ದೇವರ ದಾಸಿಮಯ್ಯ ಜಯಂತಿ

ಬಳ್ಳಾರಿ,ಏ.17: ನಗರದ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಕೋವಿಡ್ ಹಿನ್ಬಲೆಯಲ್ಲಿ ಸರಳವಾಗಿ ವಚನಕಾರ ದೇವರ ದಾಸಿಮಯ್ಯ ಅವರ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ಕೆ.ರಂಗಣ್ಣನವರ್, ನೇಕಾರರ ಒಕ್ಕೂಟದ ಮುಖಂಡರಾದ ಶೀಲಬ್ರಹ್ಮಯ್ಯ, ಸುರೇಶ್, ನರೇಂದ್ರ ಕುಮಾರ್ ಮೊದಲಾದವರು ಇದ್ದರು.