ದೇವರ ಸ್ತೋತ್ರ ಮಂತ್ರ ಪಠನೆಯಿಂದ ಜೀವನಾಡಿ ಶುದ್ಧಿ

ವಿಜಯಪುರ, ನ. ೪:ದೇವರ ಸ್ತೋತ್ರ, ಮಂತ್ರೋಚ್ಚಾರಣೆಗಳು ಕೇವಲ ಬಾಯಿಯಿಂದ ಬರದೇ, ಮನಸ್ಸಿನಿಂದ ಬರುವಂತಾದಾಗ ನಾಡಿ ಶುದ್ದೀಕರಣವಾಗುವುದರೊಂದಿಗೆ ಮನಸ್ಸು ಆನಂದದಲ್ಲಿ ಉಕ್ಕಿ ಹರಿಯುತ್ತದೆ ಎಂದು ಶ್ರೀ ಚೌಡೇಶ್ವರಿ ಹಾಗೂ ಅಣ್ಣಮ್ಮ ತಾಯಿ ಜಾತ್ರಾ ಮಹೋತ್ಸವದ ನೇತೃತ್ವ ವಹಿಸಿದ ಮುನಿಶ್ಯಾಮಪ್ಪ ತಿಳಿಸಿದರು.
ಅವರು ಇಲ್ಲಿಗೆ ಸಮೀಪದ ಹೋಬಳಿಯ ಕೋರಮಂಗಲ ಗ್ರಾಮದಲ್ಲಿ ಮಂಗಳವಾರದಂದು ಬೆಂಗಳೂರಿನ ನಗರದೇವತೆ ಅಣ್ಣಮ್ಮ ತಾಯಿ ೨ ನೇ ವರ್ಷದ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ವರದೇನಹಳ್ಳಿಯ ಚೌಡೇಶ್ವರಿ ದೇವಿಯ ೩ ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ಮಾತನಾಡುತ್ತಿದ್ದರು.


ಮುಖಂಡರಾದ ಮುನಿಕೃಷ್ಣಪ್ಪ ಮಾತನಾಡಿ, ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದ ಜಾತ್ರಾ ಮಹೋತ್ಸವವು ಅತ್ಯಲ್ಪ ಕಾಲದಲ್ಲಿಯೇ ಪ್ರಸಿದ್ದಿ ಪಡೆದು, ವಿಜೃಂಭಣೆಯಿಂದ ನಡೆಯುತ್ತಿದ್ದು, ಗ್ರಾಮಸ್ಥರೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಆನಂದದಾಯಕ ವಿಷಯವೆಂದು ತಿಳಿಸಿದರು.
ಜಾತ್ರಾ ಸಮಿತಿಯ ನಂಜಪ್ಪ, ಅನೂಪ್, ಹರೀಶ್, ನಿರಂಜನ್, ಮತ್ತಿತರರು ಉಪಸ್ಥಿತರಿದ್ದರು. ದೇವರುಗಳನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ ನಡೆಸಿದ್ದು, ಪೂರ್ಣ ಕುಂಭಗಳನ್ನು ಹೊತ್ತ ಮುತೈದೆಯರು ದೇವರುಗಳೊಂದಿಗೆ ಹೆಜ್ಜೆ ಹಾಕಿದ್ದು, ವಿಶೇಷವಾಗಿತ್ತು.