ದೇವರ ಶಕ್ತಿಗಿಂತ, ಭಕ್ತರ ಭಕ್ತಿ ದೊಡ್ಡದು- ಅಭಿನವ ಶ್ರೀಗಳು

ಸಿರವಾರ.ನ.೧೧- ಮಠಮಾನ್ಯಗಳು ಬೆಳೆಯಲು, ಪುರಾಣ, ಪ್ರವಚನ, ಜಾತ್ರೆಗಳು ನಡೆಯಲು ಭಕ್ತರ ಭಕ್ತಿ ದೇವರ ಶಕ್ತಿಗಿಂತ ದೊಡ್ಡದು ಎಂದು ನವಲಕಲ್ ಬೃಹನ್ಮಠದ ಪೀಠಾಧ್ಯಕ್ಷರಾದ ಅಭಿನವಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ನಾರಬಂಡ ಗ್ರಾಮದಲ್ಲಿ ಲಿಂ.ಕರಿಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ನಾಲ್ಕನೇ ಪುಣ್ಯಸ್ಮರಣೆಯ ಅಂಗವಾಗಿ ಶರಣರಚರಿತಾಮೃತ ಪ್ರವಚನ ಮಹಾಮಂಗಲ, ೫೦೧ಜನ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡಿ ಈ ಭಾಗದ ಭಕ್ತರು ನಮ್ಮ ಶ್ರೀಮಠಕ್ಕೆ ಸದಾ ಬೆನ್ನು ಏಲಬಾಗಿ ನಿಂತು ಮಠದ ಕಾರ್ಯಗಳಿಗೆ ಎಲ್ಲಾ ರೀತಿಯ ಸೇವೆಯನ್ನುಮಾಡಿ ಮಠದ ಅಭಿವೃದ್ಧಿಗೆ ಸಹಕಾರಮಾಡಿದ್ದಾರೆ.
ಎಂಟು ಶಾಖಾಮಠಗಳು ಇದ್ದು ಅವುಗಳು ಭಕ್ತರು ಅಭಿವೃದ್ಧಿ ಮಾಡಿದ್ದು, ನಿಮ ಎಲ್ಲಾ ಕಾರ್ಯಕ್ರಮಗಳಿಗೆ, ಭಕ್ತರ ಕಷ್ಟಕ್ಕೆ ಸದಾಸಿದ್ಧ, ನಾರಬಂಡ ಗ್ರಾಮದ ಭಕ್ತರ ಕಾರ್ಯ ಶ್ಲಾಘನೀಯ ಎಂದರು. ಧರ್ಮ ಸಭೆಯಲ್ಲಿ ಮಾನ್ವಿ ಕಲ್ಮಠದ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ನೀಲಗಲ್, ರೇಣುಕ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು, ಸುಲ್ತಾನಪುರ ಶಂಭುಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿದರು.
ಈ ಸಂದರ್ಭದಲ್ಲಿ ಕಿಡಿಗಣ್ಣಯ್ಯಸ್ವಾಮಿ, ಸಿದ್ದನಗೌಡ, ಚುಕ್ಕಿ ಸೂಗಪ್ಪ, ರಾಜಾ ರಾಮಚಂದ್ರ ನಾಯಕ, ಶರಣಯ್ಯ ನಾಯಕ, , ಜೆ.ದೇವರಾಜಗೌಡ, ಹನುಮನಗೌಡ, ಶಿವನಗೌಡ ನಾರಬಂಡ, ದೇವರಾಜ ನಾಯಕ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಗ್ರಾ.ಪಂ.ಅಧ್ಯಕ್ಷತೆ ಅನಿತಾ ಶಿವರಾಜ , ಡಾ.ಅಂಬಿಕಾ, ಅನಿತಾ ಮಂತ್ರಿ, ಅಮರೇಗೌಡ, ಬಾಬು, ಆಂಜಿನಯ್ಯ,ರಂಗನಾಥ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.