
ಕಲಬುರಗಿ,ಮಾ 2:ನಾಡಿನ ಅನೇಕ ಜಾಗಗಳಲ್ಲಿ ಜನ ಪೂಜಿಸದ ದೇವರ ಪಟ( ಫೆÇೀಟೋ)ಗಳನ್ನು ಎಲ್ಲೆಂದರಲ್ಲಿ ಬಿಸಾಡುವ ಪ್ರವೃತ್ತಿಯನ್ನು ನೀವು ನೋಡೇ ಇದ್ದೀರಿ. ಕಳೆದ ಅನೇಕ ವರ್ಷಗಳಿಂದ ‘ಕಣಕಣದಲ್ಲೂ ಶಿವ’ ಎಂಬ ದೇವರ ಪಟ( ಚಿತ್ರ) ವಿಲೇವಾರಿ ಕಾರ್ಯವನ್ನು ಯುವ ಬ್ರಿಗೇಡ್ ಮಾಡಿಕೊಂಡು ಬಂದಿದೆ. ಕಲಬುರಗಿ ಜಿಲ್ಲೆ ಅಫಜಲಪುರದಲ್ಲಿ ಮತ್ತೊಮ್ಮೆ ಬೃಹತ್ತಾದ ಯೋಜನೆಯನ್ನು ಯುವ ಬ್ರಿಗೇಡ್ ಕೈಗೆತ್ತಿಕೊಂಡಿದೆ. ಮಾ.1 ರಿಂದ ಆರಂಭಗೊಂಡ ಅಭಿಯಾನ 5 ರವರೆಗೆ ನಡೆಯಲಿದೆ.ಮಾ.5 ರಂದು ಅಫಜಲಪುರ ತಾಲೂಕಿನ ಘತ್ತರಗಿ ಭಾಗ್ಯವಂತಿ ದೇವಸ್ಥಾನ ಮತ್ತು ಸ್ನಾನಘಟ್ಟದಲ್ಲಿ ಬೆಳಿಗ್ಗೆ 8 ರಿಂದ ಅಭಿಯಾನ ನಡೆಯಲಿದೆ.
ನೀವು ಎಲ್ಲಿಯದರೂ ಇಂತಹ ದೇವರ ಫೆÇೀಟೋಗಳನ್ನು ಕಂಡರೆ ನಮಗೆ ತಂದೊಪ್ಪಿಸಿ ಅಥವಾ ಕರೆಮಾಡಿ ಯುವಾಬ್ರಿಗೇಡ್ ಕಾರ್ಯಾಲಯಕ್ಕೆ ತಲುಪಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಸಂಪರ್ಕ – (6360118275)