ದೇವರ ಹಿಪ್ಪರಗಿ ಮಾದರಿಯ ಕ್ಷೇತ್ರವಾಗಲಿದೆ:ಸಾಹೇಬಗೌಡ

ತಾಳಿಕೋಟೆ:ನ.3: ದೇವರ ಹಿಪ್ಪರಗಿ ಮತಕ್ಷೇತ್ರವನ್ನು ಮಾದರಿಯ ಕ್ಷೇತ್ರವನ್ನಾಗಿ ಮಾಡಲು ಸಹೋದರ ಶಾಸಕ ಸೋಮನಗೌಡ ಪಾಟೀಲ ಅವರು ಪಣತೊಟ್ಟು ಕೆಲಸ ಮಾಡುತ್ತಿದ್ದಾರೆ ಈ ಭಾಗದ ರೈತರ ಆಶಾಕಿರಣವಾದ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಯ ಕಾಮಗಾರಿ ಬರದಿಂದ ಸಾಗಿದ್ದು ಮುಂದಿನ ವರ್ಷದೊಳಗೆ ಈ ಭಾಗದಲ್ಲಿ ನೀರು ಹರಿಯಲಿದೆ ಎಂದು ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರ ಸಹೋದರ ಸಾಹೇಬಗೌಡ ಪಾಟೀಲ ಅವರು ಹೇಳಿದರು.

ತಾಲೂಕಿನ ಗೊಟಗುಣಕಿ ಗ್ರಾಮದಲ್ಲಿಯ 3 ಲಕ್ಷ ರೂ. ವೆಚ್ಚದಲ್ಲಿ ಭೀರಲಿಂಗೇಶ್ವರ ದೇವಸ್ಥಾನದ ಸಮೂದಾಯ ಭವನ ನಿರ್ಮಾಣ, ಹಾಗೂ 2021-22ನೇ ಸಾಲಿನ ಲೆಕ್ಕ ಸಿರ್ಷಿಕೆ 5054ರಡಿ 50 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿ ಹಾಗೂ ಅಸ್ಕಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ 45 ಲಕ್ಷ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಕಾಲೋನಿ ಅಭಿವೃದ್ದಿ ಯೋಜನೆಯಡಿ 50 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು ದೇವರ ಹಿಪ್ಪರಗಿ ಮತಕ್ಷೇತ್ರದ ಪ್ರತಿ ಹಳ್ಳಿಗಳಲ್ಲಿ ಕುಡಿಯುವ ನೀರಿನ ತೊಂದರೆ ಬಾರದಂತೆ ಜೆಜೆಎಂ ಯೋಜನೆಯ ಮೂಲಕ ಪೈಪಲೈನ್ ಕಾರ್ಯಗಳು ಬರದಿಂದ ಸಾಗಿವೆ ಇದು ಅಲ್ಲದೇ ಶಾಸ್ವತವಾದ ರಸ್ತೆ ಕಲ್ಪಿಸಲು ಸಿಸಿ ರಸ್ತೆಗೆ ಆದ್ಯತೆ ನೀಡಿ ಕಾಮಗಾರಿಗಳನ್ನು ಪ್ರಾರಂಬಿಸಲಾಗಿದೆ ದೇವರ ಹಿಪ್ಪರಗಿ ಮತಕ್ಷೇತ್ರಕ್ಕೆ 2 ಸಾವಿರ ಕೋಟಿಗೂ ಅಧಿಕ ಮೊತ್ತವನ್ನು ಸರ್ಕಾರದಿಂದ 4 ವರ್ಷಗಳ ಅವಧಿಯಲ್ಲಿ ಬಿಡುಗಡೆಗೊಳಿಸಿ ಪ್ರಗತಿಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಶಾಸಕರ ಸತತವಾದ ಪ್ರಯತ್ನದಿಂದ ದೇವರ ಹಿಪ್ಪರಗಿ ಮತಕ್ಷೇತ್ರಕ್ಕೆ ಸಾಕಷ್ಟು ಅನುದಾನವು ಬಿಡುಗಡೆಗೊಂಡಿದೆ ಮತ್ತೇ 10 ಕೋಟಿ ರೂ. ಮಂಜೂರಾಗಿದ್ದು ಬಿ.ಸಾಲವಾಡಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪ್ರತಿ ಗ್ರಾಮಗಳಿಗೆ 50 ರಿಂದ 75 ಲಕ್ಷ ರೂ.ವರೆಗೆ ವಿಂಗಡಣೆ ಮಾಡಿ ರಸ್ತೆ ಕಾಮಗಾರಿಗೆ ಬಳೆಸಲು ಮುಂದಾಗಲಾಗಿದೆ ಒಟ್ಟಾರೆ ಕ್ಷೇತ್ರದ ಅಭಿವೃದ್ದಿ ಪಣತೊಟ್ಟು ಶಾಸಕ ಸಹೋದರ ಸೋಮನಗೌಡರು ಕೆಲಸ ಮಾಡುತ್ತಿದ್ದಾರೆ ಗ್ರಾಮಸ್ಥರ ಸಹಕಾರದಿಂದ ಉತ್ತಮ ಕಾಮಗಾರಿಗಳು ಕ್ಷೇತ್ರದಲ್ಲಿ ನಡೆದಿವೆ ಎಂದರು.

ಈ ಸಮಯದಲ್ಲಿ ಶಿವನಗೌಡ ಗೊಟಗುಣಕಿ, ಪ್ರಭುಗೌಡ ಬಿರಾದಾರ(ಅಸ್ಕಿ), ಅಸ್ಕಿ ಗ್ರಾಂಪಂ ಅಧ್ಯಕ್ಷ ಶ್ರೀಮತಿ ಹಳ್ಳೆವ್ವ ವಣಕ್ಯಾಳ, ರಾಮನಗೌಡ ಗೊಟಗುಣಕಿ(ಮಿಲ್ಟ್ರೀ), ಸಾಹೇಬಗೌಡ ಬಿರಾದಾರ, ಶರಣಗೌಡ ಬಿರಾದಾರ, ಹಣಮಂತ್ರಾಯ ಕೊನ್ಯಾಳ, ಗುರಸಂಗಪ್ಪ ಕೊನ್ಯಾಳ, ಶ್ರೀಶೈಲ ಚೌದ್ರಿ, ಚಿದಾನಂದ ನಾಯ್ಕೋಡಿ, ಬಸನಗೌಡ ಬಿರಾದಾರ, ಸಂಗನಗೌಡ ಹೆಗರಡ್ಡಿ, ಮುತ್ತುಗೌಡ ಮಾಳಿ, ಪ್ರಶಾಂತ ಹಾವರಗಿ, ಸಿದ್ದನಗೌಡ ಕಾರಗನೂರ, ಬಸನಗೌಡ ಬಿರಾದಾರ, ಸುಭಾಸ ಗುಂಡಕನಾಳ, ಸಿದ್ದು ಬುಳ್ಳಾ, ಸಾಹೇಬಗೌಡ ರಾರಡ್ಡಿ, ರಾಯಪ್ಪಗೌಡ ಬಿರಾದಾರ, ಸಂಗಮೇಶ ಕಲ್ಬುರ್ಗಿ, ಮಡಿವಾಳಪ್ಪ ನಾಯ್ಕೋಡಿ, ರಾಯನಗೌಡ ಪಾಟೀಲ, ಎನ್.ಎನ್.ಬಿರಾದಾರ, ಮಲ್ಲನಗೌಡ ಸಂದಿಮನಿ, ಅಸ್ಕಿ ಗ್ರಾಂಪಂ ಅಧ್ಯಕ್ಷ ಶ್ರೀಮತಿ ಹಳ್ಳೆವ್ವ ವಣಕ್ಯಾಳ, ಪರಶುರಾಮ ಬಡಿಗೇರ, ದೇವಪ್ಪ ನಾವದಗಿ, ರುದ್ರಗೌಡ ಬಿರಾದಾರ, ಶಿವನಗೌಡ ಮೇಲಿನಮನಿ, ಸೋಮನಗೌಡ ಬಿಂಜಲಭಾವಿ, ಸುನೀಲ ಬಡಿಗೇರ, ಫವನ ನಾಡಗೌಡ, ಸಾಯಬಣ್ಣ ಆಲ್ಯಾಳ, ಅಭಿವೃದ್ದಿ ಅಧಿಕಾರಿ ನಿಂಗನಗೌಡ ದೊಡಮನಿ, ಮೊದಲಾದವರು ಇದ್ದರು.


ದೇವರ ಹಿಪ್ಪರಗಿ ಮತಕ್ಷೇತ್ರವನ್ನು ಮಾದರಿಯ ಕ್ಷೇತ್ರವನ್ನಾಗಿ ಮಾಡುವದರ ಜೊತೆಗೆ ಜನರ ಆಶೋತ್ತರಗಳಿಗೆ ಸ್ಪಂದಿಸುವಂತಹ ಕಾರ್ಯ ಮಾಡಲಾಗಿದೆ ಈ ಭಾಗ ಮುಂಬರುವ ದಿನಗಳಲ್ಲಿ ನೀರಾವರಿಯಾಗುವದರಿಂದ ಬಂಗಾರದಂತಹ ಬೆಳೆ, ಫಸಲು ಬರಲಿದೆ ಇದರಿಂದ ರೈತರಿಗೆ ಆರ್ಥಿಕತೆ ಬೆಳವಣಿಗೆಗೆ ಶಾಸ್ವತವಾದ ಪರಿಹಾರ ಸಿಕ್ಕಂತಾಗಲಿದೆ.

ಸಾಹೇಬಗೌಡ ಪಾಟೀಲ

                         (ಸಾಸನೂರ) ಶಾಸಕರ ಸಹೋದರ