ದೇವಸಮುದ್ರದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಿದ ಜಾತ್ರಾ ಮಹೋತ್ಸವ

ಕಂಪ್ಲಿ ಮಾ 30 : ತಾಲೂಕಿನ ದೇವಸಮುದ್ರ ಗ್ರಾಮದ ಶ್ರೀ ಬಲುಕುಂದೇಶ್ವರ ತಾತಾನವರ ಜಾತ್ರಾ ಮಹೋತ್ಸವ ಭಕ್ತ ಸಮೂಹದ ಮಧ್ಯೆ ಮಂಗಳವಾರ ಬೆಳ್ಳಂಬೆಳಗ್ಗೆ ಶ್ರದ್ಧಾಭಕ್ತಿಯಿಂದ ಜರುಗಿತು.
ಜಾತ್ರಾ ಮಹೋತ್ಸವ ನಿಮಿತ್ತ ಮಾ.29ರಂದು ದೇವಸ್ಥಾನದಲ್ಲಿ ಮಹಾ ಅಭಿಷೇಕ, ಗಂಗೆಸ್ಥಳ ಪೂಜೆ, ಶಿವನಾಮ ಮಹಾ ಭಜನಾ ಕಾರ್ಯಕ್ರಮ ಹಾಗು ಮಾ.30ರ ಮಂಗಳವಾರ ಬೆಳಗ್ಗೆ 5.30ಕ್ಕೆ ಸಕಲ ವಾದ್ಯಗಳೊಂದಿಗೆ ಮಡಿತೇರು ಎಳೆವ ಕಾರ್ಯಕ್ರಮ ಹಾಗು ಮಹಾ ರಥೋತ್ಸವ ಕಾರ್ಯಕ್ರಮ ನೆರವೇರಿದವು. ರಥೋತ್ಸವದಲ್ಲಿ ಭಾಗವಹಿಸಿದ್ದ ದೇವಸಮುದ್ರ ಸೇರಿದಂತೆ ವಿವಿಧ ಗ್ರಾಮಗಳ ಭಕ್ತಾದಿಗಳು ಉತ್ಸವ ರಥಕ್ಕೆ ಹೂ-ಹಣ್ಣು ಹಾಗು ಉತ್ತತ್ತಿ ಸರ್ಮಪಿಸುವ ಮೂಲಕ ದೈವಕೃಪೆಗೆ ಪಾತ್ರರಾದರು. ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ಸವ ರಥಕ್ಕೆ ಪೂಜೆ ಸಲ್ಲಿಸಿ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಿದರು.