ದೇವರ ನಂಬಿದರೆ ಯಾವ ಭಯವಿಲ್ಲ

ಸಂಜೆವಾಣಿ ವಾರ್ತೆ

ಹೊಳೆಹೊನ್ನೂರು.ಜು.೨೬ : ದೇವರನ್ನು ನಂಬಿರುವ ವ್ಯಕ್ತಿಗಳಿಗೆ ಯಾವ ಭಯವೂ ಇರುವುದಿಲ್ಲ. ಅವರು ಎಂತಹ ಸಂದರ್ಭದಲ್ಲೂ ಸಮಚಿತ್ತದಿಂದ ಇರುತ್ತಾರೆ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಹೇಳಿದರು.28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.ಶ್ರೀಕೃಷ್ಣನ ತಂದೆ ವಸುದೇವ ದೇವರನ್ನು ನಂಬಿದ್ದ. ಆತ ಜ್ಞಾನಿಯಾಗಿದ್ದ. ಕಂಸನವಧೆಗೆ ಅಶರೀರ ವಾಣಿ ಆಗಿರುವುದು ಕೂಡ ದೇವರಿಂದಲೇ ಎಂಬ ಅರಿವೂ ಅವನಿಗಿತ್ತು. ತನ್ನ ಹೆಂಡತಿಯ ರಕ್ಷಣೆಯ ಸಂಪೂರ್ಣ ಭಾರವನ್ನು ದೇವರ ಮೇಲೆಯೇ ಹಾಕಿದ್ದ. ಹೀಗಾಗಿ ದೇವಕಿಯ ವಧೆಗೆ ಕಂಸ ಖಡ್ಗ ಹಿಡಿದು ಮುಂದಾದಾಗಲೂ ವಸುದೇವ ವಿಚಲಿತನಾಗಲಿಲ್ಲ ಎಂದರು.ಸ್ವಲ್ಪ ಕಷ್ಟ ಬಂದಾಗ ಕುಗ್ಗುವವರು ಮತ್ತು ಸ್ವಲ್ಪ ಸುಖ ಬಂದಾಗ ಹಿಗ್ಗುವವರನ್ನು ನಾವು ನೋಡುತ್ತೇವೆ. ಅವರಲ್ಲಿ ಸ್ಥಿಮಿತತೆಯೇ ಇರುವುದಿಲ್ಲ. ಆದರೆ ಅಧ್ಯಾತ್ಮ ಮಾರ್ಗದಲ್ಲಿ ನಡೆದವನ ಸ್ಥಿತಿ ನೋಡಿ. ವಸುದೇವನ ಮನಸ್ಥಿತಿಯಲ್ಲಿನ ಸಮಾನತೆ, ಸ್ಥಿಮಿತತೆ, ಗಾಂಭೀರ್ಯ, ಸಮಯೋಚಿತ ಪ್ರಜ್ಞೆಯನ್ನು ಭಾಗವತ ತಿಳಿಸುತ್ತಿದೆ. ಧರ್ಮದ ಆಚರಣೆ, ತತ್ವಜ್ಞಾನದ ಮಾತು, ಉಪದೇಶ ಇವೆಲ್ಲಾ ಶಾಂತವಾದ ಸ್ಥಿತಿಯಲ್ಲಿ, ನದೀ ತೀರದಲ್ಲಿ ಸಾಧ್ಯ. ಆದರೆ ಮೃತ್ಯು ಎದುರಿಗಿದ್ದಾಗಲೂ ಗಾಂಭೀರ್ಯದಿAದ ಅದನ್ನು ಎದುರಿಸಿ ಮಾತನಾಡುವುದೆಂದರೆ ಅದು ಆ ವ್ಯಕ್ತಿಯ ಯೋಗ್ಯತೆ ತಿಳಿಸುತ್ತದೆ ಎಂದರು.ಸಭಾ ಕಾರ್ಯಕ್ರಮದಲ್ಲಿ ಸಂಜೀವಾಚಾರ್ಯ ಪರ್ವತೀಕರ್ ಪ್ರವಚನ ನೀಡಿದರು. ಸಭೆಯಲ್ಲಿ ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿಗಳಾದ ಗುತ್ತಲ ರಂಗಾಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಆನಂದಾಚಾರ್ಯ ಮಹಿಷಿ, ಲಕ್ಷಿö್ಮÃನರಸಿಂಹಾಚಾರ್ಯ ಮೊದಲಾದವರಿದ್ದರು.