ದೇವರ ದಾಸಿಮಯ್ಯ ಆದ್ಯ ವಚನ ಪಿತಾಮಹ; ಯಳಸಂಗಿ

ವಾಡಿ:ಎ.19: ಕನ್ನಡ ನಾಡಿನಲ್ಲಿ 11ನೇ ಶತಮಾನದಲ್ಲಿ ಆಗಿ ಹೋದ ಶರಣರಲ್ಲಿ ದೇವರ ದಾಸಿಮಯ್ಯನವರು ಪ್ರಮುಖರು ಅವರು ಆದ್ಯ ವಚನÀ ಪಿತಾಮಹನಾಗಿದ್ದು, ಶರಣ ಸಂಪ್ರದಾಯದಲ್ಲಿ ಮೊದಲಿಗರು ಎಂದು ಪುರಸಭೆ ಹಿರಿಯ ಸಹಾಯಕ ಮಲ್ಲಿಕಾರ್ಜುನ ಯಳಸಂಗಿ ಹೇಳಿದರು.

ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಲಾದ ಶರಣ ದೇವರ ದಾಸಿಮಯ್ಯ ಅವರ ಜಯಂತೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ದೇವರ ದಾಸಿಮಯ್ಯನವರು ಒಬ್ಬ ಐತಿಹಾಸಿಕ ಪುರುಷನೆಂಬುದಕ್ಕೆ ಶಿಲಾ ಶಾಸನಗಳೇ ಬಲವಾದ ಕುರುಹುಗಳಾಗಿವೆ, ದಾಸಿಮಯ್ಯನವರು ನೇಯ್ಗೆಯ ಕಾಯಕವನ್ನು ಮಾಡಿ ಅನೇಕ ಜೀವಪರ ಕೆಲಸಗಳನ್ನು ಮಾಡಿದ್ದಾರೆ.

ಸಮುದಾಯ ಸಂಘಟನಾಧಿಕಾರಿ ಕಾಶಿನಾಥ ಧನ್ನಿ ಮಾತನಾಡಿ, ‘ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ? ಕಡೆಗೀಲು ಬಂಡಿಗಾಧಾರ. ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ! ರಾಮನಾಥ.’ ಎಂಬ ಅರ್ಥಪೂರ್ಣ ವಚನಗಳ ಮೂಲಕವೇ ಸಮಾಜವನ್ನು ಜಾಗೃತಿ ಮಾಡಿದರು ಎಂದರು.

ದೇವರ ದಾಸಿಮಯ್ಯನವರ ವಚನಗಳನ್ನು ರಚಿಸಿರುವವರಲ್ಲಿ ಮೊದಲಿಗರಾದರೂ ಸಹ ಅವರ ವಚನಗಳು ಯಾರಿಗೂ ತಿಳಿದಿಲ್ಲ. ನಂತರ ಬಂದ ಎಲ್ಲಾ ಶರಣರೂ, ಸಾಧು ಸಂತರೂ ರಚಿಸಿದ ವಚನಗಳು ಬಳಕೆಗೆ ಮತ್ತು ಬೆಳಕಿಗೂ ಬಂದವು. ದಾಸಿಮಯ್ಯನವರನ್ನು ದೇವರ ದಾಸಿಮಯ್ಯ, ದೇವಲ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ. ಅವರ ಬಗ್ಗೆ ಹೆಚ್ಚು ಹೆಚ್ಚು ಸಂಶೋಧನೆ ನಡೆಯಬೇಕು ಎಂದರು.

ಪುರಸಭೆ ಅಧ್ಯಕ್ಷೆ ಜರಿನಾ ಬೇಗಂ, ಮಾಜಿ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ್, ಮೊಹಮ್ಮದ್ ಗೌಸ್, ದೇವಿಂದ್ರ ಕರದಳ್ಳಿ, ಕಂದಾಯ ಅಧಿಕಾರಿ ಪಂಕಜಾ, ವಿಠ್ಠಲ ಸಿಂಗ್ ಠಾಕೂರ್, ಈಶ್ವರ ಅಂಬೇಕರ್, ಕೆ. ವಿರುಪಾಕ್ಷಿ, ಜ್ಯೋತಿ, ರಾಹುಲ ಹುಗ್ಗೆ, ಬಸವರಾಜ ಪೂಜಾರಿ, ಗಣೇಶÀ ಶಿಂಧೆ, ನಾಗೇಂದ್ರ ರವಿ ನಿಂಗಬೊ, ಪ್ರಭು ಚವ್ಹಾಣ ಇದ್ದರು