ದೇವರ ದಾಸಿಮಯ್ಯ ಕನ್ನಡದ ಮೊದಲ ವಚನಕಾರ

ಮಾಲೂರು.ಏ.೩-ದೇವರ ದಾಸಿಮಯ್ಯ ಕನ್ನಡದ ಮೊದಲ ವಚನಕಾರರಾಗಿದ್ದು,ಹತ್ತನೇ ಶತಮಾನದಲ್ಲಿಆಧ್ಯಾತ್ಮೀಕ ಮತ್ತು ಬೌದ್ದಿಕ ಮಾತುಗಳಿಗೆ ವಚನಗಳ ಮೂಲಕ ಶಕ್ತಿ ತುಂಬಿದವರುಎಂದು ತಹಸೀಲ್ದಾರ್ ಮಂಜುನಾಥ್ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿಕೋರೋನಾ ಹಿನ್ನೆಲೆಯಲ್ಲಿದೇವರ ದಾಸಿಮಯ್ಯ ಜಯಂತಿಯನ್ನು ಸರಳವಾಗಿ ಆಚರಿಸಿ ಮಾತನಾಡಿದಅವರು ಸಾಹಿತ್ಯಕ್ರಾಂತಿಗೆ ಮೂಲ ಪುರುಷರಾಗಿದ್ದದೇವರ ದಾಸಿಮಯ್ಯ ವೇದ ಉಪನಿಷತ್ತು ಆಳವಡಿಸಿಕೊಂಡಿದ್ದರು ಎಂದರು.ದೇವರ ದಾಸಿಮಯ್ಯ ರಾಮನಾಥ್ ಎಂಬ ಅಂಕಿತ ನಾಮದೊಂದಿಗೆ ವಚನ ರಚಿಸಿದ ದಾಸಿಮಯ್ಯ ಅವರು ನೇಕಾರ ಸಮುದಾಯದ ಮೂಲ ಪುರುಷರಾಗಿದ್ದರುಎಂದರು.ಸಮಾಜ ಸುಧಾರಣೆ ಹಾಗೂ ಆಧ್ಯಾತ್ಮ ಬೌದ್ದಿಕತೆತಮ್ಮದೇಆದಕೊಡುಗೆಯನ್ನು ನೀಡಿರುವದೇವರ ದಾಸಿಮಯ್ಯ ಅವರು ಸನ್ಯಾಸಿಯಲ್ಲದೆ ದಾಂಪತ್ಯದಲ್ಲಿದ್ದು ಮೋಕ್ಷವನ್ನು ಪಡೆಯಬಹುದುಎಂಬುದನ್ನು ದಾಸಿಮಯ್ಯ ದಂಪತಿಗಳು ಜಗತ್ತಿಗೆ ತೋರಿಸಿಕೊಟ್ಟವರು ಎಂದರು.ಅವರ ಆದರ್ಶಗಳು ಉನ್ನತ ಸಮಾಜಕ್ಕೆದಾರಿದೀಪವಾಗಿದೆ ಎಂದರು.ಶಿರಸ್ತೆದಾರ ಜಗನ್ನಾಥ್,ಕಂದಾಯಾಧಿಕಾರಿ ಲೋಕೇಶ್,ಬಿಇಓ ಕೃಷ್ಣಮೂರ್ತಿ,ಎ.ಪಿ.ಎಂ.ಸಿ.ಅಧ್ಯಕ್ಷ ಶ್ರೀನಿವಾಸ ರೆಡ್ಡಿ,ನೇಕಾರ ಸಮುದಾಯವರಿದ್ದರು.