
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.27: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದೋಣಿಮಲೈನ ಸ್ವಾಮಿ ವಿವೇಕಾನಂದ ಅಸೋಸಿಯೇಷನ್ ನಿಂದ ದೇವಲಾಪುರದಲ್ಲಿ ಸಂಗೀತ ಮತ್ತು ನಾಟಕ ಹಮ್ಮಿಕೊಂಡಿತ್ತು.
ಸಮಾಜ ಸೇವಕ ಉಮೇಶ್ ಕಾರ್ಯಕ್ರಮ ಉದ್ಘಾಟಿಸಿದರೆ, ಗಾದಿಲಿಂಗಪ್ಪ ಶಿವಲಿಂಗ ನಗರ ಇವರು ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುರ್ವಳ್ಳಿ ಬಾಬು, ಗ್ರಾಮದ ಹಿರಿಯ ಪಂಪಾಪತಿ, ಸುಂಕಪ್ಪ ಇನ್ನು ಮುಂತಾದವರು ಇದ್ದರು.
ತಿರುಮಲೇಶ ಮರಿಯಮ್ಮನಹಳ್ಳಿ ಇವರಿಂದ ಸುಗಮ ಸಂಗೀತ ಮತ್ತು ಎಲ್. ಕೊಟ್ರೇಶ್ ಮರಿಯಮ್ಮನಹಳ್ಳಿ ಇವರಿಂದ ನಾಟಕ ಪ್ರದರ್ಶನ ನಡೆಯಿತು. ಕಲಾವಿದರುಗಳಾದ ಡಿ. ಧನಂಜ, ವಿ ಅಶ್ವಿನಿ, ಹೇಮಂತ್ ಸಂಡೂರು, ಶಿವಕುಮಾರ್ ಹಾರ್ಮೋನಿಯಂ, ಆನಂದ, ಹನುಮಯ್ಯ ಸುಂಕಪ್ಪ,ಹುಲಗಪ್ಪ ಭಾಗವಹಿಸಿದ್ದರು.
ಪ್ರಾರ್ಥನೆ ಹನುಮಯ್ಯ ಅವರಿಂದ, ಎಚ್.ಜಿ. ಸುಂಕಪ್ಪ ವಂದನಾರ್ಪಣೆ ಮಾಡಿದರು.