾರ ನೀಡುತ್ತಾಲ್ಲ, ಬರೀ ಮುಂದುವರೆದ ಜಿಲ್ಲೆಗಳಿಗೆ ಮಾತ್ರ ಅನುದಾನ ಕೊಟ್ಟರೆ. ಹಿಂದುಳಿದ ಜಿಲ್ಲೆ ನಮ್ಮ ರಾಯಚೂರು ಜಿಲ್ಲೆ ಇನ್ನೂ ಹಿಂದುಳಿಮುತ್ತದೆ. ಸರ್ಕಾರ ನಮಗೆ ನಮ್ಮ ಜಿಲ್ಲೆಗೆ ಸಿಗಬೇಕಾದ ಏಮ್ಸ್, ಮತ್ತು ಜವಳಿ ಪಾರ್ಕ್ ನಮ್ಮ ಜಿಲ್ಲೆಯಲ್ಲಿಯೇ ಸ್ಥಾಪನೆಯಾಗಬೇಕು ಆಗ ಮಾತ್ರ ನಮ್ಮ ಜಿಲ್ಲೆ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ.
ಇಡೀ ಏಷ್ಯಾದಲ್ಲೇ ಅತಿ ಹೆಚ್ಚು ಹತ್ತಿ ಬೆಳೆಯುವ ಜಿಲ್ಲೆ ನಮ್ಮ ರಾಯಚೂರು ಜಿಲ್ಲೆ ಇಲ್ಲಿ ಜವಳಿ ಪಾರ್ಕ್ ಸ್ಥಾಪನೆಯಾದರೆ ಜನರು ಗೂಳೆ ಹೋಗುವುದನ್ನು ತಪ್ಪಿಸಬಹುದು, ಇಲ್ಲಿ ಜವಳಿ ಪಾರ್ಕ್ ಸ್ಥಾಪನೆಯಾದರೆ ೧೦೦೦೦ ಸಾವಿರ ಜನರಿಗೆ ಉದ್ಯೋಗ ದೋರೆಯುವಂತಾಗುತ್ತದೆ.
ಅದಕ್ಕೆ ಬೇಕಾದ ಭೂಮಿಯೂ ಕೂಡ ಕ್ಷೇತ್ರದಲ್ಲಿ ಇದೆ. ಹಾಗಾಗಿ ಸರ್ಕಾರ ಈ ಸಂಸ್ಥೆಗಳನ್ನು ನಮ್ಮ ಜಿಲ್ಲೆಯಲ್ಲಿ ಸ್ಥಾಪಾಸಿದಾಗ ಮಾತ್ರ ಜಿಲ್ಲೆ ಅಭಿವೃದ್ಧಿಯಾಗುತ್ತದೆ. ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತೇನೆ ಎಂದರು.
ಇನ್ನೂ ದೇವಸೂಗೂರು ಗ್ರಾಮ ಪಂಚಾಯತ್ ಅತ್ಯಂತ ದೊಡ್ಡ ಪಂಚಾಯಿತಿಯಾಗಿದೆ.
ಇದನ್ನು ನಗರಸಭೆಯಾಗಿ ಮಾಡಿದಾಗ ಸಂಪೂರ್ಣವಾಗಿ ಅಭಿವೃದ್ಧಿ ಮಾಡಲು ಸಾಧ್ಯ, ನಗರಸಭೆಯಾದರೆ ಹೆ ಚಿಂತೆ ಹೇಚ್ಚಿನ ಅನುದಾನ ಬರುತ್ತೆ ಎಲ್ಲಾ ವಾರ್ಡ್‌ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಾದರಿ ಕ್ಷೇತ್ರವಾಗಿ ಮಾಡಲು ಅನುಕೂಲವಾಗುತ್ತದೆ. ಯಾಕೇಂದ್ರೆ ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ಕೇಂದ್ರಗಳು ಇರುವುದರಿಂದ ಇಡೀ ರಾಜ್ಯಕ್ಕೆ ಕರೆಂಟ್ ನೀಡುತ್ತೇವೆ ಇದರ ಅಭಿವೃದ್ಧಿ ಸಹಾ ಸರ್ಕಾರ ಗಮನಿಸಿ ನಗರ ಸಭೆಯಾಗಿ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಅ ಕಾರ್ಯಕರ್ತರು ಕುಂದು ಕೊರತೆಗಳನ್ನು ಆಲಿಸಿ ನಂತರ ಎಲ್ಲಾ ಹಿರಿಯ ಮುಖಂಡರುಗಳ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ತೋರೆದು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ನಿವೃತ್ತಿ ಕೆಪಿಸಿಎಲ್ ಹಿರಿಯ ಮುಖಂಡರುಗಳು, ಯುವ ಮುಖಂಡರುಗಳು, ಗ್ರಾ.ಪಂ ಸದಸ್ಯರು, ಪಕ್ಷಕ್ಕೆ ಸೇರ್ಪಡೆಗೋಂಡರು.
ಈ ಸಂದರ್ಭದಲ್ಲಿ ದೇವಸೂಗುರ ಬ್ಲಾಕ್ ಅಧ್ಯಕ್ಷರಾದ ಕೆ.ಪಂಪಾಪತಿ, ಅಧ್ಯಕ್ಷರಾದ ನರಸನಗೌಡ, ನಾಗೇಂದ್ರಪ್ಪ ಮಟಮಾರಿ, ಬಸವರಾಜ ವಕೀಲ, ರಾಜಶೇಖರ ರಂಗ, ಶ್ರೀನಿವಾಸ, ಮಾರೆಪ್ಪ, ಹಂಪನಗೌಡ, ಸಾಂಬಪ್ಪ ರಂಗನಗೌಡ, ಸಿದ್ದಪ್ಪ ಗೌಡ, ಶಶಿಕಲಾ ಭೀಮರಾಯ, ಶಂಕರಪಾಟೀಲ, ಬಾಬು, ವಾಸೀಂ, ದೇವಸೂಗುರ ಬ್ಲಾಕ್ ಅಧ್ಯಕ್ಷರುಗಳಾದ ರಾಮು ಸಿಂಗನೋಡಿ,ಜಿಂದಪ್ಪ, ಬಷೀರ್,ಅಶೋಕ್,ಜ್ಯೋತಿ, ಶ್ರೀದೇವಿ ಮಹೇಶ್ ಹಾಗೂ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಊರಿನ ಹಿರಿಯ ಮುಖಂಡರು ಸುತ್ತಮುತ್ತಲಿನ ಹಿರಿಯ ಮುಖಂಡರು ಗ್ರಾಮಸ್ಥರು ಕಾರ್ಯಕರ್ತರು ಉಪಸ್ಥಿತರಿದ್ದರು.