ದೇವರ ದಾಸಿಮಯ್ಯ ಜಯಂತಿ ಸರಳ ಆಚರಣೆ

ಬಾಗಲಕೋಟೆ,ಏ.18 : ಜಿಲ್ಲಾಡಳಿತದ ವತಿಯಿಂದ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜಯಂತಿಯನ್ನು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಅವರು ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪುಷ್ಪ ಅರ್ಪಿಸುವ ಮೂಲಕ ದಾಸಿಮಯ್ಯನವರ ಆದರ್ಶಪ್ರಾಯ ಬದುಕನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಸಮುದಾಯದ ಮುಖಂಡರಾದ ಡಾ.ಎಂ.ಎಸ್.ದಡ್ಡೇನವರ, ಮುರುಗೆಪ್ಪ ನಾರಾ, ಮಲ್ಲಿಕಾರ್ಜುನ ಹಂಡಿ, ಗೋವಿಂದ ಬಳ್ಳಾರಿ, ರವೀಂದ್ರ ಕಲಬುರ್ಗಿ, ವೀರಪ್ಪ ಶಿರಿಗಣ್ಣವರ, ಡಾ.ಮರೆಗುದ್ದಿ, ಮಲ್ಲು ರೋಣದ, ಮಲ್ಲು ರೋಣದ, ಸುರೇಶ ಹವಳಕೋಡ, ಅಮರೇಶ ಕೊಳ್ಳಿ, ಭಾಗ್ಯಾ ಹಂಡಿ, ಅನಿತಾ ಸರೋದೆ, ಲಕ್ಷ್ಮೀ ಗೌಡರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಹೇಮಾವತಿ ಎನ್. ಸ್ವಾಗತಿಸಿದರೆ, ಕೊನೆಗೆ ಶ್ರೀನಿವಾಸ ಬಳ್ಳಾರಿ ವಂದಿಸಿದರು.