ದೇವರ ಕನಸು ಟ್ರೈಲರ್ ಬಿಡುಗಡೆ

ಸುರೇಶ್ ಲಕ್ಕೂರ್ ನಿರ್ದೇಶಿಸಿರುವ “ದೇವರ ಕನಸು” ಚಿತ್ರದ ಟ್ರೇಲರ್ ಅನ್ನು ಪಿಆರ್‍ಕೆ ಸಂಸ್ಥೆಯ ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.ಪಿ.ಆರ್.ಕೆ ಸಂಸ್ಥೆ ಮೂಲಕ ಹಾಡುಗಳು ಬಿಡುಗಡೆಯಾಗಿದೆ.

ಈ ವೇಳೆ ಮಾತಿಗಿಳಿದ ನಿರ್ದೇಶಕ ಸುರೇಶ್ ಲಕ್ಕೂರ್, “ದೇವರ ಕನಸು” ಮೊದಲ ಚಿತ್ರ. ಮಕ್ಕಳ ಚಿತ್ರ ಈಗಾಗಲೇ ಪ್ರತಿಷ್ಠಿತ ಕಾನ್ಸ್ ಫಿಲಂ ಫೆಸ್ಟಿವಲ್ ಸೇರಿದಂತೆ ಅನೇಕ ಫಿಲಂ ಫೆಸ್ಟಿವಲ್ ಗಳಲ್ಲಿ ಪ್ರದರ್ಶನವಾಗಿ ಪ್ರಶಂಸೆ ಪಡೆದುಕೊಂಡಿದೆ. “ದೇವ” ಎನ್ನುವುದು ಚಿತ್ರದ ಮುಖ್ಯ ಪಾತ್ರಧಾರಿಯ ಹೆಸರು. ಪಾತ್ರದಲ್ಲಿ ಮಾಸ್ಟರ್ ದೀಪಕ್ ಅಭಿನಯಿಸಿದ್ದಾರೆ. ಹುಡುಗ ಕಾಣುವ ಕನಸು ಈಡೇರುವುದೊ ಅಥವಾ ಇಲ್ಲವೋ ಎನ್ನುವುದು ಚಿತ್ರದ ಕಥಾಹಂದರ ಎಂದರು.

ದೀಪಕ್, ಅಮೂಲ್ಯ, ಋಷಿ ವೇದಿಕ ಹಾಗೂ ಮಾಕ್ ಮಣಿ ಚಿತ್ರದ ಪ್ರಮುಖಪಾತ್ರಗಳಲ್ಲಿ ನಟಿಸಿದ್ದಾರೆ.ಇದೇ 21ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ ಸಹಕಾರವಿರಲಿ ಎಂದು ಕೇಳಿಕೊಂಡರು

ನಿರ್ಮಾಪಕರಾದ ಜಯ್ ಕುಮಾರ್,  ಶೇಖರ್, ಕಥೆ ಬರೆದಿರುವ ಸುನೀಲ್ ರಾಮ್, ಹಾಡುಗಳು ಹಾಗೂ ಸಂಭಾಷಣೆ ರಚಿಸಿರುವ ಲಿಂಗರಾಜ್ ಇತಿಹಾಸ, ಸಂಗೀತ ನಿರ್ದೇಶಕ ಸ್ಯಾಂಡಿ ಹಾಗೂ ಚಿತ್ರದಲ್ಲಿ ನಟಿಸಿರುವ ಮಾಸ್ಟರ್ ದೀಪಕ್, ಬೇಬಿ ಅಮೂಲ್ಯ, ಅಋಷಿ ವೇದಿಕ, ಮಾಕ್ ಮಣಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.