
ಹುಮನಾಬಾದ:ಎ.6: ಪ್ರತಿಯೊಬ್ಬರು ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ಪಡೆದುಕೋಳ್ಳಲು ದಿನದ ಒಂದು ಗಂಟೆಯಾದರೂ ಶ್ರದ್ಧಾ, ಭಕ್ತಿಯಿಂದ ದೇವರ ಧ್ಯಾನ ಮಾಡಬೇಕು ‘ ಎಂದು ಜಹೀರಾಬಾದನ ತಾಲ್ಲೂಕಿನ ಮಲ್ಲಯ್ಯ ಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ.ಬಸವಲಿಂಗ ಅವಧೂತರು ತಿಳಿಸಿದರು.
ಹುಮನಾಬಾದ ತಾಲ್ಲೂಕಿನ ಕುಮಾರಚಿಂಚೋಳಿ ಗ್ರಾಮದಲ್ಲಿ ಬುಧವಾರ ಜೈ ಭವಾನಿ 16ನೇಯ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ ಹಣ, ಆಸ್ತಿ ಅಂತಸ್ತು ಐಶ್ವರ್ಯ ಯಾವುದು ನೆಮ್ಮದಿಯನ್ನು ತಂದು ಕೊಡಲಾರದು. ಆದರೆ ಗಳಿಸಿದ ಹಣದಲ್ಲಿ ಸ್ವಲ್ಪವಾದರೂ ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ವಿನಿಯೋಗಿಸಿದರೇ ಅದರಿಂದ ಸಿಗುವ ಸಂತೋಷಕ್ಕೆ ಮಿತಿಯೇ ಇಲ್ಲ ‘ ಎಂದು ಹೇಳಿದರು.
‘ಭಾರತದಲ್ಲಿ ಹಲವು ಧರ್ಮ, ಜಾತಿಗಳು, ಜನಾಂಗಗಳು ಕೂಡಿ ಬಾಳುವ ದೇಶ ನಮ್ಮದು. ಇಂತಹ ದೇಶದಲ್ಲಿ ಎಲ್ಲರೂ ಸಹೋದರತ್ವದ ಭಾವನೆಯಿಂದ ಬಾಳಬೇಕು’ ಎಂದು ನುಡಿದರು.
‘ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ವಿದ್ಯೆಗಿಂತ ಸಂಸ್ಕಾರ ಕಲಿಸುವುದು ಬಹುಮುಖ್ಯ. ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ಸಂಸ್ಕಾರ ನೀಡಬೇಕು. ಆಧ್ಯಾತ್ಮ, ಗುರು ಹಿರಿಯರಿಗೆ ಗೌರವ, ಜ್ಞಾನಕ್ಕೆ ಪೆÇ್ರೀತ್ಸಾಹ ನೀಡಬೇಕು’ ಎಂದು ತಿಳಿಸಿದರು.
ಮೊದಲಿಗೆ ಗ್ರಾಮದ ಮುಖ್ಯ ದ್ವಾರದಿಂದ ಶ್ರೀಗಳನ್ನು ಮೆರವಣಿಗೆ ಮೂಲಕ ಭವಾನಿ ದೇವಸ್ಥಾನದವರೆಗೆ ಕರೆತರಲಾಯಿತು. ನಂತರ ಪೂಜ್ಯರು ಭವಾನಿ ಮಾತೆಗೆ ಪೂಜ್ಯ ಸಲ್ಲಿಸಿದರು.
ಜೈ ಭವಾನಿ ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಮಧಗೊಂಡ, ನಾಗರಾಜ ವಸ್ತುರಗೆ, ಶಿವಕುಮಾರ ಮಾಕಾಜೆ, ಮಹಾಂತೇಶ ಘನಚಕ್ರೆ, ಶ್ರೀನಿವಾಸ ಹುಣಜೆ, ನೀಲಮ್ಮ ಮಾರುತಿ ನಂಜವಾಡೆ, ಗೋರಖನಾಥ ಘನಚಕ್ರೆ ಇದ್ದರು.