ದೇವರ ಹಾಗೂ ಗುರುವಿನಮೇಲೆ ನಂಬಿಕೆಇರಲಿ:ಪಡೇಕನೂರಶ್ರೀ

ತಾಳಿಕೋಟೆ:ಮಾ.9: ತಾಯಿಯ ಉದರದಿಂದ ಹೊರಬಂದು ಭೂಮಿಯಮೇಲೆ ಬಂದದ್ದಕ್ಕೆ ಪಿಂಡೊತ್ಪತ್ತಿ ಎನ್ನುತ್ತಾರೆ. ಜಗತ್ತಿಗೆ ಬಂದಾಗ ಏನೂ ಗೊತ್ತಿರುವುದಿಲ್ಲ ಆಕಾಶ ಭೂಮಂಡಲ ಸೂರ್ಯ ಚಂದ್ರಾದಿಗಳಲ್ಲದೆ ಜಗತ್ತಿನಲ್ಲಿ ಜನ ಇದ್ದುದ್ದು ಹಾಗೂ ತಂದೆ ತಾಯಿ ಇರುವುದು ಗೋತ್ತಿರಲಿಲ್ಲ ಇದೆಲ್ಲ ಗೊತ್ತಿಲ್ಲದೇ ಭೂಮಂಡಲಕ್ಕೆ ಪಾದಾರ್ಪಣೆ ಮಾಡುತ್ತೆವೆಂದು ಪಡೆಕನೂರ ದಾಸೋಹ ಮಠದ ಮಲ್ಲಿಕಾರ್ಜುನ ಮಹಾ ಸ್ವಾಮಿಗಳು ನುಡಿದರು.
ಬುಧುವಾರರಂದು ಶ್ರೀ ಸಾಂಭಪ್ರಭು ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಸಾಗಿಬಂದ ಅಲ್ಲಮಪ್ರಭು ದೇವರ ಶೂನ್ಯ ಸಂಪಾದನೆಯ ಆಧ್ಯಾತ್ಮಿಕ ಪ್ರವಚನದ 16ನೇ ದಿನದಂದು ಮುಂದುವರಿಸಿ ಮಾತನಾಡುತ್ತಿದ್ದ ಅವರು ಜನ್ಮತಾಳಿ ಭೂಮಿಗೆ ಬಂದಾಗ ತಂದೆ ತಾಯಿ ಇವರೇ ಎಂದು ನೊಡುತ್ತಿರುತ್ತೇವೆ ಯಾರೇ ಎತ್ತಿಕೊಂಡರು ಹೋಗುತ್ತೇವೆ 11ದಿನವಾಗುವ ತನಕ ಹೆಸರಿಲ್ಲ ನಂತರ ಹಾಡಿಹೋಗಳಿ ಹೆಸರನ್ನು ಇಡುತ್ತಾರೆ ವಿವಿಧ ಹೆಸರುಗಳಿಂದ ನಾಮಕರಣ ಮಾಡುತ್ತಾರೆ ಆವಾಗ ಮನುಷ್ಯನಾದ. ತಾಯಿಯೆಂಬ ಹೆಸರು ತಂದೆ ಎಂದರೇ ಯಾರೂ ಎಂಬ ಪರಿಚಯಿಸುವ ಕಾರ್ಯ ನಡೆಯುತ್ತದೆ ಎಂದರು. ಈಪರಿಚಯಿಸುವುದರ ಮೂಲಕ ಜಗತ್ತು ಹಾಗೂ ಬಂಧು-ಬಾಂಧವರು ಅಲ್ಲದೆ ಕಾಕಾ, ದೊಡ್ಡಪ್ಪ, ಮಾವ ಎಂಬುದು ಕೂಸಿಗೆ ತಾಯಿಯಾದವಳು ಪರಿಚಯ ಮಾಡಿ ಕೊಡುತ್ತಾಳೆ ಕಾರಣ ತಾಯಿಗೆ ಮೊದಲನೇ ಗುರು ಎಂದು ಕರೆಯುತ್ತಾರೆಂದರು. ಶಾಸ್ತ್ರಕಾರರು ಮತ್ತು ಋಷಿಮುನಿಗಳೆಲ್ಲರೂ ತಾಯಿಗೆ ಮಾತೃದೇವೋ ಭವ ಎಂದಿದ್ದಾರೆ ಸಂತರು ಶರಣರು ಸಂಸ್ಕøತಿ ಸಂಸ್ಕಾರ ಕಲಿಸಿಕೊಟ್ಟವಳು ತಾಯಿಗೆ ಮೊದಲನೇ ಗುರು ಎಂದು ಕರೆದಿದ್ದಾರೆಂದರು. ಮುಂದೆ ಆಚಾರ ದೇವೋ ಭವ ಎನ್ನಲಾಗುತ್ತದೆ ದೊಡ್ಡವನಾದ ಮೇಲೆ ತನ್ನ ಧರ್ಮದ ಗುರುವಿನ ಹತ್ತಿರ ಬರುತ್ತಾನೆ ನಾಲ್ವತ್ತು ಐವತ್ತು ವರ್ಷದ ನಂತರ ಅಶಾಂತಿ ಸುಖ ದುಖಃಗಳಲ್ಲಿ ಸಿಕ್ಕವ ನಾನೂ ನನಗೆ ಶಾಂತಿ ಬೇಕಾಗಿದೆ ಎಂದು ಕೇಳಲಾಗುತ್ತದೆ ಎಂದರು.
ಒಬ್ಬ ಮನುಷ್ಯ ಶಾಂತಿಗಾಗಿ ಹುಡುಕಾಡಲೂ ಒಬ್ಬ ಗುರುವಿನ ಹತ್ತಿರ ಬಂದು ಕೇಳಿದ ಶಾಂತಿ ಎಂಬುದನ್ನು ಎಲ್ಲಿದ್ದರೂ ಕೊಂಡುಕೊಳ್ಳುತ್ತೇನೆ ಅದು ಎಲ್ಲಿ ಸಿಗುತ್ತದೆಂದು ಆ ಮಹಾತ್ಮನಿಗೆ ಕೇಳುತ್ತಾ£.É ಆ ಮಹಾತ್ಮ ಮನುಷ್ಯನಿಗೆ ತಿಳಿ ಹೇಳಿ ಮೊದಲೂ ನೀನೂ ಶಾಂತಿ ಎಂಬುದನ್ನು ಹುಡುಕಾಡಲೂ ದೇಶವಿದೇಶಕ್ಕೆ ಹೋಗಿ ಬಾ ಅಂದಾಗ ಆ ವ್ಯಕ್ತಿ ಶ್ರೀಮಂತನಿದ್ದ ಕಾರಣ ಕೇಲವು ದೇಶಗಳಿಗೆ ಸಂಚರಿಸಿ ಅಲ್ಲಿಯ ಜ್ಞಾನಿಷ್ಟರಿಗೆ ಕೇಳಿದರೂ ಶಾಂತಿ ಎಲ್ಲಿ ಸಿಗುತ್ತದೆಂದು ನಮಗೂ ಗೊತ್ತೀಲ್ಲ ನಿನಗೆ ಗೊತ್ತಿದ್ದರೆ ಹೇಳು ಎಂಬ ಮಾತು ಅವರಿಂದ ಹೊರಬೀಳುತ್ತದೆ. ಕೊನೆಗೆ ಆ ವ್ಯಕ್ತಿ ಆ ಗುರುವಿನ ಹತ್ತಿರ ಬಂದು ಎಲ್ಲಿ ದೊರೆಯಲಿಲ್ಲ ಎಂದು ಕೇಳಿದಾಗ ಕೊನೆಗೆ ಸರ್ಪಭೂಷಣ ಶಿವಯೋಗಿಗಳೂ 12ನೇ ಶತಮಾನದಲ್ಲಿದ್ದ ಶ್ರೀಗಳು ವಿವರಣೆ ನೀಡಿ ವ್ಯಕ್ತ ಅವ್ಯಕ್ತ ಎಂಬುದನ್ನು ತಿಳಿಸಿ ವ್ಯಕ್ತ ಎಂದರೇ ಜಗತ್ತು ಅವ್ಯಕ್ತ ಎಂದರೇ ನಡೆಸುವ ಸಾಮರ್ಥ ಆ ಜ್ಞಾನದ ವಸ್ತು ಕಣ್ಣಿಗೇ ಕಾಣುವುದಿಲ್ಲ ಅಗೋಚರವೆಂದರು. ತನವೇ ಪಂಪಾ ಕ್ಷೇತ್ರವಾಗಿದ್ದು ಶಿರವೆನ್ನುದು ಹೊನ್ನಿನ ಕಳಸವಾಗಿದೆ. ಇದರಲ್ಲಿ ತತ್ವಜ್ಞಾನ ತುಂಬಿಕೊಂಡಿದೆ ಎಂದರು. ಪಿಂಡ ಅಜ್ಞಾನ ಸ್ವರೂಪ ಜ್ಞಾನವನ್ನು ತೊರಿಸಬೇಕಾದರೇ ಒಬ್ಬ ಗುರುಬೇಕಾಗುತ್ತಾನೆ. ಗುರುವೆಂದರೇ ದಾರಿ ತೊರಿಸುವ ಗುರುವಿನ ಗುಲಾಮನಾಗುವ ತನಕ ಮುಕ್ತಿ ಎಂಬುದು ದೊರೆಯುವುದಿಲ್ಲವೆಂದರು.
ಅಲ್ಲಮ ಶಿವಯೋಗಿ ಗದಗ ಜಿಲ್ಲೆಯಿಂದ ವಿಜಾಪೂರ ಮಾರ್ಗವಾಗಿ ಜ್ಞಾನೋಪದೇಶ ಪಡೆಯಲೂ ಗುರುವಿನ ಆಶೀರ್ವಾದಕ್ಕಾಗಿ ಅಂದಿನ ಶಿಶ್ಯರನ್ನು ಬೆನ್ನು ಹತ್ತಿಸಿಕೊಂಡು ನಡೆಯುತ್ತಾನೆ. ಶಿಶ್ಯರೊಂದಿಗೆ ಹೋರಟಿದ್ದ ಅಲ್ಲಮ ಜಗತ್ತಿಗೆ ಜ್ಞಾನದ ಬೆಳಕನ್ನು ತರಲು ಸೊಲ್ಲಾಪೂರ ಪಟ್ಟಣಕ್ಕೆ ಹೋರಟ ಅಲ್ಲಮ. ಅಲ್ಲಿ ಚಾಮಲಾದೇವಿ ಎಂಬ ರಾಜ ಮನೆತನದ ಈ ದಂಪತಿಗಳಲ್ಲಿ ಸಂತಮಹಾಂತರಲ್ಲಿ ಭಕ್ತಿ ಇತ್ತು. ಅರಿವಿನ ಜ್ಞಾನ ಬಂದರೇ ಭಕ್ತನಾಗುತ್ತಾನೆಂಬುದು ಚಾಮಲಾದೇವಿಯ ಹತ್ತಿರ ಇತ್ತೆಂದರು. ಅದೇ ಸೊಲ್ಲಾಪೂರದಲ್ಲಿ ಮುದ್ದುಗೌಡ ಸುಗ್ಯವ್ವ ಭಕ್ತಿವಂತ ಸುಮಾರು 75 ವರ್ಷ ಮಿಕ್ಕಿ ವಯೋಮಿತಿ ಹೊಂದಿದ ದಂಪತಿಗಳಿದ್ದರು. ಇವರು ಧರ್ಮದ ಕಾರ್ಯಗಳನ್ನು ಬಿಟ್ಟಿದ್ದಿಲ್ಲ ಆದರೆ ಇವರಿಗೆ ಮಕ್ಕಳಿರಲಿಲ್ಲ. ರಾಜಮನೆತನದ ಚಾಮಲಾದೇವಿಯು ರೇವಣ ಸಿದ್ಧೇಶ್ವರನನ್ನು ತನ್ನ ರಾಜಧಾನಿಗೆ ಕರೆಯಿಸಿ ಮಹಾಪೂಜೆ ಗೈಯ್ಯುವ ವಿಚಾರ ಹೊಂದಿದ್ದಳು. ಗುರುವಿನ ಆಗಮನಕ್ಕಾಗಿ ಕಳಸ ಕನ್ನಡಿಯೊಂದಿಗೆ ಸ್ವಾಗತಕ್ಕಾಗಿ ಐರಾವತವನ್ನು ತೆಗೆದುಕೊಂಡು ತಾನೂ ನಡೆಯುತ್ತಾ ಗುರುವನ್ನು ಆಮಂತ್ರಿಸಲು ತೆರಳಿದಾಗ ಇತ್ತ ಗುರು ಆಗಮಿಸಿದ ಸುದ್ಧಿ ಕೇಳಿದ ಮುದ್ದುಗೌಡ ಸುಗ್ಯವ್ವ ಈ ದಂಪತಿಗಳು ಶ್ರೀಗಳ ಪಾದ ಪೂಜೆಗಾಗಿ ನಡುದಾರಿಯಲ್ಲಿಯೇ ನಿಂತಿದ್ದರು. ರೇವಣ ಸಿದ್ಧೇಶ್ವರರು ಆಗಮಿಸುತ್ತಿದ್ದಂತೆ ಮುದ್ದುಗೌಡ ಸುಗ್ಯವ್ವ ಅವರ ಪಾದಕ್ಕೆ ನೀರು ಹಾಕಿ ನಮಿಸಿ ಗುರುಗಳಿಗೆ ಭಕ್ತಿಭಾವದಿಂದ ನಮಗೆ ಮುಕ್ತಿ ಸಾಮ್ರಾಜ್ಯ ಕೊಡುಎಂದರು. ರೇವಣಸಿದ್ಧೇಶ್ವರರು ಈ ದಂಪತಿಗಳಿಗೆ ವಿಚಾರಿಸಿ ನಿಮಗೆ ಮಕ್ಕಳಾಗಿಲ್ಲ ಮಕ್ಕಳ ಕೊಡುವ ಅಪೇಕ್ಷೆ ನನ್ನದಾಗಿದೆ ಎಂದು ಗುರುಗಳು ಹೇಳಿದಾಗ ದಂಪತಿಗಳು ಒಪ್ಪಿಕೊಂಡಿದ್ದರಿಂದ ಸುಗ್ಯವ್ವನ ಉದರದಲ್ಲಿ ಗಂಡು ಮಗು ಉದ್ಭವವಾಯಿತಲ್ಲದೆ ಗುರುವಿನ ಆಶೀರ್ವಾದದಿಂದ ಇವರಿಬ್ಬರ ವಯೋಮಿತಿ ಕಡಿಮೆಯಾಗಿ 30-40 ವರ್ಷದವರಾದರು. ಇವರಲ್ಲಿ ಹುಟ್ಟಿದ ಗಂಡು ಮಗುವಿಗೆ ಶ್ರೀಗಳು ಸಿದ್ದರಾಮನೆಂದು ಹೆಸರಿಟ್ಟರು. ಸಿದ್ದರಾಮ ಜನ್ಮತಾಳಿ 7-8 ವರ್ಷದವನಾದರೂ ಆತನಿಗೆ ಮಾತು ಬರುತ್ತಿರಲಿಲ್ಲ ಆತ ಮೂಕನಾಗಿದ್ದ ಒಮ್ಮೆ ಈ ಬಾಲಕ ಹೊಲಕ್ಕೆ ಹೋದಾಗ ಒಬ್ಬಮುದುಕ ಬಂದು ನನಗೆ ಹಸಿವಾಗಿದೆ ಊಟಕ್ಕೆ ಏನಾದರೂ ತಂದು ಕೊಡು ಎಂದು ಈ ಬಾಲಕನಿಗೆ ಕೇಳುತ್ತಾನೆ. ನಾನೂ ಮನೆಗೆ ಹೋಗಿ ಬರುತ್ತೇನೆ ನನ್ನ ತಾಯಿಗೆ ಹೇಳಿ ಊಟ ತರುತ್ತೇನೆ ನೀನೂ ಇಲ್ಲೇ ಇರು ಎಂದ.ಈ ಬಾಲಕ ಮನೆಗೆ ಬಂದು ತಂದೆ ತಾಯಿಗೆ ಹೇಳಿ ಅಲ್ಲೊಬ್ಬ ಮುದುಕನಿದ್ದಾನೆ ಅವನಿಗೆ ಹಸಿವಾಗಿದೆ. ಅವನಿಗೆ ಊಟ ಕಟ್ಟಿ ಕೊಡಿ ಎಂದಾಗ ತಂದೆ ತಾಯಿಗಳೂ ಮೂಕಮಗನಿಗೆ ಮಾತುಗಳು ಬಂದವಲ್ಲ ಎಂದು ಹರ್ಷ ವ್ಯಕ್ತ ಪಡಿಸಿ ಆತನಿಗೆ ಕೂಡಲೇ ಬುತ್ತಿಯನ್ನು ಕಟ್ಟಿ ಕೊಡುತ್ತಾರೆ. ಆ ಬಾಲಕ ಮುದುಕ ಇದ್ದ ಸ್ಥಳಕ್ಕೆ ಬಂದು ಬುತ್ತಿ ಕೊಡಲೂ ಹೋದಾಗ ಆ ಮುದುಕ ಅಲ್ಲಿ ಮಾಯವಾಗಿದ್ದ ಅಲ್ಲಿ ಮುದುಕನಿದ್ದ ಎಲ್ಲಿ ಹೋದ ಎಂಬ ದಾರಿಹೋಕರಿಗೆ ಕೇಳಿದಾಗ ಅವರು ಆತ ಶ್ರೀಶೈಲ ಮಲ್ಲಯ್ಯನೆಂದು ಹೇಳುತ್ತಾರೆ. ಆತ ಎಲ್ಲಿದ್ದಾನೆಂದರೇ ಶ್ರೀಶೈಲದಲ್ಲಿದ್ದಾನೆಂದು ಹೇಳಿದಾಗ ಸಿದ್ದರಾಮ ಬಾಲಕ ಅವರೊಂದಿಗೆ ಶ್ರೀಶೈಲಕ್ಕೆ ತೆರಳುತ್ತಾನೆ. ಅಲ್ಲಿ ಎಷ್ಟು ಹುಡುಕಿದರೂ ಆಮುದುಕ ಸಿಗುವುದಿಲ್ಲ. ತಿಂಗಳೂ ಕಳೆದರೂ ಬುತ್ತಿ ತನ್ನಲ್ಲಿಟ್ಟುಕೊಂಡು ಹುಡುಕುತ್ತಿರುತ್ತಾನೆ ಕೊನೆಗೆ ಸಿಟ್ಟಿಗೆ ಬಂದು ತನ್ನ ಪ್ರಾಣಾರ್ಪಣೆ ಮಾಡಿದರಾಯಿತೆಂದು ನಿರ್ಧರಿಸಿ ಅಲ್ಲಿದ್ದ ಬಾವಿಯಲ್ಲಿ ಜಿಗಿಯುತ್ತಾನೆ. ಇದನ್ನು ಅರಿತು ಶ್ರೀಶೈಲ ಮಲ್ಲಿಕಾರ್ಜುನ ಕೂಡಲೇ ಪ್ರತ್ಯಕ್ಷನಾಗಿ ಬಾವಿಯಲ್ಲಿ ಜಿಗಿದ ಬಾಲಕನನ್ನು ಕೂಸಿನಂತೆ ಕೈಯಲ್ಲಿ ಎತ್ತಿಕೊಂಡು ಹೊರಬರುತ್ತಾನೆ. ನಂತರ ಆ ಬಾಲಕ ತಾಯಿ ಕಟ್ಟಿದ ಬುತ್ತಿಯನ್ನು ಮಲ್ಲಿಕಾರ್ಜುನನಿಗೆ ಕೊಟ್ಟು ಊಟ ಮಾಡಿಸುತ್ತಾನೆ. ನಂತರ ಬಾಲಕ ಸಿದ್ದರಾಮ ಸೊಲ್ಲಾಪೂರಕ್ಕೆ ಬರುತ್ತಾನೆ. ಮುಂದೆ ಅಲ್ಲಮ ಶಿವಯೋಗಿ ಹಾಗೂ ಸಿದ್ದರಾಮನೊಂದಿಗೆ ಸಂವಾದ ನಡೆಯುತ್ತದೆ ಎಂದು ಶ್ರೀಗಳು ಪ್ರವಚನ ಮುಂದುವರೆಸಿದರು.
ಈ ಸಮಯದಲ್ಲಿ ಶ್ರೀ ಶರಣಮುತ್ಯಾರ ಮಠದ ಶ್ರೀ ಬಸಣ್ಣ ಶರಣರ,ಶರಣಪ್ಪ ಶರಣರ ನೇತೃತ್ವ ವಹಿಸಿದ್ದರು. ಸಿದ್ದಣ್ಣ ಶರಣರ, ಭಿಮಣ್ಣ ಇಂಗಳಗಿ, ಶರಣಪ್ಪ ದೊರೆ, ಮಲ್ಲಣ್ಣ ಇಂಗಳಗಿ, ಮಲ್ಲಣ್ಣ ಶರಣರ, ಶರಣಗೌಡ ಪೋಲಿಸ ಪಾಟೀಲ, ಶ್ರೀಕಾಂತ ಕುಂಬಾರ, ಬಸವರಾಜ ಛಾಂದಕೋಟೆ,ಕಾಶಿರಾಯ ದೇಸಾಯಿ, ಸಂಗಮೇಶ ಶರಣರ, ಗುರುಲಿಂಗಪ್ಪ ದೊಡಮನಿ, ಸುಭಾಸಗೌಡ ಹಳೆಮನಿ, ತಿಪ್ಪಣ್ಣ ಸಜ್ಜನ, ಭಾರತಮಂಟಪ ಮತ್ತು ಸೌಂಡಸಿಸ್ಟಮದ ರಪೀಕ ಮುರಾಳ, ಗವಾಯಿಗಳಾದ ಹಣಮಂತಕುಮಾರ ಬಳಗಾನೂರ, ಬಸವನಗೌಡ ಬಿರಾದಾರ(ಚೊಕ್ಕಾವಿ) ಉಪಸ್ಥಿತರಿದ್ದರು.